ಪುರುಷ ಪ್ರಕೃತಿಯಲ್ಲಿಹನು ಎಂತೆನೆಇರುವನೀ ತೆರದಿ ಉಭಯದಲಿ ಪುರುಷ ಪ
ತಿಲದೊಳಗೆ ತೈಲ ಕಾಷ್ಟದೊಳಗೆ ಅಗ್ನಿಫಲದಲಿ ರುಚಿಯು ಇದ್ದಂತೆ ಪುರುಷ1
ಸ್ತನದೊಳಗೆ ಕ್ಷೀರ ಕ್ಷೀರದೊಳಗೆ ಘೃತಘನ ಭೇರಿಯಲಿ ನಾದ ಇದ್ದಂತೆ ಪುರುಷ2
ಮಣಿಗಣದಲಿಸೂತ್ರ ಮಾಲಿಕೆಯಲಿ ತಂತುಘನವಾದ ಘಟದಲ್ಲಿ ಬಯಲಂತೆ ಪುರುಷ 3
ಘನದಲ್ಲಿ ಉದಕ ಗಗನದಲಿ ಮಿಂಚುಅನಿತು ಔಷಧಿಯಲ್ಲಿ ರಸದಂತೆ ಪುರುಷ4
ತೈಲಬಿಂದುವು ಉದಕದಲ್ಲಿ ವ್ಯಾಪಿಸಿದಂತೆಲೋಲ ಚಿದಾನಂದ ತಾನಿಹ ಪುರುಷ 5