ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ
ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ.
ಪಾದ ದಾನವ
ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ 1
ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ
ಮನದೊಳಗಿಂಬುಗೊಳು ಕಮಲಾಂಬಕ 2
ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ
ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ 3
ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು
ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ 4
ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ
ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ 5
ಮುಳುಗಿಕೊಂಡಿಹ
ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ 6
ದೈತ್ಯನ ತರಿದು ಬಿಸುಟು ವಿ-
ಜನಿತ ಪವಿತ್ರ ಯಜ್ಞ ವರಾಹನೆ 7
ಘಡುಘಡಿಸಿ ಕಂಬದೊಳು ಬಂದ
ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ 8
ದಾನಕೊಂಡನಾನೆವನದಿ
ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ 9
ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ
ನೃಪರ ಕಡಿದ 10
ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ
ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ 11
ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ
ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ 12
ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ
ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ 13
ಸುಧೆಯನು ಕರೆದು ಶಿರದಲಿ
ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ 14
ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ
ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ 15
ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ
ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು 16
ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ-
ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ 17
ಬಳಲಿ ಕರ್ಮವ ಮಾಡಲಾರೆ
ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ 18
ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ
ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ 19