ರಾಮ ರಾಮ ರಾಮ ಹರೇ ರಘೂ ಪ
ರಾಮ ಜಾನಕಿ ಪ್ರೇಮ ಕೃಪಾಂಬುಧಿ ಸ್ವಾಮಿ
ಪರಂಧಾಮ ಸಾರುಚಿವರದಾ ಅ.ಪ
ಪತಿತಪಾವನದೇವಾ ಸದ್ಭಕ್ತರ
ಸತತ ಬಿಡದೆ ಕಾಯುವಾ ಮಹಾನುಭಾವ-
ನತಿಶಯದಲಿ ಮನಹಿತದಲಿ ಅನುದಿನ
ಸ್ತುತಿಯನು ಮಾಡುವರಿಗೆ ಗತಿ ಕಾಣಿಸುವಂಥ 1
ಅಂಡಜವಾಹನನೆ ಅನೇಕ ಭೂ
ಮಂಡಲ ನಾಳುವನೆ ಮಣಿಯ ಮುಕುಟಧರನೆ
ಉದ್ದಂಡ ರಕ್ಕಸರಳಿದ
ಚಂಡಪರಾಕ್ರಮಿ2
ಪನ್ನಗಾದ್ರಿಯವಾಸಾ ಭಜಕರ ಪೋಷಾ ಶ್ರೀ
ಹೆನ್ನವಿಠ್ಠಲ ವೇಶಾ ಪರಮೋಲ್ಹಾಸಾ
ಚಿನ್ಮಯ ಮೂರುತಿ ಶ್ರೀ ಗೌರೀವರಪ್ರಿಯ
ಮದನ ಜನಕ ಹರೆ 3