ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಯಾತಕೊ ಭಯ ಭೀತಿ ಚಪಲತೆಯು ನಿನ ಗ್ಯಾತಕೊ ಮೂಢಮಾನವ ಪ ಪಾತಕವಳಿ ಗುರುನಾಥನ ಕೃಪೆಯೊಳು ಭೂತಳದತಿಶಯದಾತನು ಕಾಣುವಾ ಅ.ಪ ಈತರದಿ ನೀ ಬಾರದಿರುವಿಯಲ ಮೂಢಮಾನವ ರಾತ್ರಿ ಬೆಳಕಿನೊಳೇಕವಾಗೋ ಭಲಾಸಿ ಶೀತೆಯ ಕೊಂಡೊಯ್ದಾತನ ತಮ್ಮಗೆ ಪ್ರೀತಿಲಿ ಸ್ಥಿರಪದವಿತ್ತನು ಚೀ ಚೀ ನಿನಗ್ಯಾತಕೋ 1 ಯಾತ್ರೆ ಮಾಡೆಲೊ ಕ್ಷೇತ್ರವನ್ನರಿತು ಮೂಢಮಾನವ ಸೂತ್ರ ಪಿಡಿದಲ್ಲಿ ಪಾತ್ರನಾಗೆಲೊ ಧಾತ್ರಿಯೊಳು ತುಲಶೀರಾಮನು ಮಾತ್ರ ತಾ ನಿಜ ಧೋತ್ರವ ತೊಡಿಸುವ ಯಾತಕೊ 2
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀ ಧೀರೇಂದ್ರರು ಚಾರು ನಿಮ್ಮಯ ಚರಣತೋರಿಸುದ್ಧರಿಸಬೇಕೊ ಪ. ಆರು ಇವನೆಂದು ನೀವ್ ಗಾರುಮಾಡದಲೆನ್ನ ಸಾನುರಾಗದಿ ಪೊರೆಯಬೇಕೊ ಸ್ವಾಮಿ ಅ.ಪ. ವರದಾ ತೀರದಿ ನಿಂದು ವರ ಕೊಡಿವೀಯೆಂದು ಘನಗರ್ವ ನಿನಗ್ಯಾತಕೊಸುರಪತಿಯ ಬಲದಲ್ಲಿ ಇಹೆನೆಂದು ನೀ ಬಲು ಜರಿದು ನೋಡಲಿ ಬ್ಯಾಡವೊಆರುಗತಿಯಿಲ್ಲವೆಂದೀರ ನಿನ್ನೆಡೆ ಬರಲು ಏರಿ ಕೂಡ್ರುವುದುಚಿತವೇಸಾರಿ ಹೇಳುವೆ ನಿನಗೆ ಚೋರದಾಸನು ನಾನು ಘೋರರೂಪದಿ ಬಂದು ತೋರೋ ಸ್ವಾಮಿ 1 ರಘುಕುಲತಿಲಕನ ಭಕ್ತಿಪಾಶದಿ ಕಟ್ಟಿಚಕ್ರವರ್ತಿಯೆನಿಸಿ ಗೋಕುಲದ ಗೊಲ್ಲನ ಯುಕುತಿಯಲಿ ನೀನೊಲಿಸಿದ್ಯೊಶಕ್ತಿಯಿಂ ಕಲಿಯುಗದಿ ಧೀರೇಂದ್ರ ಪೆಸರಿನಿಂ ದುರಿತಗಳ ಕಳೆಯುವಿಯೊಧಿಃಕರಿಸಿ ವಾದಿಗಳ ದೇಶದೊಳ್ ಚರಿಸಿದ ವಸುಧೀಂದ್ರ ಸಂಜಾತ ಪೊರೆಯೆ ಸ್ವಾಮೀ 2 ಹೆಣ್ಣಿನಾಶೆಗೆ ಬಿದ್ದು ಹೊನ್ನು ಸ್ಥಿರವೆಂದು ನಾ ಮಣ್ಣುಪಾಲಾದೆನೊತನುವು ತನ್ನದು ಎಂಬ ಭಿನ್ನ ಜ್ಞಾನವನೇ ಹೊಡೆದೋಡಿಸೆಮಾನ್ಯವಂತರ ಸಂಗ ಇನ್ನು ಮೇಲಾದರೂ ದಯಪಾಲಿಸೊಘನ್ನ ಮಹಿಮಾ ತಂದೆವರದವಿಠಲನಲ್ಲಿ ಜ್ಞಾನದಿಂ ಭಕ್ತಿ ವ್ಯೆರಾಗ್ಯವನೆ ಈಯೋಸ್ವಾಮಿ 3
--------------
ಸಿರಿಗುರುತಂದೆವರದವಿಠಲರು