ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಆಳ್ವಾರಾಚಾರ್ಯ ಸ್ತುತಿಗಳು (1) ಆಂಜನೇಯ ನೋಡಿರೈ ಕಣ್ದಣಿಯಾ ಸಜ್ಜನರೆಲ್ಲ ಪಾಡಿರೈ ಮನದಣಿಯಾ ಪ ಗಾಢಭಕುತಿಯನಾಂತು ಭಜನೆಯ ಮಾಡುವರ ದುರಿತಗಳನೋಡಿಸಿ ಕೂಡೆನಿರ್ಮಲರೆನಿಸಿ ಪೊರೆವಾ ರೂಢನಹ ಮಾರುತಿಯ ಮೂರ್ತಿಯ ಅ.ಪ ಉಡಿಯೋಳ್ ಘಂಟೆಗಳೆಸೆಯೆ ಚರಣದೊಳುಳ್ಳ ತೊಡರುಗಗ್ಗರಮುಲಿಯೆ ರ್ಕಡೆಯ ಕರ್ಣದಿ ಪೊಳೆಯೆ ಕಡಗ ಮಣಿಮಕುಟಗಳ ಪೇರುರ ದೆಡೆಯ ವಜ್ರದಪದಕ ಮೊದಲಹ ತೊಡಿಗೆಗಳ ಸಡಗರದೊಳೊಪ್ಪುವ ದೃಢತರದ ಮಾರುತಿಯ ಮೂರ್ತಿಯ 1 ಭರದಿಂದ ಶರನಿಧಿಯಾ ಲಂಘಿಸಿ ಪೊಕ್ಕಾ ನಿರುಪಮತರ ಲಂಕೆಯ ಗುರಿಗೊಂಡರಸಿ ಸೀತೆಯಾ ಕಂಡಾರಘು ವರನುರುಮುದ್ರಿಕೆಯ ಕರದೊಳಿತ್ತಾರಮಣಿಯಿಂ ವಿ ಸ್ಫುರಿಪ ಚೂಡಾಮಣಿಯ ಕೈಕೊಂ ಡಿರದೆ ಬಂದೊಡೆಯಂಗೆ ಸಲಿಸಿದ ಪರಮಬಲಯುತನಮಳಮೂರ್ತಿಯ 2 ವಾದವಿದೂರನನು ಪಾವನ ಮೃದು ಪಾದಾರವಿಂದನನು ವೇದಾಂತವೇದ್ಯನನು-ಸನ್ನುತಪರ ನಾದಾನುಮೋದನನು ಸಾದರದೊಳೈತಂದು ಪ್ರಾರ್ಥಿಪ ಸಾಧುಸಂತತಿಗೊಲಿದು ಪರಮಾ ಮೋದದಿಂ ಪರಮಾರ್ಥವಿಷಯವ ಬೋಧಿಸುವ ಮಾರುತಿಯ ಮೂರ್ತಿಯ 3 ರಂಗನಾಥನದೂತನ ಸತ್ಕರುಣಾಂತ ರಂಗನಾರ್ತಪ್ರೀತನ ಕಂಗೊಳಿಸುವ ನೂತನಪುರವರದೊಳು ಹಿಂಗದೊಪ್ಪಿರುವಾತನ ಮಂಗಳಾತ್ಮನ ಮೋಹದೂರನ ಸಂಗರಹಿತನ ಸತ್ಯಚರಿತನ ರಂಗದಾಸಪ್ರಣಿತಮಹಿಮೋ ತ್ತುಂಗ ಶ್ರೀ ಮಾರುತಿಯ ಮೂರ್ತಿಯ 4
--------------
ರಂಗದಾಸರು
(ಇ) ಶ್ರೀಕೃಷ್ಣಲೀಲೆ ಅಂಗಜನೈಯನು ಗೋಕುಲ ಪೋಗುವಾಗಕಂಗಳ್ಹಬ್ಬದ ಉಬ್ಬಿನೇನ ಬಣ್ಣಿಪೆನಾ ಪ ಎಳೆಗರುಗಳ ಝುಂಗುಗಳನ್ನು ಮತ್ತೆಮಲೆವ ಗೂಳಿಗಳ ಗೂರಾಟವನ್ನುಒಲಿವಾವಿನ ಕೆಚ್ಚಲು ಸಂದಣಿಯಲ್ಲಿನಲಿವ ಮರಿಗರುಗಳ ನೋಡುತಲಿ 1 ಆಡಿಸುವ ಮೊಗ ಬದಿಗಳ ತುರಿಸುತ್ತಝಾಡಿಸುವಾಕಾರ ಬೆದರು ನೋಟಏಡಿಸುವ ಹುಬ್ಬಿನ ಗೋವಳರಕೋಡಂಗಿ ಆಟಕ್ಕೆ ಕುಲುಕಿ ನಗುತ 2 ಒಂದು ಹುಬ್ಬೊಂದು ಕಿವಿಯನಲಗಿಸುತಮುಂದಣ ಚಂಡಿಕೆ ತಾಳದ ಗತಿಗೆಚಂದದಿ ಕುಣಿಸುವ ಭೃಂಗಿ ಆಟಕೆ ಗೋಪಸಂದೋಹಕೆ ಮೆಚ್ಚಿ ಬಲಗೆ ತೋರಿಸುತ 3 ಕೆಲರು ಕೋಗಿಲೆಯಂತೆ ಕೆಲರು ನವಿಲಿನಂತೆಕೆಲರು ಹಂಸದಂತೆ ಸಾರಸದಂತೆಗಳರವದಿಂ ಗೋಪರು ಕೂಗೆ ಋತುಗಳುನಳಿನಾಕ್ಷನ ಸೇವೆಗೆ ಕೂಡಿದಂತಿರೆ 4 ಒಂದೊಂದು ತಾಳಕ್ಕೆ ಒಂದೊಂದು ಪದಗತಿಒಂದೊಂದು ರಸಕ್ಕೆ ಮತ್ತೊಂದು ಕೈಗತಿಒಂದೊಂದು ಭಾವಕ್ಕೆ ಒಂದೊಂದು ನೇತ್ರವಾನಂದದಿ ಗೋವರ್ಧನ ನಾಟ್ಯವಾಡೆ 5 ಕಿನ್ನರ ಗಾನ ಗೋಪರ ಗೀತ ದೇವಕನ್ಯೇರ ನಾಟ್ಯ ಗೋಪರನಾಟ್ಯಚೆನ್ನಾರ ಕುಣಿಸುವ ಚಿಣ್ಣರ ಕಣ್ಣುಸನ್ನೆ ಝೇಂಕರಿಸುವ ಗೋಪರ ನೋಡುತ6 ನಾರಂದನ ವೀಣೆ ಗೋಪರ ಕಿನ್ನರಿಗೀರ್ವಾಣದುಂದುಭಿ ಗೋಪರ ಮುರಜಆ ರಂಭೆಯರಾಟ ಗೋಪರ ತಾಂಡವಕ್ಷೀರೋದಕದಂತೆ ಕಲೆಸಿ ಬೆರೆಸಿರೆ 7 ರಸತುಂಬಿ ತುಳುಕುವ ಕೊಳಲ ರವಂಗಳುಹಸುಗಳ ಕೊರಳ ಘಂಟೆಗಳ ನಿನಾದಎಸೆವೆಳಗಂದಿಯ ಅಂಬಾರವಂಗಳು ಪಸರಿಸೆ ಗೋವಳೆಯರು ಸಡಗರಿಸಿ8 ಜಂಗುಳಿ ಗತಿಯರ ಮುಖ ಕನ್ನಡಿ ಊರೋ-ಜಂಗಳೆ ಮಂಗಳ ಪೂರ್ಣ ಕುಂಭಗಳುಕಂಗಳೆ ನೀಲೋತ್ಪಲಂಗಳು ಕರಗಳೆತುಂಗ ಪಲ್ಲವ ತೋರಣದಂತೆಸೆಯೆ 9 ಚೆಂದದ ನೋಟವು ಮಂಗಳಾರತಿಯಾಗೆಮಂದಹಾಸವು ಪೂಮಳೆಯಾಗೆ ಆನಂದ ಪುಳಕಗÀಳೆ ಕೋಡಿಯಾಗೆ ಗೋಪವೃಂದವಿದಿರುಗೊಳ್ಳ ಬಂದರೊಲವಿಲಿ 10 ಕಂಗಳ ಕುಡಿ ನೋಟಂಗಳಿÀಂ ಸೆಳೆದುರಂಗನ ತಮ್ಮಂತರಂಗದೊಳಿಟ್ಟುಹಿಂಗದಾಲಂಗಿಸಿ ಸುಖಾಂಬುಧಿಯ ತ-ರಂಗದಿ ಗೋಪಾಂಗನೆಯರು ಮುಳುಗಿ11 ಗೋಪಿಜನರು ರಂಗಗೆ ಮರುಳಾಗಿರೆನೂಪುರ ಮರಕತ ಪ್ರಭೆ ಸಾರಳೆಯಾಗೆಆ ಪದ್ಮರಾಗವೆ ಕೆಂಪು ಕಾರಳೆಯಾಗೆಶ್ರೀಪದನಖ ಕಾಂತಿ ರಂಗವಲ್ಲಿಯಾಗೆ 12 ಬೃಂದಾರಕರು ಪೂಮಳೆಗರೆಯಲು ಬೇಗಬಂದಾಳಿಗಳು ಬೃಂದಾವನದಲ್ಲಿ ಮಕರಂದವನುಂಡು ಸ್ವರ್ಗವ ಹಳಿದಿಳೆಗೆಬಂದಳಿಂದಿರೆಯೆಂಬ ಸಂಭ್ರಮದಿಂದ 13 ತುರುಗಾತಿಯರ ನೋಟದ ಬೇಟಂಗಳುಹರಿಮುಖೇಂದವಿನಲ್ಲಿ ಚಕೋರಗಳುಹರಿನಾಭಿಸರೋವರದಲ್ಲಿ ಮೀನ್ಗಳುಹರಿಪಾದಪದುಮದಿ ತುಂಬಿಗಳಾಗೆ14 ಇತ್ತ ಗೋವಳರಾಟಕೆ ತಲೆದೂಗುತಅತ್ತ ದೇವತೆಗಳ ಸ್ತುತಿ ಕೇಳುತ್ತಇತ್ತ ಗೋವಳೆಯರ ನಗಿಸುತ್ತ ನಗುತ್ತಅತ್ತಿತ್ತ ಮುನಿಗಳ ಸ್ತುತಿ ಕೇಳುತ್ತ 15 ಕಂಜಾಸನ ನಮಿಸಲು ಕೈಹಿಡಿದೆತ್ತಿ ಮೃ-ತÀ್ಯುಂಜಯ ವಂದಿಸೆ ಬಾ ಯೆನ್ನುತ್ತಅಂಜಲಿ ಪುಂಜದ ಇಂದ್ರಾದಿಗಳನ್ನುಕಂಜನೇತ್ರಗಳ ಸನ್ನೆಯಲಿ ಮನ್ನಿಸುತ16 ಸಿರಿ ವನಿತೆಗೆ ವನಮಾಲೆ ಉಯ್ಯಾಲೆಮೊರೆವಳಿಕುಲಗಳ ರವ ಸಂಗೀತ ವರ ಮುತ್ತಿನ ಹಾರ ಚಾಮರ ಶ್ರೀಕೃಷ್ಣ-ನುರಮಧ್ಯವೆ ಮಂಟಪವಾಗೆಸೆಯೆ 17
--------------
ವ್ಯಾಸರಾಯರು
(ಈ) ಆತ್ಮನಿವೇದನಾ ಕೃತಿಗಳು ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ಪ ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ ಸುಖಮಯ ಶರೀರ ಚನ್ನರಾಯಾ ಅ.ಪ ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ ದಂದಿಗೆ ಸಾಲದಾಯಿತೆ ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು ದಂದಿಗೆ ಸಾಲದಾಯಿತೆ ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ ದೊಂದೊಂದು ಗೋಗಳಿಗೆಛಂದದಲಿ ನಿಂದು ದಾನವ ಕೊಂಡೆಯಾ ಸ್ವಾಮಿ 1 ಉರದೊಳಗೆ ಅನವರತ ವಾಸವಾಗಿರುತಿಪ್ಪ ಶರಧಿಸುತೆ ಕೈಬಿಟ್ಟಳೇ ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು ಬರಡಾಯಿತೇ ಕಾಮಧೇನೂ ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ ಭರದಿ ಕೈ ಒಡ್ಡುತಿಹರೆ ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ ದೂರಿಗೊಳಗಾಗಬಹುದೆ ಸ್ವಾಮಿ 2 ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ ಮೊತ್ತದಿಂ ಕೂಡಿಕೊಂಡೂ ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ ಗೆತ್ತಿ ಘಂಟೆಗಳ ಕಟ್ಟೀ ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ ಗಿತ್ತೆ ಸುರಪದವನು ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ ಭೃತ್ಯನ್ನ ಕಾಯೊ ಸತತ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಜೋಗಿ ಬಂದ ಕಾಣೇ ಈತ ಮಹಾಯೋಗಿ ಬಂದ ಕಾಣೇ ಗಗನ ಮಣಿಯ ಮೀರುವ ತೇಜದ ದತ್ತ ದಿಗಂಬರ ನೆನಿಪೆ ನೋಡಮ್ಮಾ ಪ ತವೆ ಸಂಜೆ ಧಾರೆಗಳು ಹೊಳೆವ ಲೊ ಪ್ಪುವ ಕೆಂಜೆಡಿಯಗಳು ಕುವಲಯ ಶಾಮನು ಕಿರೀಟ ಕುಂಡಲದಿಂದ ಠವಠವಿಸುವ ಮೊಗದಾ ನೋಡಮ್ಮಾ 1 ಕೇಶರ ಗಂಧವನು ನುಂಪಿಟ್ಟು ತ್ರಿಸರೋಜ ಮಾಲೆಯನು ಭೂಷಿತ ದಿವ್ಯಾಂಬರ ಕಾಂಚಿ ಧಾಮದಿ ಘೋಷಿಪ ಘಂಟೆಗಳು ನೋಡಮ್ಮಾ 2 ಮೆಟ್ಟಿದ ಪಾದುಕೆಯಾ ರತನದ ಬೊಟ್ಟಿಲಿ ಜಪ ಮಾಲೆಯಾ ನೆಟ್ಟನೆ ನೆನೆವ ರುದ್ಧರಿಸಲು ತಾರಕ ಸೃಷ್ಟಿಗೆ ಗುರುವಾಗಿಹ ನೋಡಮ್ಮಾ 3 ಆದಿ ಯೋಗವನು ಪ್ರಕಟಿಸಿ ಹಾದಿಯ ತೋರುವನು ದ್ವಾದಶ ನಾದದ ಭೇದ ತೋರುವ ಶಂಖ ನೂಡುತ ನಲಿಯುತಲಿಹ ನೋಡಮ್ಮಾ 4 ಮೂರ್ತಿ ಚಿ-ಹ್ನವನು ದೋರುವಾ ಶ್ರೀ ಮನೋರಮ ದೇವನು ನೇಮದ ಮಹಿಪತಿ ನಂದನ ಪ್ರಭು ಭಕ್ತ ಕಾಮಿತಾರ್ಥವ ನೀಡುವ ನೋಡಮ್ಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿತ್ಯ ಮಂದಾರ ತರುವಂತೆಕುಂದದಲ ಭೀಷ್ಟಗಳ ಗರೆವ | ಸುರ ತರುವಾ ಪ ವಾಗೀಶ ಕರಜಾತ | ನಿಗಮಾರ್ಥ ಕೋವಿದರಭೋಗಿಶಯನನ ಭಕುತ | ಭಾಗ್ಯ ದಾತೃಗಳ |ಯೋಗಿ ಕುಲವರ್ಯ ಹೃ | ದ್ರೋಗ ನೀಗುವರಜಾಗು ಮಾಡದೆ ಭಜಿಪ | ಭಕ್ತರನು ಪೊರೆವರನು 1 ಭವ ಭವಣೆ ಹರಿಸು ವರ |ನವ ನವ ಸ್ತೋತ್ರಗಳ | ಕವನ ರೂಪದಿ ಪೇಳಿಪವನಾಂತರಾತ್ಮಕನ | ಪರಿತೋಷ ಗೈದವರಾ 2 ಗರಳ ಅಂಘ್ರಿ ಕಮಲಂಗಳನುನೆರೆನಂಬಿ ಸುಖಿಸುವರ | ಸುರವ ಭಯ ವಿರಹಿತರ 3 ಉಕ್ತಿಯನು ಸ್ವಪ್ನದಲಿ | ಶಕ್ತಹಯಮುಖಪೇಳೆಯುಕ್ತಿಮಲ್ಲಿಕೆ ಮಾಲೆ | ಮೌಕ್ತಿಕವ ನಿತ್ತವರ |ಭಕ್ತಿಪಥ ತೋರಿ | ಕು | ಯುಕ್ತಿಗಳನೇ ಕಳೆದುಮುಕ್ತಿ ಮಾರ್ಗವ ತೋರ್ವ | ಭಕ್ತಿಯೋಗಿಗಳಾ 4 ಮಾಯಿ ಶೈವರು ಶಾಕ್ತ್ಯ | ಅನ್ಯಮತಗಳಗೆದ್ದುಜಯ ಪತ್ರ ಘಂಟೆಗಳ | ವಿಜಯ ಸಾರಥಿಗಿತ್ತು |ಭಯ ವಿನಾಶನು ನಮ್ಮ | ತೋಯಜಾಂಬಕ ಸಿರಿಹಯ ವದನನರ್ಚಿಸುವ | ವಾದಿರಾಜರನೂ 5 ಅದ್ವೈತ ತಮ ಸೂರ್ಯಮೇದಿನೀ ಸುರವಂದ್ಯ | ಶ್ರೀವಾದಿರಾಜರನೂ 6 ಭಾವಿ ಮಾರುತಿಯ | ದಿನ ದಿನದಿ ಪ್ರಾರ್ಥಿಪರಭಾವ ಕೊಲಿಯುತ ತೋರ್ವ | ಹಯ ಮುಖಾತ್ಮಕನು |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನಭವ್ಯ ರೂಪವ ಹೃದಯ | ದವಕಾಶದೊಳಗೇ 7
--------------
ಗುರುಗೋವಿಂದವಿಠಲರು
ಬೊಮ್ಮ ಪ ಉಲಿವ ಘಂಟೆಗಳಿಂದ | ಬಾಲವೂ ಬಲು ಛಂದಚೆಲುವ ಮೂರುತಿ ಭಾವ | ಸುಂದರ ಪ್ರಭಾವ |ಕಲಿಮಲವ ಕಳೆವಂಥ | ನಿನಗಿಹುದು ಸತ್ಪಂಥಗುರ್ಹೊಸೂರಲಿ ವಾಸ | ಭಕುತ ಜನ ತೋಷಾ 1 ಭವ ಮೋಹಪ್ರಧ್ವಂಸವೆನಿಸಯ್ಯ | ಮಧ್ವಮುನಿ ಜೀಯಾ 2 ನಿತ್ಯ ಮುದಗೊಳ್ವ 3
--------------
ಗುರುಗೋವಿಂದವಿಠಲರು
ರಾಜೋಪಚಾರರಾಜೋಪಚಾರರಾಜೀವನೇತ್ರ ನೀನವಧರಿಸು ಬೇಗ ಪಸಾವಿರದ ದಳವುಳ್ಳ ಕಮಲವೊಂದಕೆ ಶಕ್ತಿಸಾವಿರದ ಮೌಕ್ತಿಕದ ಸರಗಳೊಪ್ಪಿಹವುಕಾವಿಹುದು ಸಕಲ ದೇವಾತ್ಮಕದ ಶಾರದೆಯುನಾ ವಹಿಸಿ ತುರಿಯ ಕಲಶದ ಛತ್ರವೆಂದೆಂಬ 1ಆವಗವು ಸತ್ವಾದಿ ಗುಣಗಳಿಂದೊಪ್ಪಿರುವಆವರಣ ವಿಕ್ಷೇಪ ಶಕ್ತಿಯೆಂಬೆರಡುದೇವ ನಿನ್ನುಭಯ ಪಾಶ್ರ್ವದಲೊಲವುತಿಹ ಸರ್ವಭಾವದಿಂದುಭಯ ಚಾಮರವೆರಡರಿಂದ 2ಗಂಧರ್ವ ನಗರದಿಂದೈತಂದ ನಾರಿಯರುಛಂದದಿಂ ನರ್ತಿಸುತಲಿಹರೈವರಿವರುಒಂದಾಗಿ ಬಳಿಕಿವರ ಹೊಂದಿ ಮತ್ತೈವರಿರೆಹಿಂದೆ ನಾಲ್ವರುವೆರಸಿ ನಲಿವ ನರ್ತನವೆಂಬ 3ಪರವೆಂದು ನಾಭಿಯಲಿ ಪಶ್ಯಂತಿ ಹೃದಯದಲಿಸ್ವರವಿಹುದು ಕಂಠದಲಿ ಮಧ್ಯಮಾಖ್ಯೆಯಲಿಸ್ಫುರಿಸಿ ಮುಖಕಮಲದಲಿ ವೇದಶಾಸ್ತ್ರಗಳಾಗಿಮೆರೆವ ವೈಖರಿಯೆಂಬ ಗೀತವಿದ ಕೇಳು 4ತಾಳ ಮರ್ದಳೆ ಘಂಟೆ ಭೇರಿ ಶಂಖಗಳಿಂದಮೇಲಾದ ವೀಣೆ ವೇಣುಗಳ ರವದಿಂದಲಾಲಿಸುವ ಛಿಣಿ ಛಿಣೀ ಛಿಣಿಗಳೆಂಬವರಿಂದನೀಲ ಮೇಘಧ್ವಾನ ದಶನಾದದಿಂದ 5ಪರಿಪರಿಯ ಗತಿಯುಳ್ಳ ಚಿತ್ತವೆಂಬಶ್ವವನುವರ ಸತ್ವ ಗುಣವೆಂಬ ಹಲ್ಲಣವ ಬಿಗಿದುನಿರತ ಪರಮಾತ್ಮನೀಕ್ಷಣದ ಕಡಿವಾಣವನುಪಿರಿದಾಗಿಯಳವಡಿಸಿ ಮುಂದೆ ನಿಂದಿಹುದಾಗಿ 6ಒಲವುತಿಹ ಸುಖ ದುಃಖವೆರಡು ಘಂಟೆಗಳಿಂದನೆಲನ ಸೋಕುವ ಕಾಮ ಸುಂಡಿಲದರಿಂದಫಲ ಚತುಷ್ಟಯ ಪಾದ ಮೇಲು ಮಂಟಪದಿಂದಬಲುಮೆಯಹ ಮೂಲ ಕಾರಣವೆಂಬ ಗಜವು 7ಹಿಂದೆಮುಂದರುವರೊಂದಾಗಿ ವಹಿಸಿರಲದಕೆಹೊಂದಿಸಿದ ಚೌಕಿ ಮನವೆಂಬುದದರಲ್ಲಿಮಂದ ಮೃದು ಬಹು ವಿಷಯ ಸುಖದ ಹಾಸಿಕೆ ಹಾಸಿದಂದಳವಿದನುಭವದ ಕೊಂಬಿನಿಂದೊಪ್ಪಿರುವ 8ಆರು ನೆಲೆಯುಳ್ಳ ರಥವದಕೆ ಶಕ್ತಿಗಳೆಂಬಮೂರು ಕಲಶಗಳಲ್ಲಿ ನಾಲ್ಕು ಸತ್ತಿಗೆಯುಮೂರವಸ್ಥೆಗಳದರ ತುರಿಯವೆಂಬುದೆ ನಾಲ್ಕುಮೂರುಲೋಕವನಾಳ್ವ ಮಹಿಮ ನೀ ಪ್ರತಿಗ್ರಹಿಸು 9ನುಡಿವುದೆಲ್ಲವು ವೇದ ನಡೆವುದೆಲ್ಲವು ಶಾಸ್ತ್ರಬಿಡದೆ ನಿನ್ನಾಜ್ಞೆಯೊಳಗಿರೆ ಪುರಾಣದೃಢವಾಗಿ ನಿನ್ನ ಭಜನೆಯ ಮಾಳ್ಪ ದಿವಸವದುಕಡುಪುಣ್ಯವಾದ ಪಂಚಾಂಗವೆನಿಸುವದು 10ಉದಯದಲಿ ನಿನ್ನ ಸ್ಮರಣೆಯ ಮಾಡೆ ಪುಣ್ಯತಿಥಿಒದಗಿಸುವ ಸತ್ಕರ್ಮ ವಾರವೆನಿಸುವದುಅದರಲ್ಲಿಯನುಭವವೆ ನಕ್ಷತ್ರ ನಿನ್ನಲ್ಲಿಹುದುಗೆ ಜೀವನು ಯೋಗ ಹುದುಗುವದೆ ಕರಣ 11ಸಕಲ ವೇದಂಗಳಲಿ ಪ್ರತಿಪಾದಿಸಿದ ಫಲವುವಿಕಳವಿಲ್ಲದೆ ನಿನ್ನ ನಿಮಿಷ ಧ್ಯಾನಿಸಲುಸಕಲ ತೀರ್ಥಸ್ನಾನ ದಾನ ಜಪ ತಪ ಯಜ್ಞಸಕಲವೂ ಬಹುದೆಂಬ ಸರ್ವೋಪಚಾರ 12ಸುರ ಸಿದ್ಧ ಮುನಿವೃಂದ ನಿರತ ಸೇವಿತ ಚರಣಶರಣಾಗತೋದ್ದರಣ ಶರಧಿಜಾರಮಣತಿರುಪತಿಯ ಸ್ಥಿರವಾಸ ನಿರುಪಮ ಮಹಾಕರುಣಮರೆಯೊಕ್ಕೆ ಸಲಹೆನ್ನ ಪ್ರಾಣ ವೆಂಕಟರಮಣ 13ಓಂ ಜುನೇ ನಮಃ
--------------
ತಿಮ್ಮಪ್ಪದಾಸರು