ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾತ್ವಿಕ ಹಿನ್ನೆಲೆಯ ಹಾಡುಗಳು ಪಾದಪೂಜೆಯನು ಮಾಡುವೆ ರಾಮಾ ಪಾದಪೂಜೆಯನು ಪ ಕಾಯಾ ವಾಚದಲೀ ಮನಸಿನಿಂದ ನ್ಯಾಯ ಮಾರ್ಗದಲೀಅ.ಪ. ಘನ ಭಕ್ತಿರಸವೆಂಬ ನೀರನು ತಂದು ತನುವೆಂಬ ಘಟದಿಂದ 1 ವರಭೂತದಯೆಯೆಂಬ ಗಂಧವ ಪೂಸಿ ಪರಮ ಸುಕೃತಿಯಿಂದ 2 ದಾನಧರ್ಮಗಳೆಂಬ ಹೂವನು ಹಾಕಿ ವೀಣಾದಿ ಸ್ವರದಿಂದ 3 ಸತ್ಯ ಜ್ಞಾನಗಳೆಂಬ ಮಂತ್ರವ ಹÉೀಳಿ ಅತ್ಯಂತ ಕೃಪೆಯಿಂದ 4 ಸ್ವಾರ್ಥ ತ್ಯಾಗವು ಯೆಂಬ ಆರತಿ ಮಾಡಿ ನರ್ತನಸ್ತುತಿಯಿಂದ 5 ದೇಹವಾಹುತಿಕೊಟ್ಟು ಅರ್ಪಣೆ ಮಾಡಿ ಮೋಹದುಪೇಕ್ಷೆಯಿಂದ6 ಭಕ್ತರಾಕೃತಿಯಿಂದ 7 ಜನುಮಕ್ಕೆ ಬರದಂತೆ ಬೇಡುವೆ ನಿಂದು ತನುಬಂಧ ಹರಿವಂತೆ 8 ಪನ್ನಗಶಯನನನ್ನು ಪೂಜಿಪೆನಿಂದು ಚನ್ನಕೇಶವನನ್ನು 9
--------------
ಕರ್ಕಿ ಕೇಶವದಾಸ
ಚಂದ್ರಚೂಡ ಶಿವಶಂಕರ ಪಾರ್ವತಿ ರಮಣಾನಿನಗೆ ನಮೋ ನಮೋ ಪಸುಂದರ ಮೃಗಧರ ಪಿನಾಕಧರ ಹರ |ಗಂಗಾಧರಗಜಚರ್ಮಾಂಬರಧರಅ.ಪನಂದಿವಾಹನಾನಂದದಿಂದ ಮೂಜಗದಿ ಮೆರೆವನು ನೀನೆ |ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ ||ಅಂದು ಅಮೃತ ಘಟದಿಂದುದಿಸಿದ ವಿಷತಂದುಭುಂಜಿಸಿದವನು ನೀನೆ |ಬಂದು ಚೆಂದದಿ ಇಂದಿರೇಶ ಶ್ರೀ ರಾಮನ ಪೊಂದಿಪೊಗಳುವವ ನೀನೆ 1ಬಾಲಮೃಕಂಡನ ಕಾಲನು ಎಳೆವಾಗಪಾಲಿಸಿದಾತನು ನೀನೆ |ನೀಲಕಂಠ ಕಾಲಕೂಟ ವಿಷವ ಮೆದ್ದಶೂಲಪಾಣಿಯು ನೀನೆ |ವಾಲಾಯದಿ ಕಪಾಲವ ಪಿಡಿದುಭಿಕ್ಷೆಕೇಳುವ ದಿಗಂಬರ ನೀನೆ |ಜಾಲಮಾಡುವ ಗೋಪಾಲನೆಂಬಪೆಣ್ಣಿಗೆ ಮರುಳಾದವ ನೀನೆ 2ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರನಿವಾಸನು ನೀನೆ |ಕರದಲಿ ವೀಣೆಯ ನುಡಿಸುವ ನಮ್ಮಉರಗಭೂಷಣನು ನೀನೆ ||ಕೊರಳಲಿ ಭಸ್ಮ ರುದ್ರಾಕ್ಷಿಯ ಧರಿಸಿದಪರಮವೈಷ್ಣವನು ನೀನೆ |ಗರುಡಗಮನಶ್ರೀಪುರಂದರವಿಠಲನ ಪ್ರಾಣ ಪ್ರಿಯನುನೀನೆ3
--------------
ಪುರಂದರದಾಸರು