ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಎರಡು ರಾಗ ಭೂಲೋಕವನು ಜೈಸುತ ಬಲದಿಂದಾ ಇಂದ್ರನೇ ಮೊದಲಾದ ಬೇಗಾ ದೇವೇಂದ್ರ ನಾಸನಕೆ 1 ಉಗ್ರಶಾಸನ ಮಾಡು ಮಾಡುವಂಥಾ ಉಗ್ರಶಾಶನ ಶೀಘ್ರದಿಂ ಹರಿಗೆ 2 ಬಿಡದೆ ದಯದಿ ಅನಂತ ಇಂಥ ಕಾಲಕೆ ಎಲ್ಲಿ `ಅನಂತಾದ್ರೀಶನೆ ' ನಿಂತು ನುಡಿದನು ಅಂತರಿಕ್ಷದಲಿ 3 ರಾಗ ಅಂಜಬೇಡಿರಂಜ ಬೇಡಿರೋ ನೀವಿನ್ನು ಮೇಲೆ ಪ ಪಂಜರದೊಳಗಿರುವೆ ನಿಮ್ಮನಂಜಿಸುವನ ಭಂಜಿಸುವೆನು ಅ.ಪ ಎಂದು ದ್ವೇಷ ಮಾಡುವನೋ ಅಂದಿಗವನ ಕೊಂದÀು ಬಿಡುವೆ 1 ದ್ವೇಷವನ್ನು ಮಾಡಿದವನು ಉಳಿಯ ಮುನ್ನ ಬಹಳ ದಿವಸ ಸತ್ಯ 2 ಪ್ರಹ್ಲಾದ ಇದ್ದ ಸ್ಥಳದಲ್ಲಿರುವೆ ನಾನು 3 ವಚನ ಶ್ರೀ ಲಲಾಮನವಾಣಿ ಕೇಳಿ ಉಳಿದವನಲ್ಲ ಕಾಲ ಹಿರಣ್ಯಕನಿಂದ ಬಾಲ ಕಾಲಕಾಗುವದೆಂದು ಕಾಲವನು ನೋಡುತಲೆ ಕಾಲಗಳೆದರು ಲೋಕಪಾಲಕರು ಎಲ್ಲಾ 1 ರಾಗ ಕೈಯಲಿಕೊಟ್ಟು ನಕ್ಕು ನುಡಿದಾನು 1 ಇರಲಿ ಬುದ್ಧಿವಂತನಾಗಲಿ ಪ್ರಸಿದ್ಧನಾಗಲಿ2 ಆಗ ಪ್ರಹ್ಲಾದನ್ನ ಕರದ್ಹೇಳಿದರು ಆಹ್ಲಾದದಿಂದಾ3 ಸಂಭ್ರಮದಿಂದ ಉತ್ತಮ ಶ್ರೀ ಹರಿನಿಂದಾ ಶಾಸ್ತ್ರ ನುಡಿದರು 4 ತ್ರೈವರ್ಗಿಕ ಶಾಸ್ತ್ರ ನುಡಿದರು 5 ಪಾಠಮಾಡಲಿಲ್ಲ ಸವಿದು ಹರಿ ಚರಿತಾಮೃತವನ್ನು ಸವಿ ಇನ್ನೊಂದನರಿಯಾ 6 ನುಡಿದನು ಅವನು ನವನೀತ ಧಾಂಗಿರುವಂಥಾದು ನವವಿಧ ಭಕ್ತಿ 7 ಅವರಿಗೆ ಮತ್ತಾರಿಗಾದರು ಅವನಂಜುವನಲ್ಲಾ 8 ಅವನು ಚಲುವ ನಂತಾದ್ರೀಶನಲ್ಲೆ ಛಲ ಬಿಟ್ಟನಲ್ಲಾ 9 ವಚನ ಕೂಡಿಸಿಕೊಂಡು ಮಂದ ಮುಂದ್ಹೇಳು ಇಷ್ಟುದಿನ ಒಂದು ಬಿಡದಲೆ ಹೀಗೆ ಅಂದ ಮಾತಿಗೆ ಮತ್ತೆ ಕಂದ ಪ್ರಹ್ಲಾದ ಹೀಗೆಂದನಾಗ 1 ರಾಗ ಬರೆಯಲಿಲ್ಲ ಓದಲಿಲ್ಲವೋ ಅಪ್ಪಯ್ಯ ನಾನು ಪ ಹರಿಯ ನಿಂದಿಸುವ ಶಾಸ್ತ್ರ ಬರೆಯಲ್ಹ್ಯಾಗೆ ಓದಲ್ಹ್ಯಾಗೆ ಅ.ಪ ಹರಿಯ ಗುಣಗಳನ್ನು ಮಾಡುವೆನು ಹರಿಯಪಾದ ಹರಿಯ ವಂದಿಸುವೆ ನಿತ್ಯಾ 1 ಅಂಥಾದು ಎನ್ನ ಮನಸು ಮನಸಿಲ್ಲೆ ವಿಷಯಗಳನ್ನು ನೆನೆಸುವೆ ಸುಹರಿಯ ರೂಪಾ2 ಗೆಳೆಯನಾದ ತಾನು ಅಂತರಂಗದಲ್ಲಿ ತಾನು ನಿಂತು ಪ್ರೇರಿಸುವ ಅಂತರಂಗದಂತೆ ಇರುವೆ 3 ವಚನ ಸಿಟ್ಟು ಮಾಡುತಲಿಂಥ ಥಟ್ಟನ್ಹೇಳಿರಿಯೆನಲು ಥಟ್ಟ ನಾವಲ್ಲ ಕೊಟ್ಟವರು ಕೊಟ್ಟ ಬುದ್ಧಿಯು ಅಲ್ಲ ರಾಗ ಕೇಳಿರಿ ನೀವೆಲ್ಲ ಭಾಳ ಭಕುತಿಯಲಿ ಕೇಳಿರಯ್ಯಾ ಪ ಬಾಳ ಮಾತುಗಳೇಕೆ ಹೇಳುವೆ ಸಾರಾಂಶ ಕೇಳಿರಯ್ಯಾ ಅ.ಪ ಅಲ್ಲ ಕೇಳಿರಯ್ಯಾ ದಿಟ್ಟಾಗಿ ಶ್ರೀ ಹರಿಯು ಕೊಟ್ಟ ಬುದ್ಧಿಯು ಇದು ಕೇಳಿರಯ್ಯ 1 ಶ್ರೀ ಜಗದೀಶನಿಂದೀ ಜಗ ತಿರಗೋದು ಕೇಳಿರಯ್ಯಾ 2 ಅನಂತಾದ್ರೀಶನು ತಾನೆ ಆಡುವದು ಕೇಳಿರಯ್ಯಾ 3 ವಚನ ದೈತ್ಯ ಅಡಿಯಿಟ್ಟು ನೀತಿಯಲಿ ಕಿಡಿಗಣ್ಣಿನೊಳು ನೋಡಿ ಒಡಲೊಳಗೆ ಸಿಟ್ಟಿನಲಿ ದೃಢವಾಗಿ ಇರುವಂಥ ಭೃತ್ಯರುಗಳಿಗೆ ನುಡಿದನೀಪರಿಯ 1 ರಾಗ ಕಡಿದ್ಹಾಕಿರೀತನ ||ಪಲ್ಲ|| ಬಗೆ ದುಷ್ಟಮಾತುಗ- ವಿಷ್ಣುವ ಸೊಗಸಾಗಿ ಪೂಜಿಸಿ ನಗುತಿಪ್ಪನ 1 ಸುತನಾಗದಿದ್ದರೂ ಸುತನವನೆ ಅತಿರಭಸದಲೆ ವಿಶ್ರುತವಾಗಿ ಹುಟ್ಟಿದ ವಿತತರೋಗ ತನಗ್ಹಿತವಾಗಿರುವದೇನು 2 ನಾನಾರೀತಿಗಳಿಂದ ಹಾನಿಯ ಅನಂತಾದ್ರೀಶನ ಧ್ಯಾನದಲ್ಲಿರುವನ 3 ರಾಗ ಆಗೆಲ್ಲ ಮಂದಿಗಳನ ನೆರಸಿದಾ1 ಮುರಿದು ಅವನ ಭಯ ಬಿಡಿಸಿದಾ 2 ಹರಿಯು ಬಂದು ಉಳಿಸಿದಾ3 ಸರ್ಪಶಯನ ಬಂದು ಭಯವಾ ಬಿಡಿಸಿ4 ವಿಷವ ತಂದು ಯತ್ನದಿಂದ ಕುಡಿಸಿದಾ ಹರಿ ತಾ ವಿಷವಮೃತ ಮಾ ಡಿ ಸೌಖ್ಯ ಬಡಿಸಿದಾ 5 ಘಟ್ಟ್ಯಾಗ್ಹಿಡಿದು ಶ್ರೀಹರಿ ಸಾಕಿದಾ 6 ತಾನೆ ತಾರಿ ಸಿದಾ7 ಶೀತಾಗಿ ಸೌಖ್ಯ ಬಡಿಸದಾ 8 ನಾನಾರೀತಿಯಿಂದಲವನನು ಸರಿಸಿದಾ ಅಚ್ಯುತನಂತಾದ್ರೀಶನು ಸೌಖ್ಯ ಸುರಸಿದಾ 9 ವಚನ ಮಾಡಿದರಿವಗೆ ಇನ್ನದೇನು ಪಾಯವುಯೆಂದು ಮಾನಿತರು ಗುರುಗಳಾ ದಾನವೇಂದ್ರ ನೀನು ದೀನನಾಗುವದು ಮುಂದೆ ನೀನು ತಿಳಿಯೊ
--------------
ಅನಂತಾದ್ರೀಶ - ಕಥನಕಾವ್ಯಗಳು
ಕಂಸಾರಿನಿಜಪಾದ ಮರೆಯದಿರೆಲೆ ಮನವೆ ಸಂಸಾರಸುಖ ನೆಚ್ಚಿ ಭ್ರಮೆಯೊಳಗೆ ಬಿದ್ದು ಪ ಜನನಿಜನಕರುವನಿತೆತನುಜನುಜರಿವರೆಲ್ಲ ನಿನಗ್ಹಿತದಶತ್ರೆಂದು ನೆನೆಸಿಕೊಳ್ಳದಲೆ ಅನುದಿನವು ದುಡಿದುಡಿದು ತನುಮನಧನವನಿತು ಬಿನುಗರಿಗೆ ಸಲಿಸಿ ನರಕಕುಣಿಯೊಳಗೆ ಬಿದ್ದು 1 ಹೊಲಸುಕಿಲ್ಬಿಷಮಾಂಸ ಮೇಲೆ ಚರ್ಮದ ಹೊದಿಕೆ ಬಲವಾಗಿ ಬಿಗಿದ ನರ ಎಲುವಿನ್ಹಂದರವು ತೊಳೆಯದಿರ್ದರೆ ನಿಮಿಷ ಹೊಲಸುನಾರುವ ಮಹ ಮಲಭಾಂಡಕ್ಕೊಲಿದು ಬಲು ಸಿಲುಕಿ ಬಂಧದೊಳು 2 ಜಡದಮೇಲಣ ಲಿಪಿಯು ಒಡನೆ ಮಾಯಪ್ಪಂತೆ ಪೊಡವಿಯ ಸುಖ ನಿಮಿಷದಡಗಿ ಪೋಗುವುದು ಅಡಿಗಡಿಗೆ ಎಡೆಬಿಡದೆ ಒಡೆಯ ಶ್ರೀರಾಮನಲಿ ದೃಢವಾಗಿ ನೆರೆನಂಬಿ ಪಡಕೋ ನಿಜಸುಖವ 3
--------------
ರಾಮದಾಸರು
ನಮೋ ನಮೋ ಕಮಲಾಲಯೆ ಸರ್ವೋ ತ್ತುಮ ನಾರಾಯಣನಂಕದ್ವಯ ಸಮುಪಸ್ಥಿತೆ ಸುಂದರ ಮದಗಜ ಗಮನೆ ಗುಣಪೂರ್ಣೆ ಶೋಭಾನೆ ಪ ಕಂಗಳ ಕುಡಿನೋಟದಿ ಕಂಜಜ ಗಂಗಾಧರ ಸುರಮುಖ ಸುಜನರ ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ ಭೃಂಗಾಳಿಗಳಂದದಿ ಸೊಗಯಿಪ ಮುಂಗುರುಳಿಂದೊಪ್ಪುವ ನಿಜಪತಿ ಸಂಗಡ ಬಾ ಹಸಿಯ ಜಗಲೀಗೆ 1 ಜಲಜಾಕ್ಷನ ವಿಮಲಾಂಗದಿ ಪ್ರತಿ ಫಲಿಸಿದ ರೂಪಗಳನೆ ನೋಡುತ ಪುಳಕೋತ್ಸವದಿಂದಲಿ ಪಾಡುತ ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ ಗಳರವದಿಂ ಪಾಡುತ ಶ್ರೀ ಭೂಲಲನೆ ಬಾ ಹಸಿಯ ಜಗಲೀಗೆ 2 ಪ್ರತಿಫಲಿಸಿಹ ರೂಪಗಳೆನ್ನವು ಕತಿಪಯರೂಪಗಳೆನಗಿಂದಲಿ ಅತಿಶಯವೆ ತೋರುತಲಿಪ್ಪವು ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ ಗ್ಹಿತದಿಂದಲಿ ತೋರಿದನೆನುತಲಿ ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು 3 ಆ ಬ್ರಹ್ಮಾಂಡಗಳೊಳ ಹೊರ ಗುಪಮರು ನಿನಗಿಲ್ಲವಾಗಲು ಅಪರಾಜಿತನಮಲ ಸುರೂಪ ಗಳಪರೋಕ್ಷಣದಿ ಕಾಂಬ ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ 4 ವೀತಭಯನ ವಕ್ಷಸ್ಥಳವೆ ಪು ರಾತನ ಮನೆಯೆನಿಪುದು ಅವಿನಾ ಭುತರು ನೀವಿರ್ವರು ಅಮೃತಾ ಜಾತರು ಎಂದೆಂದೂ ಭೌತಿಕ ಮಂದಿರದೊಳು ನೆಲೆಸಿ ಪು ನೀತರ ಮಾಳ್ಪುದೆಮ್ಮ ಜಗ ನ್ನಾಥ ವಿಠಲನರ್ಧಾಂಗಿ ಜಗ ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ 5
--------------
ಜಗನ್ನಾಥದಾಸರು
ನಾನಾ ಚಿಂತನೆ ಎನಗಿಲ್ಲ ಹರಿ ನಿನ್ನ ಚಿಂತನೆ ಎನಗನುಗಾಲ ಪ ಮಾನಾಪಮಾನದ ಭಯವಿಲ್ಲೆನಗೆ ತವ ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ ಗಪರೂಪ ಊಟಾದರ್ಹಿಗ್ಗಿಲ್ಲ ಕಪಟದಿ ಬೈದರೆ ಅಹಿತಿಲ್ಲ ಜನ ನಿಪುಣನೆಂದರೆ ಎನಗ್ಹಿತವಿಲ್ಲ ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ ಗುಪಿತ ಮಂತ್ರ ಮಾಡನುಕೂಲ 1 ಪರಮ ಬಡತನವಿರೆ ಪರವಿಲ್ಲ ಬಲು ಸಿರಿ ಸಂಪದವಿರೆ ಹರುಷಿಲ್ಲ ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ ಸ್ಥಿರಮಾಡು ಮರೀದಂತೆ ಗೋಪಾಲ 2 ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು ಹೇಮ ಮುತ್ತು ರತ್ನ ಇರೋದಲ್ಲ ಭೂಮಿಸೀಮೆಯ ಸುಖವಿಲ್ಲ ಇದು ನೇಮವಲ್ಲೊಂದಿನ ಬಟ್ಟಬೈಲ ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ 3
--------------
ರಾಮದಾಸರು
ನೀನೆ ಸಜ್ಜನರ ಬಂಧು ಪ ಕರಿಮರಿಬಳಗ ಬಂದೊದಗಿದರೇನು ಪರಿಪರಿ ಕ್ಲೇಶವ ಬಿಡಿಸಲಿಲ್ಲ ಹರಿ ನೀನೆ ಗತಿಯೆಂದರೆ ಆ ಕ್ಷಣದಲ್ಲಿ ಕರಿಬಂಧನ ಪರಿಹರಿಸಿದೆ ಕೃಷ್ಣ 1 ಪಿತರು ಮಾತೆಯರಿದ್ದರೇನು ಸುತರಾಪತ್ತಿಗೊದಗಲಿಲ್ಲ ಗತಿ ನೀನೆಂದರೆ ಧ್ರುವ ಪ್ರಹ್ಲಾದರಿ- ಗ್ಹಿತ ಮಾಡಿದೆ ಶ್ರೀಪತಿ ಪರಮಾತ್ಮ 2 ವಲ್ಲಭರೈವರಿದ್ದರೇನು ವಸನ ದ್ರೌಪದಿಗುಡಿಸಲಿಲ್ಲ ಫುಲ್ಲಾಕ್ಷನೆ ಗತಿಯೆಂದರೆ ನೀ ತಡ- ವಿಲ್ಲದಲಕ್ಷಯ ನೀಡಿದೆ ದೊರೆಯೆ 3 ಮನೆಧನ ಧಾನ್ಯಗಳಿದ್ದರು ಧನಂಜಯ- ನ್ವನವಾಸಗಳನು ಬಿಡಿಸಲಿಲ್ಲ ವನಜಾಕ್ಷನೆ ವಾರಣಾವತಿ ದೊರೆತನ ವಿನಯದಿ ಕೊಟ್ಟಿದ್ದಿಂದಿರಾಪತಿಯೆ 4 ಭವ ಘೋರ ದುರಿತ ಯಮಬಾಧೆಗಳ ತಪ್ಪಿಸುವೋರಿಲ್ಲ ಶ್ರೀರಮಣನೆ ಭೀಮೇಶಕೃಷ್ಣನೆಂದು ಸಾರುವರಿಗೆ ಕರುಣಾವಾರಿಧಿ ಹರಿಯೆ 5
--------------
ಹರಪನಹಳ್ಳಿಭೀಮವ್ವ