ಹಿಡಿಯಬೇಕು ಶ್ರೀ ಕೃಷ್ಣನ ತುಡುಗತನವ ಧ್ರುವ
ಕಡಿಯಗುಡದೆ ವೈವನು ಕೆನಿಮೊಸರ
ತುಡುಗತನವನು ಮಾಡುವ ಬಲು ಹೆಸರ
ಅಡಗಿಹ ಠಾವನೆ ತಾನುಸರ ಮಾಡಿ ತಾ ಕುಸರ 1
ಬಿಡಬಾರದು ಕಣ್ಣಿಲೆ ಕಟ್ಟಿ
ಬಿಡಿಸಿಕೊಂಬುವ ಇವ ಬಲು ಜಗಜೆಟ್ಟಿ
ಅಡಗಿಸಿಕೊಬೇಕು ಘಟ್ಟಿವಿಡಿದು ಮನಮುಟ್ಟಿ 2
ಸಾಧಿಸಿ ಸದ್ಗುರುದಯ ಕರುಣದಲಿ
ಭೇದಿಸಿ ಹಿಡಿಯೊ ಮಹಿಪತಿ ಸುಮನದಲಿ
ಒದಗಿಟ್ಟುಕೊ ನೀ ಹೃದಯದಲಿ ಇದೇ ನೋಡನುದಿನಲಿ 3