ನಂಬು ನರಮೃಗನಾ|ಮನುಜಾ|
ಅಂಬುಧಿವಾಸ ಶ್ರೀ ದೇವನಾ ಪ
ಕುಟಿಲ ಶಠಸುರನುಪಟಳ|ಘಟಿಸೆ
ಖಟಮ ನವ್ಯಾಟಪ್ತ ಬಾಯೆನೆ ಶರಣಾ|
ಖಟಖಠಾನೆಂದು ವಿಸ್ಫುಟವಾಗಿ|ಸ್ತಂಬ|
ಛಟಛಟಾನೆನೆ ಬ್ರಮ್ಹಾಂಡ |
ಘಟಪಟುವಂತೆ ಯಾರ್ಭಟದಿಂದಲೊಗೆದನಾ1
ಅರಿಯನರದವನ ಕರಳು ಸರಧರಿಸಿ|
ಭರದಿ ಪೊರೆದೆ ಡಂಗುರನಾ ಹರನಾ
ಗುರುಮಹೀಪತಿ ಪ್ರಭು ಚರಣಚರನೆನಿಸಿದ|
ಸ್ಮರಹರ ಅಜಸುರ ಪರರೊಡೆಯನಾ2