ಬಾರಮ್ಮಾ ಶ್ರೀಗುರು ಜನನೀ | ಘನಕರುಣೀ |
ಬಾರ ನಿಜ ಸುಖ ದಾನೀ ಪ
ಭವದಾಟವ ಕೇರಿಯೊಳು ಹೋಗಿ | ಮನಮರವಾಗಿ |
ಪರಿ ಬಲು ಪಾಡಿದೆ | ಬಂದೇ ತವಕದಿ ಓಡಿ 1
ಬೋಧದ ಸ್ತನಪಾನ ಮಾಡಿಸೇ | ಸುಧೆ ಉಣಿಸೇ |
ತಾಪ | ಬಾಧೆಯ ಬಿಡಿಸೇ |
ನಿನ್ನುದರೊಳಗಿರಿಸೇ 2
ಭಕುತಿ ತೊಟ್ಟಿಲವನ್ನು ತೂಗಿಸೀ | ಯನ್ನ ಕೂಡಿಸೀ |
ಪಾಡುತಖಿಲೇಶ ನಾಮಾ |
ಬಾಲಕಗ ಮಹಿಪಮ್ಮ 3