ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೆಂದವ ನೋಡಿರೆ-ಗೋಕುಲಾ-|ನಂದನ ಮೂರುತಿಯ ಪಅಂದುಗೆಪಾಡಗ ಗೆಜ್ಜೆಯ ಧರಿಸಿ |ಧಿಂ ಧಿಂ ಧಿಮಿಕೆಂದು ಕುಣಿವ ಕೃಷ್ಣನ ಅ.ಪಕೊರಳ ಪದಕಹಾರ ಬಿಗಿದು |ತರಳರೆಲ್ಲರ ಕೂಡಿಕೊಂಡು ||ಕುರುಳುಗೂದಲ ಅರಳೆಲೆತಿಯು |ಮಿರು-ಮಿರುಗುತ ಮೆರೆವ ಕೃಷ್ಣನ 1ಉಡೆಯ ಗಂಟೆ ಘಣಘಣೆನುತ |ನುಡಿಯೆ ಮೆಲ್ಲನೆ ಪಿಡಿದುಕೊಂಡು ||ನಡೆದಾಡುತ ಸಡಗರದಲಿ |ಬೆಡಗ ಮಾಡಿ ಆಡುವ ರಂಗನ 2ಬಲುಬಲು ಆಶ್ಚರ್ಯದಿಂದ |ನಲಿವ ಪುರಂದರವಿಠಲರಾಯ ||ಹಲವು ಸುಖವ ನಮಗೆ ಇತ್ತ |ಜಲಜಲೋಚನಬಾಲಕೃಷ್ಣನ3
--------------
ಪುರಂದರದಾಸರು