ಗುರುವು ಗುರುವು ಎಂದು ಜಗದೊಳಗಿಹರುಗುರುವು ಅದ್ಯಾತರ ಗುರುವುನರನನು ತಿಳುಹಿಯೆ ಹರನನು ಮಾಡುವಗುರುವು ಆತನೆ ಸದ್ಗುರುವು ಪ
ಜ್ಞಾನವನರುಹಿ ಅಜ್ಞಾನವ ಹರಿಸುವಜ್ಞಾನಿಯಾದವ ಗುರುವುಏನೇನೋ ಭ್ರಾಂತಿಯದೆಲ್ಲವ ನೀಗಿ ನಿ-ಧಾನ ಮಾಡಿದನಾತ ಗುರುವುನೀನೀಗ ನಾನೆಂದು ಸಂಶಯ ಬಿಡಿಸಿಸನ್ಮಾನ ಮಾಡಿದನಾತ ಗುರುವು 1
ಯಮ ನಿಯಮಾಸನ ಎಲ್ಲವನರುಹಿಯೆಎಚ್ಚರಿಸಿದಾತನೆ ಗುರುವುಸಮರಸವಾಯು ಮನವ ಮಾಡಿಕುಂಭಕಕಮರಿಸಿದಾತನೆ ಗುರುವುಘುಮು ಘುಮು ಘುಮು ಎಂಬ ಘಂಟಾಘೋಷವನ್ನೆಬ್ಬಿಸಿ ಅನುವುಮಾಡಿದವ ಗುರುವುದ್ಯುಮಣಿಕೋಟಿ ಕಳೆದೃಷ್ಟಿಗೆ ತುಂಬಿಸಿದೃಢವ ಮಾಡಿದನಾತನೆ ಗುರುವು 2
ದೃಷ್ಟಿಯ ನಿಟ್ಟು ಖೇಚರಿ ಮುದ್ರೆ ನಿಲಿಸಿದಯ ಮಾಡಿದಾತನೆ ಗುರುವುಕಟ್ಟಳಿಲ್ಲದ ತೇಜ ಖವಖವ ನಗಿಸಿಯೆದಿಟ್ಟ ಮಾಡಿದನಾತ ಗುರುವುಮುಟ್ಟಿ ತುಂಬಿದ ಬೆಳದಿಂಗಳ ಖಂಡದಿಮುಳಿಗಿಸಿದಾತನೆ ಗುರುವುಶಿಷ್ಟ ಚಿದಾನಂದ ಸದ್ಗುರುವನಮಾಡಿಸಾಕ್ಷಿ ಮಾಡಿದನಾತ ಗುರುವು 3