ಜಯದೇವ ಜಯದೇವ ಜಯಗೋಪಾಲಕೃಷ್ಣಾ |
ಜಯ ಜಯಯೋಗೀ ಮಾನಸ ಮೋಹನ ಘನಕರುಣಾ ಪ
ದೇವಕಿವಸುದೇವರ ಭಾವನೆ ಪೂರಿಸಲಿ |
ಶ್ರಾವಣ ಕೃಷ್ಣಪಕ್ಷದ ಅಷ್ಟಮಿರೋಹಿಣಿಲಿ ||
ತೀವಿದ ಚಂದ್ರೋದಯ ರಾತ್ರಿಯ ಕಾಲದಲಿ |
ಭುವನದಿ ಅವತಾರವ ಮಾಡಿದೆನೀ ವೇಗದಲಿ 1
ಸೊಕ್ಕಿದ ಕಂಸನ ಕೊಂದು ದುಷ್ಕ್ರತನಾಶನವಾ |
ಮುಖ್ಯಮಾಡು ಕಾರಣ ಧರ್ಮ ಸ್ಥಾಪನವಾ ||
ಸಖ್ಯದಿ ಕಟ್ಟಲು ಉಗ್ರಶೇನಗೆ ಪಟ್ಟವಾ |
ಅಕ್ಕರದಿಂದಲಿ ಬೆಳೆದೆ ಗೋಕುಲದಲಿ ದೇವಾ 2
ಕುರುಕುಲಾನ್ವಯ ಜೀವನರೆಲ್ಲರ ಸೆಬಡಿದೆ |
ಚರಣವನಂಬಿದ ಪಾಂಡವರನು ಸ್ಥಾಪನಗೈದೆ |
ಪರಪರಿಯಿಂದಲಿ ಭಜಿಸುವ ಭಕ್ತಾವಳಿ ಪೊರೆದೇ |
ಗುರುವರಮಹೀಪತಿ ಸುತ ಪ್ರಭುಸಲಹೆನ್ನನು ಬಿಡದೇ 3