ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡಲಾರೇ ಬಿಡಲಾರೇ ಪ ಕಡಲೊಳು ಪವಡಿಪ ಮೃಡನುತನಾಮನ ಅ.ಪ ಕಾಶಿಯೊಳಗೆ ವಿಶ್ವೇಶನು ಬೋಧಿಪ ದಾಶರಥಿಯ ವರ ಸಾಸಿರ ನಾಮವ 1 ಗೌರವದಿಂದಲಿ ಗೌರಿಯು ಜಪಿಸುವ ಗೌರನೆನಿಪದುರಿತಾರಿಯ ನಾಮವ 2 ಭಕ್ತರು ಸಕಲ ವಿರಕ್ತರು ನಿತ್ಯದಿ ರಕ್ತಿಪಡುವ ಗುಣಯುಕ್ತನ ನಾಮನ 3 ಇಷ್ಟದಿ ನೆನೆವರ ಕಷ್ಟವಳಿದು ಮನ ದಿಷ್ಟ ಕೊಡುವ ಪರಮೇಷ್ಟಿಯ ನಾಮವ 4 ಚರಣವ ನಂಬಿದ ಶರಣರ ಪೊರೆಯುವ ವರದವಿಠಲ ದೊರೆ ವರದನ ನಾಮವ 5
--------------
ವೆಂಕಟವರದಾರ್ಯರು
ರಜತಗಿರೀಶ್ವರ ಮಹಾನುಭಾವ ಗಜಚರ್ಮಾಂಬರ ನಮೋ ನಮೋ ಪ ವಿಜಯರಾಮಾರ್ಚಿತ ಪದಕಮಲ ಅಜಸುತ ಸೇವಿತ ನಮೋ ನಮೋ ಅ.ಪ ವಾರಣಾಸಿ ಸುಕ್ಷೇತ್ರ ನಿವಾಸ ಪರಮೋಲ್ಲಾಸ ನಮೋ ನಮೋ ಭೂರಿ ವೈಭವಾನಂದ ವಿಲಾಸ ರವಿಶತಭಾಸಾ ನಮೋ ನಮೋ 1 ನಾದಾಲಂಕೃತ ವರದಾತಾ ಶ್ರೀ ಗೌರಿಯುತ ನಮೋ ನಮೋ ಭಾಗೀರಥೀಪ್ರಿಯ ಲೋಕನುತ ದೇವೇಂದ್ರಾತ ನಮೋ ನಮೋ2 ಮಂಗಳದಾಯಕ ಶಶಿಶಿಖರ ಸಂಗವಿದೂರಾ ನಮೋ ನಮೋ ಮಾಂಗಿರಿ ಶೃಂಗವಿರಾಜಿತಶಂಕರ ಶರಣಶುಭಂಕರ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್