ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಟ್ಟನೋ ಆತಂಕಗಳನು ನಾ ಕೃಷ್ಣ ನಿನ್ನ ಕರುಣಾ ನಂಬಿ ಪ ಸೃಷ್ಟಿ ಸ್ಥಿತಿ ಲಯಾದಿ ಕರ್ತ ಅಷ್ಟವಿಭವಪೂರ್ಣ ನಿನ್ನ ಇಷ್ಟದಂತೆ ನಡೆಯುವುದೇ ಶ್ರೇಷ್ಠವೆಂಬೊ ಬುದ್ಧಿ ಬಂದು 1 ಬೆಟ್ಟದಂತೆ ಇದ್ದುದಲ್ಲಿ ಘಟ್ಟಿಮಂಜಿನಂತೆ ಕರಗಿ ಕಷ್ಟರಾಶಿಯೆಲ್ಲಾ ಸ್ವಪ್ನ ದೃಷ್ಟದಂತೆ ಆದಮೇಲೆ 2 ತಲೆಯಮೇಲೆ ಕೈಯ್ಯನಿಟ್ಟು ಇಳೆಯ ಮೋರೆ ಮಾಡಿ ನೊಂದು ನೆಲವ ಕಚ್ಚಿ ಬಿದ್ದರೇನು ಫಲವೊ ಧೀರಜನ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು