ಶ್ರೀನಿವಾಸ ಶ್ರೀಮನೋಲ್ಲಾಸ ಶ್ರೀನಿವಾಸ ಪ
ಶ್ರೀನಿವಾಸ ಶುಭಮಾಮವ ಗಾನಲೋಲಿತ ಸನ್ಮಾನಿತಲೀಲಾ ಅ.ಪ
ಭೂದೇವನಿವಹ ಸಂಭಾವಿತ ಭಾವ 1
ರಾಮರಾಮ ರಘುವಂಶ ಲಲಾಮ ರಾಮ ರಾಮ
ರಮ್ಯಗುಣಧಾಮ ಮುನಿಜನಪ್ರೇಮ ದನುಜಸಂಗ್ರಾಮಭೀಮ2
ಕಂಜನಾಭ ಕಾಲಾಂಬುಧಾಭಾ ಕಂಜನಾಭ ರಿಪು
ವಕ್ತ್ರ 3
ಸುಂದರಾಂಗ ಸುಕೃತಾಂತರಂಗ ಸುರಸುಂದರೀನಿಚಯ
ನಂದಗೋಕುಲಾನಂದ ಮುಕುಂದ 4
ಭವ್ಯರೂಪ ಭಕ್ತಾಲಯ ದೀಪ ಭವ್ಯರೂಪ ಧೃತ
ದಿವ್ಯಚಾಪ ಸುರಭಾವ್ಯಮಹಿಮ ಮಾಂಡವ್ಯಸುಸೇವ್ಯ 5
ವ್ಯಾಘ್ರಶೈಲಾವಾಸ ಸುಶೀಲಾಶೈಲಶಿಖ-
ರಾಗ್ರಲೋಲ ದೇವಾಗ್ರಗಣ್ಯ ಭಕ್ತಾಗ್ರ ಶರಣ್ಯ 6
ದುರಿತದೂರಾ ದುಃಖಾಭ್ರಸಮೀರಾ
ದುರಿತದೂರ ಘಣಿಗಿರಿವಿಹಾರ ಶ್ರೀವರದವಿಠಲಾ 7