ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿಯೊ ಮನವೆ ನಿಜವಸ್ತು ಖೂನ ಅಳಿಯೊ ದೇಹ ನಾನೆಂಬುವಭಿಮಾನ ಹೊಳಿಯೊ ಸದ್ಗುರು ಪಾದದಲಿ ನೀ ಪೂರ್ಣ 1 ಹುಟ್ಟಿ ಬಂದೇನು ಪುಣ್ಯ ಪುರುಷಾರ್ಥ ಘಟ್ಟಿಗೊಳ್ಳದೆ ನಿಜ ಸುಹಿತಾರ್ಥ ನಿಷ್ಠೆ ಹಿಡಿಯದನ ಜನ್ಮ ವ್ಯರ್ಥ ಮುಟ್ಟಿ ತೋರುವ ಶ್ರೀ ಗುರು ಪರಮಾರ್ಥ 2 ಗುರ್ತು ತಿಳಿಯೊ ಜನುಮಕೆ ಬಂದ ಮ್ಯಾಲೆ ಮರೆತು ಮೈಮರೆವದೇನು ತಾ ಮೇಲೆ ಅರ್ತು ನಡೆವದು ನಿನಗೇನು ಸೋಲು ಕರ್ತು ಸದ್ಗುರು ಸ್ಮರಿಸೋ ಆವಾಗಲೂ 3 ಎಲ್ಲಾರಂಥ ತಾನಲ್ಲೊ ಗುರುನಾಥ ಸುಲ್ಲಭದಿಂದ ದೋರುವ ಸುಪಥ ಅಲ್ಲೆ ದೋರ್ವದು ಸಕಲ ಹಿತಾರ್ಥ ಬಲ್ಲ ಮಹಿಮರೆ ತಿಳಿವರೀ ಮಾತ 4 ಭಾಸುತದೆ ಭಾಸ್ಕರ ಕೋಟಿ ಕಿರಣ ಲೇಸಾಗಿ ಹೋಗೊ ಗುರುವಿಗೆ ಶರಣ ದಾಸಮಹಿಪತಿ ಸ್ವಾಮಿ ದೀನೋದ್ಧಾರಣ ಭಾಸಿ ಪಾಲಿಸುವ ತಾ ಸುಕರಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು