ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1 ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2 ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3
--------------
ಚಿದಾನಂದ ಅವಧೂತರು
ವಿಜಯದಾಸರ ಸ್ತೋತ್ರ ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ದಿ- |ಗ್ವಿಜಯ ಮಾಡಿ ಸುಜನರನ್ನು ಪೊರೆವನನುದಿನ ಪ ದಾಸಪ್ಪನೆಂಬ ನಾಮದಿಂದ ಕರೆಸುತ ಉದರ ಗೋಸುಗದಿ ಪರರ ಬಳಿಯ ಆಶ್ರಿಸುತ ||ಯೇಸುಪರಿಯ ಬಡತನವು ಸೋಸಿ ದಣಿವುತ |ಕ್ಲೇಶಗೊಂಡು ಸುಲಿಸಿಕೊಂಡು ಕಾಶಿಗ್ಹೋಗುತ 1 ನಿತ್ಯ ಬ್ಯಾಸರದಲೆ ವ್ರತಗಳು ಉಪವಾಸ ಮಾಡುತ ||ರಾಶಿ ರಾಶಿ ಜನರ ಕೂಡಿ ದೇಶ ಚರಿಸುತ ಮ್ಯಾಲೆಕಾಶಿ ಬಿಟ್ಟು ಸೇತು ರಾಮೇಶನ್ನ ಹುಡುಕುತ 2 ತಿರುಗಿ ತಿರುಗಿ ಚೀಕಲಾಪರಿಗೆ ಬಂದನು ಕಂಡುಗುರುತು ಹಿಡಿದು ಆ ಕ್ಷಣದಿ ಕರೆದು ವೈದ್ಯರು ||ಪರಮ ಸಂತೋಷದಿಂದ ಭರಿತರಾದರು ಮೈನೆರೆದ ಶೋಭನಾದಿಗಳನು ತ್ವರಿತ ಮಾಡ್ದರು 3 ನಿತ್ಯ ಸಂಸಾರದಲ್ಲಾಸಕ್ತರಾಗುತ ದೊಡ್ಡ ಹತ್ತು ಎಂಟು ಗ್ರಾಮವನ್ನು ವತ್ತಿ ಆಳುತಾ ||ಗುತ್ತಿಗೆಯ ಹೊತ್ತ ರೊಕ್ಕ ಮ್ಯಾಲೆ ಬೀಳುತ ಯಿನ್ನುಎತ್ತ ಸೇರಲೆಂದು ಭಾಗೀರಥಿಗೆ ಹೋಗುತ 4 ಕಾಶಿಯೊಳಗೆ ಮಲಗಿರಲು ಸ್ವಪ್ನ ಕಂಡರು ಪುರಂದರ-ದಾಸರೇವೆಂಬುದು ವ್ಯಾಸ ಕಾಶಿಗೊಯ್ದರು ||ಶ್ರೀಶನಿಂದಲಿವರಿಗೆ ಉಪದೇಶ ಕೊಡಿಸೋರು ವಿಜಯ ದಾಸರೆಂದು ಕರೆಸಿರೆನ್ನೆ ಎದ್ದು ಕುಳಿತರು 5 ಕನಸಿನೊಳಗೆ ದೇವರ ದರುಶನಾಗುತ ಶ್ರೀ-ಮನಸಿಜನ ಪಿತನ ದಯವು ಘನ ಘನಾಗುತ ||ಜಿನಸು ಜಿನಸು ಪದ ಸುಳಾದಿಗಳನು ಪೇಳುತ ಆಗನೆನಿಸಿದಾಕ್ಷಣದಲಿ ಮುಖದಿ ಕವಿತ ಹೊರಡುತಾ 6 ಮತ್ತೆ ಹೊರಟು ಆದವಾನಿ ಸ್ಥಳಕೆ ಬಂದರು ಏನುಹತ್ತು ಜನರಿಗೆ ಪೇಳಿದ ವಾಕ್ಯ ಸತ್ಯವೆಂದರು ||ಸುತ್ತು ಮುತ್ತು ನೂರಾರು ದಾಸರು ನೆರೆದರು ಆನಿಸತ್ತಿಗಿ ಪಲ್ಲಕ್ಕಿಯವರೆ ಶಿಷ್ಯರಾದರು 7 ಯಾತ್ರಿ ತೀರ್ಥಗಳನು ಬಹಳ ಚರಿಸಿ ನೋಡುತ ಸ-ತ್ಪಾತ್ರರಲ್ಲಿ ನೋಡಿ ಧರ್ಮಗಳನೆ ಮಾಡುತ ||ರಾತ್ರಿ ಹಗಲು ವಿಜಯ ವಿಠ್ಠಲನೆಂದು ಪಾಡುತ ಜನರಶ್ರೋತ್ರಿಯಿಂದ್ರಿಯಗಳ ಉದ್ಧಾರ ಮಾಡುತ 8 ಪೂರ್ತಿ ಜ್ಞಾನದಿಂದ ಕರ್ಮವೆಲ್ಲ ಕಡಿದರು ಸ-ತ್ಕೀರ್ತಿವಂತರಾಗಿ ಬಹಳ ಖ್ಯಾತಿ ಪಡೆದರು ||ಕಾರ್ತಿಕ ಶುದ್ಧ ದಶಮಿ ದಿವಸ ನಡೆದರು ಶ್ರೀಸತ್ಯರಮಣ ಕೇಶವ ವಿಠಲನ್ನ ಕಂಡರು9
--------------
ಕೇಶವವಿಠ್ಠಲರು