ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪಣ ಶ್ರೀಪಾದಾರ್ಚನೆಯನಿತ್ತು ಪ ಅಪಾರ ಜನುಮದ ಪಾಪೌಘ ಬೆನ್ನಟ್ಟಿ ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ. ಪತಿತ ನಾನಾದರೂ ಪತಿತ ಪಾವನ ನೀನು ಪಶುಪತಿ ಪಾಪಹರ ಗತಿಹೀನರಿಗೆ ನೀನೆ ಗತಿದರ್ಶಕನೆಂದು ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1 ಭವಭವದಲಿ ಬಂದು ಬವಣೆಗಳಲಿ ಬೆಂದು ಬಳಲಿದೆ ಭಕ್ತ ಬಂಧು ಭವಹರ ನೀನೆಂಬುದನು ಭವಿಗಳಿಂ ನಿತ್ಯ ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2 ಗೌರಿ ಮನೋಹರ ಗೌರಾಂಗ ಭಕ್ತರು ದ್ಧಾರಿಯೆ ಶೂಲಧರ ಸಾರಿದೆ ನಿನ್ನಂಘ್ರಿವಾರಿಜಯುಗಳವ ಕಾರುಣ್ಯದಲಿ ನೋಡು ಅಭಯವ ನೀಡು 3 ಮುಪ್ಪುರಹರ ಮುಕ್ಕಣ್ಣ ಗಂಗಾಧರ ಮೃತ್ಯು ಮೃತ್ಯುವೆ ಶಂಕರಾ ಸರ್ಪಭೂಷಣ ಅಪಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ಸುರೇಶ 4 ಅಜ ಸಂತನಧ್ವರ ಭಜನೆಯ ಕೆಡಿಸಿದ ವಿಜಯ ವಿಗ್ರಹ ಶರೀರ ಸುಜನರ ಹೃದಯಾಂಬುಜದಲ್ಲಿ ಮಿನುಗುವ ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
--------------
ಲಕ್ಷ್ಮೀನಾರಯಣರಾಯರು
ಗೋಕರ್ಣೇಶಂ ಗೌರೀಶಂ ವಂದೇ ನತಜನಭಯನಾಶಂ ಪ. ಪಾಕಹ ಮದನದಿವಾಕರಪ್ರಮುಖ ದಿ- ವೌಕಸಕೃತ ಜಯಜಯಘೋಷಂ ಅ.ಪ. ಕರ್ಪೂರಕ್ಷೀರಗೌರಾಂಗಂ ಕಲ್ಯಾಣನಿಧಿಂ ನಿಸ್ಸಂಗಂ ದರ್ಪಕದರ್ಪಹರಂ ತಮುದಾರಂ ಸರ್ಪಫಣಾಮಣಿಹಾರಂ ಘೋರಂ 1 ಲಕ್ಷ್ಮೀನಾರಾಯಣಸಖಂ ಸುರಾ- ಧ್ಯಕ್ಷಂ ಶಿವಂ ವಿಗತಶೋಕಂ ದಕ್ಷಾಧ್ವರವಿಧ್ವಂಸನಚತುರಂ ಮೋಕ್ಷಜ್ಞಾನದಂ ಸಮ್ಮೋಹಭಿದಂ2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗೋಕರ್ಣೇಶಂ ಗೌರೀಶಂ ವಂದೇ ನತಜನಭಯನಾಶಂಪ. ಪಾಕಹ ಮದನದಿವಾಕರಪ್ರಮುಖ ದಿ- ವೌಕಸಕೃತ ಜಯಜಯಘೋಷಂಅ.ಪ. ಕರ್ಪೂರಕ್ಷೀರಗೌರಾಂಗಂ ಕಲ್ಯಾಣನಿಧಿಂ ನಿಸ್ಸಂಗಂ ದರ್ಪಕದರ್ಪಹರಂ ತಮುದಾರಂ ಸರ್ಪಫಣಾಮಣಿಹಾರಂ ಘೋರಂ1 ಲಕ್ಷ್ಮೀನಾರಾಯಣಸಖಂ ಸುರಾ- ಧ್ಯಕ್ಷಂ ಶಿವಂ ವಿಗತಶೋಕಂ ದಕ್ಷಾಧ್ವರವಿಧ್ವಂಸನಚತುರಂ ಮೋಕ್ಷಜ್ಞಾನದಂ ಸಮ್ಮೋಹಭಿದಂ2
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣು ಹೈಮವತೀಶ ಶಿವಶಂಭು ಅವಿನಾಶ | ಶರಣು ಧನಪತಿ ಮಿತ್ರ ಪಾವನತರಚರಿತ್ರ | ಶರಣು ದಾನವವಿಪಕ್ಷಾ || ಶರಣು ಕರ್ಪೂರ ಗೌರಾಂಗ ಗುಣಮಂದಾರ | ಶರಣು ಶೃತಿಪೃತಿಪಾದ್ಯಯೋಗಿಮನಕಾಭೇದ್ಯ | ಶರಣು ಆನಂದ ಕಂದಾ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂಪ್ರದಾಯದ ಹಾಡುಗಳು (ಗುರುವಾರದ ಶುಭದಿನದಂದು) ಅಂಗಿರಾವುತನನ್ನು ನೋಡಿರೊ ನಿತ್ಯ ಮಂಗಳ ಮಹಿಮೆಯ ಪಾಡಿರೊ ಪ. ಗುರುವಾಸರ ಬಂದು ಒದಗಲು ನಾನಾ ಪರಿಯ ಪುಷ್ಪಗಳ ತಂದಿರಿಸಲು ದೊರೆಯು ಗೌರಾಂಗಿಯ ಧರಿಸಲು ನೋಡೆ ದುರಿತ ರಾಶಿಗಳ ಪರಿಹರಿಸಲು 1 ಶಂಖ ಚಕ್ರ ಗದಾಬ್ಜ ಗದೆಗಳನು ನಿಃ- ಶಂಕೆಯಿಂದ ಧರಿಸಿರುವನು ಮಂಕು ಮನುಜರಿಗೆ ದೊರಕುವಾ- ತಂಕಗಳೆಲ್ಲ ಪರಿಹರಿಪನಾ 2 ಇಂದಿರೆಯನು ಮೋಹಗೊಳಿಸುವ ಪೂರ್ಣಾ ನಂದ ವೆಂಕಟರಾಜನಿರುತಿಹ ಚಂದವ ನೆನೆವುತ್ತ ಸ್ತುತಿಸುವ ಭವ ಬಂಧಗಳೆಲ್ಲ ಕತ್ತರಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೊಂದಿ ಬದುಕಿರೈಯ್ಯಾ ದೇವನಾ | ತರು | ಣೇಂದು ಶೇಖರ ಉಮಾ ಧವನಾ || ವಂದಿಸಿದವರಘವೃಂದ ನಿವಾರಿಸಿ | ಕೈವಲ್ಯ ತಂದು ಕೊಡುವನಾ ಪ ಸ್ಮರಿಸಿದವರ ಬದಿಯಲಿರುವಾ | ತನ್ನ | ಶರಣರಿಷ್ಟಾರ್ಥವಗರವಾ || ಕರುಣದಿ ಪತಿತರುದ್ಧರಿಸಲು | ತಾರಕ | ಗುರುರೂಪ ತಾನಾಗಿ ಧರೆಲಿ ಮೆರೆವನಾ 1 ಗಗನಧುನಿ ಧರಿಸಿದನಾ | ಬೆಟ್ಟ | ಮಗಳಿಗೆ ಅರ್ಧಾಂಗಿ ನೀಡಿಹನಾ || ನಿಗಮಾಗ ಮಂಗಳಯುಗತಿಗೆ | ನಿಲುಕದು | ನಿಲುಕದುರಗ ಭೂಷಣ ಭಸ್ಮಾಂಗ ವಿಗಢ ನಾಟಕನಾ 2 ಘನಸಾರ ಗೌರಾಂಗ ಹರನಾ | ತಪ್ತ | ಕನಕ ವರ್ಣ ಜಟಾಧರನಾ || ಮುನಿಜನ ಶುಭತದವನ ಚೌರ್ಚಿತ | ಪದ || ಅನುದಿನ ಮಹಿಪತಿ ಜನ ಸಲಹುವನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು