ಧೀಂಧೀಂಧೀಂಧಿಂ ಧೀರು |
ಮಜರೆ ಸಂಭ್ರಮದ | ಅಂದು ಶ್ರೀಕೃಷ್ಣ ರುಕ್ಮಿಣಿಯ ಪಾಣಿ |
ಗ್ರಹಣ | ದಿಂದ ದ್ವಾರಕೆಯ ಹುಗುವ ಸಮಯದಲಿ ಪ
ಚಪಳ ವಾಜಿಗಳು |
ಬೆರೆಬೆರೆದು ಕುಣಿವಾಟಾದಿಂದಾ ಇಡಿಯೇ | ತೆರೆಹಿಲ್ಲ |
ಸಿಂಧು ಗುರಿ ಪತಾಕೆಗಳ ಹೊಳೆವ |
ರೂಪಿಯೇ | ಮೆರೆವ ತಮ್ಮಟ ಭೇರಿನಾದ ಕಹಳೆಗಳಿಂದ |
ಹರಿಪದದಿ ಪ್ರತಿ ಶಬ್ದವು ನುಡಿಯೇ 1
ಭಟ್ಟರು ಗಾಯಕವಂದಿ ಬಿರುದು ಕೊಂಡಾಡು ತಲಿಹ | ನಟನೆ
ದಿವ್ಯಾಂಗ-ನೆಯರಾ ಮುಂದ | ಘಟನೇ ಪುಟುವೆರಸೀ
ಸ್ವಸ್ತಿ ವಚನಾದಿಂದ
ನಟನುಗ್ರಶೇನ ತಾಯಿ | ತಂದಿ ದಂಪತಿಗಳ ಕುಟಿಲೀರ್ವ
ಸಾಂಬ ಕೃತ
ವವರ್ಮನಾ | ರ್ಭಟೆಯ ಬಲರಾಮ ನೋಡನೀ ವೃಂದ 2
ಹೃದಯ ಮಧ್ಯದ ಪದಕದಂತೆ ಬರಿತಿಹ ನಡುವೆ ವಧು
ಇದಿರು ಗೊಂಬುವ ಸಂಭ್ರಮದ
ಪಟ್ಟಣದಲಾರು ತುದಿ ಮೊದಲ ಬಣ್ಣಿಸುವಾ ಸಿರಿಯಾ | ವದಗಿ
ಮುಂದಕ ಹೋಗಿ ಮಂಗಳಾರುತಿಗಳನು ಸುದತಿಯರು ತಂದೆ
ತ್ತಲು ತ್ವರಿಯು | ಮುದದಿಂದ ಗೃಹ ಪ್ರವೇಶವ ಮಾಡಿದನು
ಸರ್ವಾ | ವಿದಿತ ಮಹಿಪತಿ ನಂದನಾ ಧೂರೆಯು 3