ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆ ಮಾಡಮ್ಮ ಮಂಗಳಗೌರಿ ಬೇಡಿಕೊಂಬೆನೆ ನಿನಗೆ ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆ ಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ಪ ನಂದಿವಾಹನನರ್ಧಾಂಗಿಯ ಪೂಜಿಸಿ ಗಂಧಕುಂಕುಮದಿಂದ ತಂದು ಕಸ್ತೂರಿ ಕಮಲದ ಪುಷ್ಪಗಳುಡಿ ತುಂಬಿ ನೈವೇದ್ಯವ ತಂದಿರಿಸುವೆ ತಾಯೆ 1 ಅಚ್ಚ ಮುತ್ತಿನ ಹರಿವಾಣದಿ ಮಾಲತಿ ಬಟ್ಟ್ಟಿವಿ ಗೌಲಿಗಳು ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಪ್ಪ 2 ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ ದುಂಡುಗುಳ್ಳೋರಿಗೆಯು ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು ಅಂದವಾದ ಕಾಯಿರಸ ಶಾಖ ಪಾಕವು 3 ಸಣ್ಣ ಅಕ್ಕಿಯ ಶಾಲ್ಯಾನ್ನಕೊಪ್ಪುವ ತವ್ವೆ ಇನ್ನು ದಧ್ಯನ್ನಗಳು ಸನ್ಮತವಾಗಿದ್ದ ಶಾವಿಗೆಫೇಣಿ ಸಕ್ಕರೆ ರುಬ್ಬಿದ ಆಂಬೊಡೆ ರುಚಿಯಾದ ಕಲಸನ್ನ 4 ಘೃತ ಸೀಕರ್ಣೆ ಕಾಯ್ಹಾಲು ಹೊಯ್ಗಡುವನಿಟ್ಟು ಸಾರು ಸಾಂಬಾರ ಚಟ್ಟಣಿ ಕೋಸಂಬರಿ ನೀರೆ ನಿನಗೆ ಪನ್ನೀರು ತಂದಿರಿಸುವೆ 5 ದೇವಿ ನಿನ್ನ ಮನೋಭಾವ ತಿಳಿದು ನಾ ಭೀಮೇಶಕೃಷ್ಣನಿಗೆ ಬ್ಯಾಗ ಸಮರ್ಪಣೆ ಮಾಡಲು ಮಹಾದೇವ ಸ್ವಾದ ಸವಿದಾಸುಖದಿಂದಡ್ವಿಳ್ಯವ ಕೊಳ್ಳೆ 6
--------------
ಹರಪನಹಳ್ಳಿಭೀಮವ್ವ
ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಭೂಮ ಇಡುಬಾರೆ ದ್ರುಪದರಾಯನರಸಿ ಭೀಮಧರ್ಮಾರ್ಜುನ ನಕುಲ ಸಾದೇವ ದ್ರೌಪದಿ ಕುಳಿತ ಎಲೆಗೆ ಪ ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ ಚೆಂದದ ಶಾಲ್ಯಾನ್ನ ಶಾವಿಗೆಫೇಣಿಗಳು ಎಣ್ಣೋರಿಗೆಯು1 ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟಿವಿ ಮಾಲತಿಯು ಗೌಲಿ ಬಟ್ಟಲೋಳ್ ತುಂಬಿಟ್ಟು ಪರಡಿ ಪಾಯಸಘೃತ ಸಕ್ಕರೆಯು 2 ಕುಸುಮ ಮಲ್ಲಿಗೆ ಮುಡಿದು ನಡೆದು ಬಂದು ಭೀಮೇಶಕೃಷ್ಣ ಸಖರ್ಹೊಂದಿ ಕುಳಿತರು ಕೃಷ್ಣೆಸಹಿತ3
--------------
ಹರಪನಹಳ್ಳಿಭೀಮವ್ವ