ಹರಿಯೆ ಸಿರಿದೊರೆಯೆ
ಅರಿಯೆ ನಿನ್ಹೊರತನ್ಯರ ಪ
ಮೊರೆ ಹೊಕ್ಕಿರುವರ ದುರಿತಗಳ ಕಳೆವ ಅ.ಪ
ಸೂರ್ಯ ಪ್ರಕಾಶ ಕುಮುದಾಪ್ತಮಿತ ಭಾಸ
ನಾಟಕಾಧಾರ ಶ್ರೀಶ
ಹಾಟಕ ಗರ್ಭತಾತ ಅಖಿಲ ಸದ್ಗುಣೋಪೇತ 1
ಮರಳಿ ಮರಳಿ ಜನನ ಮರಣಗಳೈದುತ
ನರಕ ಸ್ವರ್ಗ ಭೂಲೋಕ ತಿರುಗಿ ಬಳಲುವವೋ 2
ಹಟದಿ ದುರ್ಮತಿಗಳಾರ್ಭಟಿಸುತಜ್ಞಾನದಿ
ಮಟ ಮಾಯದಿ ಚರಿಸಿ
ಘಟಿಪುದೇ ಗುರುರಾಮವಿಠಲ ನಿನ್ನಯ ಕರುಣ 3