ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪದೇಶಾತ್ಮಕ ಪದಗಳು ನೀಚವೃತ್ತಿಯ ಬಿಟ್ಟು ಸೋಚಿತ ಕರ್ಮವನೇ ಯೋಚನೆ ಮಾಡುತಾ ಪ ನೀಚ ಜನರುನು ಯಾಚಿಸದೆ ಸವ್ಯ ಸಾಚಿಯ ಸಖನ ಭಜಿಸೋ ಪ್ರಾಣೀ ಸರಸ ಸಲ್ಲಾಪ ಶ್ರೀ ಹರಿಕಥಾ ಶ್ರವಣ ನೀ ಪರಮಭಕ್ತರ ಸಂಗವಾ ನಿರುತದಲಿ ನೀ ಮಾಡಿ ಹರುಷ ಮನವನು ತಾಳಿ ಚರಿಸೊ ಈ ಧರಣಿ ಮಂಡಲಾ ಅರಸಿಗಾದರು ಒಮ್ಮೆ ಶಿರಸುಬಾಗದಲೆ ಶ್ರೀ ಹರಿದಾಸರಾ ಚರಣಕೆ ಎರಗ್ಯವರ ಮನಿದ್ವಾರಪರಿಚರನು ಎಂದೆನಿಸಿ ಭರದಿಂದ ಬಾಳಿ ಬದಕೋ ಇದಕೋ 1 ಅಲ್ಪ ಆಶೆಯ ಮಾಡಿ ಅಲ್ಪ ಮಾನವನಾಗಿ ಕಲ್ಪನೀಯನು ಮಾಡದೆ ಸ್ವಲ್ಪ ಫಲದಲಿ ಮನಸು ಕಲ್ಪಿಸಿ ಪ್ರಿತಿದಿನವ ನಲ್ಪ ಜನರನು ನಿಂದಿಸೀ ಅಲ್ಪನಾರೇರು ಮಾಳ್ಪ ಒಲ್ಪಿಗೆ ಮರುಳಾಗಿ ಪಲ್ಕಿಸಿದು ಬಾಯ್ದೆರೆಯದೆ ಸ್ವಲ್ಪಗಾಲದಲಹಿತಲ್ಪ ಪದಪದುಮಗಳ ಕಿಂ - ಜಲ್ಕ ನೀನಾಸ್ವಾದಿಸೋ ಲೇಸೋ2 ಪೊಡವಿ ಮೊದಲಾದ ಈ ಮಡದಿ ಮಕ್ಕಳು ಗೇಹ ವಡವಿ ವಸನವ ಬಯಸದೆ ಪೊಡವಿಮಂಡಲದಿ ಬಹು ಬಡವ ನಾನೆನುತಲೀ ಪೊಡವಿ ಪಾಲರ ಸೇವೆಯಾ ಧೃಢಮನದಿ ನೀ ಮಾಡೆ ಕೊಡರೊಂದು ದುಗ್ಗಾಣಿ ಕಡುಮೂರ್S ಎಲೊ ಪಾಪಿಯೇ ಬಿಡದೆ ದೈನ್ಯದಿ ನೀನು ಜಡಜನಾಭನ ಪಾದ ಬಿಡದೆ ಸೇವಿಸಲು ಫಲವ ಕೂಡುವಾ 3 ನಾ ಮಾಡೋ ವ್ಯಾಪಾರ ನೀ ಮಾಡಿಸುವಿ ಎಂಬ ಈ ಮಹಾಙÁ್ಞನ ಮಾರ್ಗ ನೇಮವಾಗಿ ತಿಳಿದು ಗ್ರಾಮ ಗ್ರಾಮದಲ್ಲಿದ್ದ ಪಾಮರೋತ್ತಮ ಜನರಿಗೆ ಧಾಮನಾಗಿಹ ನಮ್ಮ ರಾಮದೇವನ ಪಾದ ತಾಮರಸ ಕೊಂಡಾಡುತಾ ಪ್ರೇಮ ಹರುಷಾಮರ್ಷ ಯಾಮಯಾಮಕೆ ಬರಲು ಕಾಮಿಪುದು ನಿನಗೆ ಸಲ್ಲಾ ಖುಲ್ಲಾ 4 ನಗುವ ಜನರಾ ಕಂಡು ನಗುವುದೇ ಲೇಸೆಂದು ಸಿಗದೆ ಜನರೊಳು ತಿರುಗುತಾ ಬಗೆ ಬಗೆಯ ಮಾತುಗಳ ಬೊಗಳುವಾ ಜನರಿಗೆ ಹಗಲಿರಳು ಹರಿ ಕಾಯಲೀ ನಿಗಮ ವಂದಿತನ ಪ್ರತಿ ಮೆಗಳು ಇವು ಎಂದು ತಿಳಿಯೇ ನಗುತ ಹರುಷವ ಕೊಡುವ ಸುಗುಣಪೂರಣ ಗುರು ಜಗನ್ನಾಥವಿಠಲರಾಯಾ ಮರೆಯಾ 5
--------------
ಗುರುಜಗನ್ನಾಥದಾಸರು
(ಲಿಂಗಸುಗೂರಿನ ಹತ್ತಿರ ಚಿಲಕರಾಗಿ ಗ್ರಾಮದಲ್ಲಿರುವ ಗೇಣರಾಯನೆಂಬ ಪ್ರಾಣದೇವರು) ಗೇಣುರಾಯ ನಿನ್ನಾಮಹಿಮಿಯ |ಸ್ಥಾಣು ಅರಿಯ ಮುನ್ನಾ |ದೀನ ರಕ್ಷಕನೆಂಬೋ ಬಿರುದು ಕೇಳಿತವ |ಧ್ಯಾನವ ಕೊಡು ಎಂದೇ, ತಂದೇ ಪ ರವಿಜನ ಭಯದಿಂದ ಕಪಿಗಳು |ಲಯ ಚಿಂತೆಗಳಿಂದಾ ||ಪವನ ಕುವರ ಕಂಡಾಕ್ಷಣ ಈ ಭಯ |ತವಕನಚ್ಚಿ ಪೊರದೀ, ಮೆರದೇ 1 ಭೂಸುರ ಚಿಂತಿಸೆ ಬರಿದೀ ಈ |ಮೊರಿ ಕೇಳಿ ಆ ಶಿಶುವಿನ ಉಳಾಹಿದೇ ||ಘಾಸಿಗೊಳಿಸುವ ಘಳಬಕನೊರಸಿ |ಭಾಸುರ ಕೀರ್ತನೆಯ ಪೊರದಿ ಇಷ್ಟಾರ್ಥವ ಕರದೀ 2 ಪರಿಯೊಳು ಚಿಲಕರಾಗಿ ಗ್ರಾಮದೊಳು |ಮೆರೆಯುವ ಯತಿಯೋಗೀ ||ಗುರುಶ್ರೀಶ ಪ್ರಾಣೇಶ ವಿಠಲನ |ಚರಣ ಪೊಕ್ಕವರ ಸಲಹುವ ಕರುಣೀ | ಯೇಧಣಿ 3
--------------
ಶ್ರೀಶಪ್ರಾಣೇಶವಿಠಲರು
ಚಂದ್ರಹಾಸನ ಕಥೆ ಸುಜನ ತ್ರೈಭುವನೋದ್ಧಾರ ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1 ಭಕ್ತರ ಭಾಗ್ಯನಿಧಿಯೆ ನುಡಿಸಯ್ಯ ಎನ್ನ ಜಿಹ್ವೆಯಲಿ 2 ಅಜಹರಿಸುರ ವಂದಿತನೆ ನಿಜವಾಗೊ ಮತಿಗೆ ಮಂಗಳವ 3 ಸಂಗೀತಲೋಲೆ ಸುಶೀಲೆ ಹಿಂಗದೆ ನೆಲಸೆನ್ನ ತಾಯೆ 4 ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ ಮುಗಿದು ವಂದಿಸುವೆ 5 ಸೂರ್ಯ ಪತಿಯ ಚರಣವನ್ನು ನೆನೆವೆ ಮಂಗಳವಾಗಲೆಂದು 6 ಒರೆದಂಥ ಜೈಮಿನಿಯೊಳಗೆ ಮಾಡಿ ವರ್ಣಿಸುವೆ 7 ಸಂದೇಹ ಮಾಡುತ್ತಿರಲು ಪೇಳಿದ ಫಲುಗುಣಗೆ 8 ಮುಂದೊತ್ತಿ ರಥವ ಬೆಂಬತ್ತಿ ನಿಂದಿರಿಸಿದ ಚಂದ್ರಹಾಸ 9 ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10 ನ್ನೊಡೆಯಗೆ ಪೇಳಿದರಾಗ ಕಡುಚಿಂತೆಯಲಿ ಪಾರ್ಥನಿದ್ದ 11 ದಿನಕರ ಪ್ರತಿಬಿಂಬದಂತೆ ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12 ಉಟ್ಟಿಹ ಕರದಿ ವೇಣುವನು ಶ್ರೇಷ್ಠÀ ಬಂದನು ಇವರೆಡೆಗೆ 13 ಆನಂದದಿಂದ ಕೇಳಿದರು 14 ಎಲ್ಲ ವೃತ್ತಾಂತವನರುಹಿ ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15 ಪ್ರಮುಖರಿಲ್ಲ್ಯಾರು ಪೇಳೆನುಲು ಸಮಯವಲ್ಲವು ಪೇಳೆನಲು 16 ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17 ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು ಪ್ರಧಾನಿಯನು 18 ಭೂತಮೂಲದಲಿ ಪುಟ್ಟಿದನು ತಾತ ಕಾಲವಾಗಿ ಪೋದ 19 ಸಾಯಲಾದಳು ರಾಜಪತ್ನಿ ಸಿರಿ ಪರರಾಯರು ಬಂದು ಕಟ್ಟಿದರು20 ಬಾಲನಿರಲು ಆ ಶಿಶುವೆತ್ತಿ ನಡೆದಳು 21 ಕುಂತಳಪುರಕಾಗಿ ಬಂದು ಆ ಗ್ರಾಮದಲ್ಲಿ 22 ಎರೆದು ಪೋಷಣೆಯ ಮಾಡುವಳು ಮರುಗುತಿರ್ದಳು ಮನದೊಳಗೆ 23 ಹಾಸುವ ವಸ್ತ್ರಗಳಿಲ್ಲ ಬೇಸತ್ತು ಅಳಲುವಳೊಮ್ಮೆ 24 ನೋಡಿ ಹಿಗ್ಗುವಳು ಆಲಂಬದಲ್ಲಿರುತಿಹಳು 25 ಕಂಗಳ ಕುಡಿನೋಟವೆಸೆಯೆ ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ- ದೊಳಗಾಡುತಿಹನು 26 ಪರಪುಟ್ಟನಾದುದ ಕಂಡು ಮಡಿಯ ಪೊದಿಸುವರು 27 ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ- ರೋಗರವನ್ನು ಉಣಿಸುವರು ರಾಗಗಾನದಲಿ ಪಾಡುವರು 28 ಎಣ್ಣೂರಿಗೆಯನು ಕೊಡಿಸುವರು ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29 ತಮ್ಮಾಲಯದೊಳು ಕರೆದೊಯ್ದು ಮಾಲೆಯನವಗೆ ಹಾಕುವರು 30 ಮಾವಿನ ಫಲಗಳನು ಮದನನಯ್ಯನ ಕಿಂಕರಗೆ 31 ಸಾಲಿಗ್ರಾಮ ಶಿಲೆಯ ಅಷ್ಟು ಜನರಿಗೆ ತೋರಿಸಿದ 32 ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು ಲಕ್ಷ್ಮಿನಾರಾಯಣ ಮೂರುತಿಯ 33 ಕೂಡಿದ ಗೆಳೆಯರ ಕೂಡೆ ದೌಡೆಯೊಳಿಟ್ಟು ಕೊಂಡಿಹನು 34 ಮಂಡೆಗಳನು ತಗ್ಗಿಸುವನು 35 ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು ಬಾಯೊಳಗಿಡುವ 36 ಮಂದಿರದಲಿ ವಿಪ್ರರಿಗೆ ಆ- ಬಂದರು ಬುಧಜನರೆಲ್ಲ 37 ಶ್ರೇಷ್ಠರೆಲ್ಲರ ಕುಳ್ಳಿರಿಸಿ 38 ಮಂತ್ರಾಕ್ಷತೆಯನು ಮಂತ್ರಿಗಿತ್ತು ಲಕ್ಷಣವನ್ನೆ ನೋಡಿದರು 39
--------------
ಹೆಳವನಕಟ್ಟೆ ಗಿರಿಯಮ್ಮ
ಸಂತರ ಸಹವಾಸ ಮಾಡು ಮನುಜ ನೀ | ಭ್ರಾಂತ ಜನರ ಸಂಗ ವೀಡ್ಯಾಡು | ಅಂತರಂಗದಲಿ ಸುಖವ ಸೂರ್ಯಾಡು | ಅ | ನಂತನ ನಾಮವ ಕೊಂಡಾಡು ಪ ದಾವ ಗ್ರಾಮದಲ್ಲಿ ಧನ ಧಾನ್ಯ ಬನವು | ತೀವಿಕೊಂಡಿಹ ಸಂದಣಿ ಜನವು | ಆವೂರೊಳಿಲ್ಲದಿರೆ ಸಂತರನವು | ನೀ ವಾಸ ಮಾಡಬ್ಯಾಡ ಅರಕ್ಷಣವು 1 ಎಲ್ಲಿ ನೋಡಲು ದಿವ್ಯ ಪಟ್ಟಣಲ್ಲಾ | ಚಲ್ಪಗೋಪುರ ಮನುಧೊರೆರಿಲ್ಲಾ | ಅಲ್ಲಿ ಸಾಧುರ ನರಹಳಿದಲ್ಲಾ | ನಿಲ್ಲು ಕಾಲೂರಿ ಸುಖವಿಹುದೆಲ್ಲಾ 2 ಅವರಿದ್ದುದೆ ಸ್ಥಳ ವಾರಣಾಸೀ | ಅಚರ ದರುಶನ ಪುಣ್ಯದ ರಾಶೀ | ಅವರ ನೆರೆಯಲ್ಲಿ ಸ್ವರ್ಗ ಸುಖದಾಶಿ | ಈ ವಾಕ್ಯ ಮಹಿಪತಿ ಜ ನಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತಿಯ ಕೆಲವುರ ವಾಸನ ಸ್ತೋತ್ರ (ಲಿಂಗಸುಗೂರಿನ ಹತ್ತಿರವಿರುವ ಸಂತಿಕೆಲೂರ ಗ್ರಾಮದಲ್ಲಿಯ ಪ್ರಾಣದೇವರು) ಸಂತಿಯ ಕೆಲವುರವಾಸ ಭಾರತಿ |ಕಾಂತನು ಶ್ರೀ ಹರಿದಾಸಾ ||ಸಂತಸ ಸೇವಿಪರಘ ಓಡಿಸಿ | ನೀ |ಶ್ಚಿಂತರಮಾಡಿ ಪೊರೆವ ದಯಾಳೋ ಪ ದಾಶರಥಿಯ ಪದಕೆರಗೀ | ನಿಂದುಲೇಸಾಗಿ ತುತಿಸುವ ಯೋಗೀ ||ಸಾಸಿರ ನಾಮನ ರಾಣಿಯಕಂಡು |ತೋಷದಿ ಸ್ವಾಮಿಗೆ ವಾರ್ತಿಯ ಪೇಳಿದ 1 ಕುಂಚಿ ಕುಮಾರಕ ನೆನಸೀ | ಮಹಹಂತ ಕೌರವರನೊರಸೀ ||ಕಾಂತಿಗೆ ಸೌಗಂಧಿಕ ಪುಷ್ಪವ ಮುಡಿಸಿ | ಶ್ರೀಕಾಂತನ ಪ್ರಿಯ ಭೂಭಾರವನಿಳುಹಿದ 2 ಆನಂದ ತೀರಥರಾಗಿ | ಪರಮಾನಂದದಿ ಕುಮತವನೀಗಿ ||ನಂದನ ಸುತ ಶ್ರೀಶ ಪ್ರಾಣೇಶ ವಿಠಲಾ |ನಂದನೆ ಪರನೆಂದು ಡಂಗುರ ಸಾರಿದ 3
--------------
ಶ್ರೀಶಪ್ರಾಣೇಶವಿಠಲರು