ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪಕಾರವ ನೋಡೋ ಮಾಡಿದ ಪ ಕೃಪೆ ಬೇಡುವುದತಿಶಯವೇ ಪೇಳೊ ಅ.ಪ ಪಾಲಕ ನೀ ಹದಿನಾಲ್ಕು ಜಗಂಗಳಿಗೆ ಮೂಲೆಯ ಗ್ರಾಮದಲಡಗಿ ಬೇಸರದಿ ಕಾಲಕಳೆಯುವುದ ನೋಡಿ ಮರುಕದಲಿ ಬಾಲ ಮೂರುತಿಯ ಜಗಕೆ ತೋರಿಸಿದ 1 ಅಡಕು ಮಣೆಗಳಲಿ ಪೂಜೆಯಗೊಳ್ಳುತ ಒಡಕು ತೊಗರಿ ಹುಳಿಯನ್ನವ ಮೆಲ್ಲುತ ಬಡತನದಲಿ ಜೀವನ ಕಳೆಯುತಿರೆ ಪೊಡವೀಶನ ಭೋಗಗಳನು ಉಣಿಸಿದ 2 ಮಣಿ ಮಂದಿರ ವಿಧ ವಿಧ ಅಂದದ ಮುತ್ತಿನ ಹಾರ ಪದಕಗಳು ತಂದೆ ಪ್ರಸನ್ನನೇ ಸಾಸಿರ ಸಾಸಿರ ಮಂದಿಗಳಿಗೆ ವೈಭವಗಳ ತೋರಿದ 3
--------------
ವಿದ್ಯಾಪ್ರಸನ್ನತೀರ್ಥರು