ಹರಿ ಗೋರಸ ಕುಡಿವುದು ನೋಡಿರೋ |ಪರಿ ಪರಿಯ ಸಂಭ್ರಮ ಮಾಡಿರೋ ಪ
ಕಾರಣ ಒರಳಲಿ ವೃತ್ತಿಗುಣದಿ ತಾ |ಇದ್ದು ಯಶೋದೆಯು ಕಟ್ಟಿರಿಸಿ ||ಸ್ತನವನುಣಿಸುತಿರಲು ನಿಜಕರ್ಮದ |ಬಲದಿ ಬಿಡಿಸಿಕೊಂಡಾಡುತಲಿ 1
ನಾ ನಾ ಎನುತಾಡುವಾ ಗೋಪಾಲರ |ನೆರೆಸುವರಂತೆ ಕುಣಿವುತಲಿ ||ನಾನಾ ದ್ವಾರಗಳಿಂದ ಧುಮುಕಿ |ಮುಚ್ಚಿದ ಮಡಿಕೆಗಳ ನೋಡುತಲಿ 2
ರಾಗ ಪೀಠದಲಿ ಮೋಹದ ಹೆಗಲಲಿ |ನಿಲ್ಲಲು ನೆಲವು ನಿಲುಕುತಿರಲು ||ಯೋಗ ರುಕ್ಮ ಘಟಿಯನಾ ಛೇದಿಸಿ |ವಿರತಿ ಗೊಲ್ಲತಿಗತಿ ಕಾಡುತಲಿ 3