ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

--------------ಹರಿಯೇ ಪ ಮುನ್ನ ಘಣಿಯಲಿ ಬರದದಕಿನ್ನಾ ಅತಿಶಯೇನುಂಟು ನಿನ್ನ ಚಿತ್ತಕೆ ಬಂದಂತೆ ಮಾಡುವುದೆಲ್ಲಾ 1 ಎನ್ನ ದುಷ್ಕರ್ಮಯೋಗ ಬೆನ್ಹತ್ತಿ ಕಾಡುತಿರಲು ಇನ್ನೀ ಅನುಭವ-----ನಾ------ನಿರುವದೆಲ್ಲಾ2 ಕರ್ಮಕೆ ಸಾಕ್ಷಿ ಭೂತ ಕಾರಣ ಕರ್ತನಾಗಿ ಧರ್ಮವೇ ಎನ್ನ ದುಷ್ಕರ್ಮ ಇದ್ದಾನಂ---ನೆಲ್ಲಾ 3 ಎಷ್ಟು ಹೇಳಲಿ ಎನ್ನದೃಷ್ಟವ ಕಳಿಯಲಾಪೆ ಸೃಷ್ಟಿರಕ್ಷನಾದ ಕೃಷ್ಣಾಮೂರುತಿ ದೇವಾ 4 ಬಲ್ಲೀದ ನೀನು ಎಲ್ಲಿ ಬಡವನು ನಾನು ಎಲ್ಲಿ ನಲ್ಲ “ಹೆನ್ನವಿಠ್ಠಲ” ಮಹಾನುಭಾವ 5
--------------
ಹೆನ್ನೆರಂಗದಾಸರು
ಕಂಡದ್ದು ಬಯಸಿ ಕಂಗೆಡು ಬೇಡಾ ಪಾದ ಬಿಡಬೇಡಾ ಪ ಕಾಲನಿನ್ನದಲ್ಲ ಕಡುಮೂರ್ಖ ಆ ಕಾಲ ಪುರುಷ ಮಾಡಿದನೇಕಾ ಪರಿಗಳಿಂದ ಇನ್ನು ಯಾಲೋಕಾದಲಿ ನಡುವುದಲ್ಲಾ ಸುಖದು:ಖ ಪಾಲಿಗೆ ಬಂದದ್ದು ಬಿಡದನಕಾ ಪ್ರಾಪ್ತಿ ಇದ್ದಷ್ಟೇ ಇಲ್ಲಧಿಕಾ ಶ್ರೀಲೋಲನ ನೀನಿರುವತನಕಾ ಸ್ಮರಿಸದೆ ಇರಬೇಡ ಅವಿವೇಕಾ 1 ಘಣಿಯಲ್ಲಿ ಬರದದ್ದು ತಪ್ಪದಲ್ಲೆ ಜಗ ಭಗವಂತ ನೀ ಮಾಡಿದಲ್ಲೆ--- -------- ನಿನ್ನದಲ್ಲೆ ಅನುಗ್ರಹ ಮಾಡುವ ಭರದಲ್ಲೆ ನಗಧರನಾ ನಾಮ ಬಲದಲ್ಲೆ ಅಘಗಳ ಕಳಿ ನೀ ತೀವ್ರದಲ್ಲೆ 2 ಇಷ್ಟಾರ್ಥ ನೀ ಮಾಡಬೇಕಂದಿ ಸಂಚಿತ ಎಲ್ಲೆಂದಿ ಕಷ್ಟವ ಪಡಕೊಂಡು ನೀ ಬಂದಿ ಕಾಮಕೆ ಸುಖವು ಇಲ್ಲೆಂದಿ ಇಷ್ಟದಿ ಶ್ರೀ ಹರಿ ಪದಹೊಂದಿ ಇರದೆ ನೀ ಇರಬೇಡಾ ಇಬ್ಬಂದಿ ಸ್ಪಷ್ಟದಿ 'ಹೊನ್ನಯ್ಯ ವಿಠ್ಠಲಂದಿ’ ಸಾರ್ವದಿ ಮುಂದಕ ನೀ ಬಂದಿ3
--------------
ಹೆನ್ನೆರಂಗದಾಸರು
ವ್ಯರ್ಥ ಹೋರಾಟವಲ್ಲದೆ ಇದು ನಿಜವಲ್ಲಾ ಕರ್ತೃ ಶ್ರೀಹರಿ ಮಾಡಿದರ್ಥವೆ ಸರಿ ಅಲ್ಲದೆ ಪ ಪುರಾಕೃತ ಸಂಚಿತಾರ್ಥ ಪುಣ್ಯ ಪಾಪಗಳಿಂದ ಪರಿ ಅನುಭವ ಬಡುತಾ ಇನ್ನೂ ಇರುವೆಯಲ್ಲದೆ ಘಣಿಯಲಿ ವಿರಂಚಿ ಬರೆದ ಭಂಗ ಬಡುತಲಿಷ್ಟು 1 ಎಂದೆಂದೂ ನಿನ್ನ ಹಿಂದೆ ಒಂದೂ ಬರುವುದಿಲ್ಲ ಮುಂದುಗಾಣದೆ ಇನ್ನು ಮೋಹಕೆ ಸಿಲುಕಿ ನಂದೆಂದು ಪರಿಯಿಂದ ಘಳಿಸಿದ ದ್ರವ್ಯದ ಬಿಂದಿಗೆ ದಾರೋ ನೀದಾರೋ ಪಾಮರ ಮೂಢಾ 2 ನನ್ನ ಹೆಂಡತಿ ಮಕ್ಕಳು ನನ್ನ ಮನೆ ಬಾಗಿಲು ನನ್ನ----ಯು ವೃತ್ತಿ ನನ್ನದೆಂದೂ ನಿತ್ಯ ಒಂದಾಡುವೆ ನೀದಾರೋ ಮೂಢಾ 3 ತಂದೆ ತಾಯಿಯ ಗರ್ಭದಿಂದ ಪುಟ್ಟಿರುವಂದೇ ತಂದೆಲ್ಲೊ ತಾಯೆಲ್ಲೊ ತಾನೆಲ್ಲೊ ಮರುಳೆ ಹಿಂದೆ ಆದವರ ಚರ್ಯವ ವಿವರಿಸಿ ನೋಡಿನೋಡಿ ಕುಂದು ಇಲ್ಲದೆ ಮುಕ್ಕುಂದನ ಸ್ಮರಿಸು ಗಾಢಾ 4 ಮಾಯಾ ಪ್ರಪಂಚದೋಳ್ ಮಗ್ನನಾಗಿ ಇನ್ನು ಕಾಯಾ ಅಸ್ಥಿರವೆಂದು ಕಾಣೋ----- ಶ್ರೀಯರಸ 'ಹೆನ್ನ ವಿಠ್ಠಲ’ರಾಯನ ಕರ್ಮ ಧ್ಯಾನವು ಬಿಟ್ಟು 5
--------------
ಹೆನ್ನೆರಂಗದಾಸರು
ಏನುಚೋದ್ಯಶ್ರೀನಿಧೆಹರಿಮಾನಿನಿಶ್ರೀದೇವಿ ಭೂದೇವಿರಮಣಪಸೃಷ್ಟಿಕರ್ತನೆಂದು ಪೇಳ್ವರು ಪಾಂಡವರ ಮನೆಯಬಿಟ್ಟಿ ಬಂಡಿಬೋವನೆಂಬೋರು ಪಾಂಚಾಲಿಗೆ ಒದಗಿದಕಷ್ಟಕಳೆದÀು ಪೊರೆದನೆಂಬೊರೊಕೆಟ್ಟದಾನವರ ಅಟ್ಟುಳಿಯ ಕಳೆದುದುಷ್ಟಕಂಸನವಧೆಯ ಸ್ಪಷ್ಟ ಪೇಳುತಿಹರೊ 1ಗಜನ ಸಲಹಿ ಪೊರೆದನೆಂಬೊರೊ ನೆಗಳೆಯನು ಸೀಳಿತ್ರಿಜಗದೊಡೆಯ ಶ್ರೀಶನೆಂಬೊರೊ ಪ್ರಹ್ಲಾದ ಧೃವಗೆನಿಜಸೌಭಾಗ್ಯ ಇತ್ತೆ ಎಂಬೊರೊವಿಜಯಸಾರಥಿಯ ವಿಶ್ವರೂಪ ತೋರಿಸುಜನರನ್ನು ಪೊರೆದ ನಿಜವ ಪೇಳುತಿಹರು 2ವತ್ಸಾಸುರನ ಮಡುಹಿದೆಂಬೊರೊ ಅಡವಿಯಲಿ ಕಾಡ-ಕಿಚ್ಚನುಂಗಿ ಬೆಳೆದಿ ಎಂಬೊರೊ ತಾಯಿಗೆ ಬಾಯೋಳಹೆಚ್ಚಿನ್ವಿಷಯ ತೋರ್ದಿ ಎಂಬೊರೊಕಚ್ಚ ಬಂದ ಘಣಿಯ ಮೆಟ್ಟಿ ತುಳಿದು ಜಲವಸ್ವಚ್ಛಗೈದನೆಂದಾಶ್ಚರ್ಯ ಪೇಳುತಿಹರೊ 3ಕರಡಿ ಮಗಳು ಮಡದಿಯೆಂಬೊರೊ ಪುಷ್ಪವನು ತರಲುತೆರಳಿ ಯುದ್ಧ ಮಾಡ್ದನೆಂಬೊರೊ ದೇವೇಂದ್ರನ ಗೆಲಲುತರುಣಿ ಸಮರಗೈದಳೆಂಬೊರೊಮುರಳಿನಾದದಿಂದ ತರುಣಿಯರ ಮನವಮರುಳುಗೈದನೆಂದು ಪರಿಪರಿ ಪೇಳುವರೊ 4ಕೆಟ್ಟದ್ವಿಜನ ಪೊರೆದಿ ಎಂಬೊರೋ ವನವನವ ಚರಿಸಿಸುಟ್ಟ ದಾಸಗೊಲಿದೆ ಎಂಬೊರೋ ಒಪ್ಪಿಡಿಯ ಗ್ರಾಸವಕೊಟ್ಟದ್ವಿಜನ ಪೊರೆದಿಯೆಂಬೊರೊಅಟ್ಟಹಾಸದಿ ತಂದ ರುಕ್ಮಿಣಿಯ ತನ್ನಪಟ್ಟದರಸಿಯೆಂದು ಸ್ಪಷ್ಟ ಪೇಳುತಿಹರೊ 5ಶಿಲೆಯ ಸತಿಯಗೈದನೆಂಬರೊ ಅಡವಿಗಳ ಚರಿಸಿಬಲುಕಪಿಗಳ ಕೂಡ್ದನೆಂಬೊರೊ ಭಯ ಭಕ್ತಿಗೆ ಮೆಚ್ಚಿಫಲದ ಎಂಜಲ ಸವಿದನೆಂಬೊರೊ ಮೆಚ್ಚಿಸುಲಭದಿಂದ ದೈತ್ಯಕುಲವನೆಲ್ಲ ಸವರಿಛಲದ ದಶಶಿರನ ವಧೆಯ ಪೇಳುತಿಹರೊ 6ಪುಟ್ಟಬ್ರಹ್ಮಚಾರಿ ಎಂಬೋರೊ ಬಲಿರಾಜನ ಬೇಡಿಕೊಟ್ಟದಾನ ಕೊಂಡನೆಂಬೋರೊ ಈರಡಿಯನಳೆದುಮೆಟ್ಟಿ ಸಿರವ ತುಳಿದನೆಂಬೋರೊಎಷ್ಟು ಪೇಳಲಿ ನಿನ್ನ ಶ್ರೇಷ್ಠಗುಣಗಳನ್ನುದಿಟ್ಟ ಕಮಲನಾಭ ವಿಠ್ಠಲ ಸರ್ವೇಶ 7
--------------
ನಿಡಗುರುಕಿ ಜೀವೂಬಾಯಿ
ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.ಆದರಣೆಯಿಲ್ಲದೂಟ ಅಮೃತಾನ್ನವಾದರೇನುವಾದಿಸುವಸತಿ - ಸುತರಿದ್ದು ಫಲವೇನು ?ಕ್ರೋಧ ಬಳೆಸುವ ಸಹೋದರರು ಇದ್ದರೇನುಮಾದಿಗರ ಮನೆಯೊಳೆ ಮದುವೆಯಾದರೇನು ? 1ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನುದೇವಾಂಕಿತವಿಲ್ಲದ ಕವಿತ್ವವೇನು ?ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನುಹಾವಿನ ಘಣಿಯೊಳಗೆ ಹಣವಿದ್ದರೇನು ? 2ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನುತನ್ನ ತಾನರಿಯದ ಜ್ಞಾನವೇನು ?ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? 3
--------------
ಪುರಂದರದಾಸರು