ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನ ಲಂಪಟಗೆಲ್ಲಿಹುದು ಗುರುಕೃಪೆ ಜ್ಞಾನ ತನು ಲಂಪಟಗೆಲ್ಲಿಹುದು ತನ್ನೊಳು ಖೂನ ಧ್ರುವ ವಿಷಯ ಲಂಪಟಗೆಲ್ಲಿಹುದು ತಾ ವಿರಕ್ತಿಯು ದೆಸೆಗೆಟ್ಟವಗೆಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವಂಗೆಲ್ಲಿಹುದು ಋಷಿ ಭಕ್ತಿಯು 1 ಮರುಳಗುಂಟೆ ಅರುಹ ರಾಜಸನ್ಮಾನದ ತರಳಗುಂಟೆ ಭಯವು ಘಟಸರ್ಪದ ಮೃಗ ಜಲವೆಂಬುವದ ಸೂರಿಗೆ ಉಂಟೆ ಮಾತು ಚಾತುರ್ಯದ 2 ಕನಸ ಕಾಂಬುವಗೆಲ್ಲಿಹುದು ತಾನಿರುವ ಸ್ಥಾನ ಮನದಿಚ್ಛೆಲಿದ್ದವಗೆಲ್ಲಿಯ ಧ್ಯಾನ ದೀನ ಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳ್ಳದೆ ಜನ್ಮಕ ಬಂದದ್ದೇನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ಧ್ರುವ ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು 1 ತರಳಗುಂಟೆ ಭಯವು ಘಟಸರ್ಪದ ಎರಳೆಗುಂಟೆ ಖೂನ ಮೃಗಜಲವೆಂಬುವದ ಸೋರೆಗುಂಟೆ ಮಾತು ಚಾರ್ತುಯದ 2 ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ ಮನದಿಚ್ಛೆಯಿದ್ದವಗೆ ಎಲ್ಲಿ ಧ್ಯಾನ ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳದೆ ಜನ್ಮಕೆ ಬಂದಿದೇನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನ ಕ್ಲೇಶವ ಕೇಳೆ ಎನಗೆ ಮರುಕಪ ಎನ್ನ ಕ್ಲೇಶವ ನಿನಗೆ ತಿಳಿಸಬಹುದೆ ದೇವ ಅ.ಪ ಹದಿನಾಲ್ಕು ಲೋಕಗಳ ಹುಡುಗತನದಲಿ ಪಡೆದು ಅದಕೆಲ್ಲ ಅನ್ನವೀಯುವ ಚಿಂತೆಯು ಹದಿನಾಲ್ಕು ಲೋಕಗಳ ಸರ್ವಕರ್ಮಗಳಿಗೂ ಹಗಲಿರುಳು ಪ್ರೇರಣೆಯ ಮಾಡುವಾತಂಕ 1 ಹಿರಿಮಗನದೊಂದುಸಿರ ತರಿದರೆಂಬಾತಂಕ ಕಿರಿಮಗನ ದೇಹ ಪೊಸಕಿದ ಚಿಂತೆಯು ಹರನು ಮೊಮ್ಮಗ ಹಾಲಾಹಲವ ಕುಡಿಯುತ ಹಲ್ಲು ಕಿರಿಯುವಾತಂಕಕ್ಕೆ ಹರವು ತೆರವಿಲ್ಲ 2 ಚಂಚಲಳು ಸತಿಯೆಂದು ಹೊಂಚು ಕಾಯುವ ಚಿಂತೆ ಮಂಚದಲಿ ಘಟಸರ್ಪ ವಿಷದ ಚಿಂತೆ ಸಂಚಿತಾಗಮ ಪ್ರಾರಭ್ಧಗಳನಳಿಸುವಗೆ ವಂಚಕರು ಏನು ಮಾಡುವರೆಂಬ ಚಿಂತೆ 3 ಹಲವು ವಿಧ ವೇಷಗಳ ತಾಳಿ ಜಗಂಗಳಲಿ ನೀ ತಲೆಯ ಮರಿಸಿಕೊಂಡರೇನು ಫಲವೊ ಬಳಸಿ ಹುಡುಕಿ ಗೂಢಚಾರಿ ಯೋಗಿಯು ನಿನ್ನ ತಿಳಿದು ಬೆಳಕಿಗೆ ತರುವ ಮರೆಮಾಚಲೇಕೊ 4 ತಾಪತ್ರಯ ತಳೆಯೆ ಗೋಪನಲಿ ಪುಟ್ಟಿದರು ಗೋಪಿಯರ ಸಾಸಿರದ ಗೋಳು ನಿನಗೆ ಭೂಪ ದಶರಥನ ಮಗನಾಗಿ ಪುಟ್ಟಿದರಯ್ಯೊ ಪಾಪ ಸತಿಯಳ ಕಳೆದುಕೊಂಡ ಬಲುಚಿಂತೆ 5 ನಿನ್ನ ಬೇಡುವುದಿಲ್ಲ ನಿನ್ನ ಕಾಡುವುದಿಲ್ಲ ನಿನ್ನ ನೋಡಲು ಎನಗೆ ಬೇಸರವು ಜಗಕೆ ನಿನ್ನ ಚಿಂತೆಯು ಮನ ಪ್ರಸನ್ನತೆ ನೀಡುವುದು ಇನ್ನೇನು ನಿನಗೆ ಚಿಂತೆಯೊ ತಿಳಿಸಿ ಪೊರೆಯೊ 6
--------------
ವಿದ್ಯಾಪ್ರಸನ್ನತೀರ್ಥರು
ಏನಾಯಿತೀ ಜನಕೆ ಮೌನವದು ಕವಿದಂತೆ |ಮಾನುಷ್ಯರಾಗಿ ಮರೆತರು ಹರಿಯನು ಪ.ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |ಬಾಲತನದಲಿ ಭೂತ ಹೊಡೆಯಿತೆ - ಕೆಳಗು - |ಮೇಲಿನ ತುಟಿ ಎರಡು ಒಂದಾಯಿತೇ -ಅವರ - |ಕಾಲಮೃತ್ಯು ಬಂದು ಕಂಗೆಡಿಸಿತೆ ? 1ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||ಹಟ ಹಿಡಿದ ಹೊಲೆಮನಸುಹರಿ ಎನ್ನಲಾರದೆ |ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? 2ಹರಿಯೆಂದರವರ ಶಿರ ಹರಿದು ಬೀಳುವುದೆ |ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? 3
--------------
ಪುರಂದರದಾಸರು