ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತರನ ನಂಬದಿರು ಭವದೂರನೆ ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ಪ ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು ಹಸ್ತು ಬಂದವನು ತುತ್ತನ್ನ ಕೇಳೆ ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ1 ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ ಆದರದಲಿ ಸ್ವಲ್ಪ ಸ್ಥಳವ ಕೇಳಿ ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು2 ಆವದೊಲ್ಲೆವೆಂದು ಆಡುವರು ನಿತ್ಯದಲಿ ಕಾವ ಕರುಣಿ ನೀನೆಂದು ತಿಳಿದು ಸಿರಿ ವಿಜಯವಿಠ್ಠಲ ನಿನ್ನ ಇಂದು 3
--------------
ವಿಜಯದಾಸ
ವಂದಿಸಿ ಬೇಡುವೆ ನವಗ್ರಹರ ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ ಭಾಸುರ ಸೂರ್ಯನು ಭಾಸಿಸಲಿ ತತ್ವವನು ಶ್ರೀ ಸಹೋದರ ಚಂದ್ರ ತೋಷವನು ಸೂಸಿ ಕೊಡಲಿ ಮಂಗಳವನು ಮಂಗಳ ಲೇಸಾದ ಪಾಂಡಿತ್ಯ ಪಂಡಿತನೀಯಲಿ 1 ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ ಕವಿ ಕೊಡಲಿ ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ ಕಂಗೆಡಿಸುವ ರುಜೆ ರಾಹು ತಪ್ಪಿಸಲಿ 2 ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ ಬಿಡದಲೆ ಧ್ವಜಿಯು ಸಡಗರದಿ ಕಡು ನವಗ್ರಹಗಳು ಪಿಡಿಗ್ರಹವಾಗಲಿ ಸಿರಿ ದೃಢದಿ ದಿನದಿನದಿ 3 ತರಣಿ ಕುಮಾರ ಮಣಿ ಹಾರ ದಾರಿದ್ರ್ಯದೂರ ಹರಿಸು ಅರಿಷ್ಟವ ಸುರಿಸು ಮನೇಷ್ಟವ ಎರಗುವೆ ಸಂಕಟಗೊಳಿಸದಿರುತ್ಕಟ 4 ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ ನಿರುತದಿ ಪಠಿಸಲು ಗ್ರಹ ಪೀಡೆಯು ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು ತುರುಗಗ್ರೀವನ ದಯದಿ ಸರ್ವ ಸಂಪದಬಹುದು 5 ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು ಚಾರು ಕನ್ನಡ ಗೀತ ರೂಪದಿಂದ ಸಾರಿದ ಲಕ್ಷ್ಮೀನಾರಾಯಣ ಶರ್ಮನು ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು 6 ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ ನಮೋ ಗುರು ಭಾರ್ಗವ ನಮೋ ಶನೈಶ್ಚರನೇ ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ 7
--------------
ಲಕ್ಷ್ಮೀನಾರಯಣರಾಯರು