ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯವಿಲ್ಲೋ ಭಯವಿಲ್ಲೋ ಭಯಹರ ನರಸಿಂಗನಡಿಯ ದಾಸರಿಗೆ ಪ ವೃಶ್ಚಿಕ ಮುಟ್ಟಲು ಬಾಧೆಯೆ ಇಲ್ಲ ತಕ್ಷ ಕಚ್ಚಲು ವಿಷವಂಟೋಣಿಲ್ಲ ಅಚ್ಯುತಾನಂತನ ಹೆಚ್ಚಿನಡಿದಾವರೆ ಮುಚ್ಚಿಭಜಿಪ ಮಹ ನಿಶ್ಚಲಚಿತ್ತರಿಗೆ 1 ಕಳ್ಳರು ಮುತ್ತಲು ಸುಲಕೊಂಬೋಣಿಲ್ಲ ದಳ್ಳುರಿ ಹತ್ತಲು ಸುಡುವ ಶಕ್ತಿಲ್ಲ ಪಾದ ಉಲ್ಲಾಸ ಮನದಿಂದ ನಿಲ್ಲದೆ ಭಜಿಪರ್ಗೆ ಎಳ್ಳಷ್ಟಾದರು 2 ಹುಲಿ ಕರಡಿ ಬದು ನುಂಗುವ ತ್ರಾಣಿಲ್ಲ ಬಲು ಭೂತ ಬೇತಾಳ ಎದುರೆ ಇಲ್ಲ ಮಲಿನಹರಣ ಕೃಪಾನಿಲಯ ಭಕ್ತಜನ ಸುಲಭನೆಂದೊದರುತ ನಲಿವ ನಿರ್ಮಲರಿಗೆ 3 ಭೂಪತಿಗಳ ಭಯ ರೋಮಕೆ ಇಲ್ಲ ಪಾಪತಾಪಗಳ ಲೇಪವೆ ಇಲ್ಲ ಆ ಪರಬ್ರಹ್ಮ ಜಗದ್ವ್ಯಾಪಕನನುದಿನ ಗೌಪ್ಯದಾರಾಧಿಸುವ ಪಾಪಲೋಪರಿಗೆ 4 ಏಸು ಕಷ್ಟಬಂದರಾಯಾಸವಿಲ್ಲ ನಾಶ ಮೃತ್ಯು ಗಾಳಿಸೊಂಕೋಣಿಲ್ಲ ಹೇಸಿ ದುರ್ಭವದ ವಾಸನಳಿದ ಮಹ ಶ್ರೀಶ ಶ್ರೀರಾಮನ ದಾಸದಾಸರಿಗೆ 5
--------------
ರಾಮದಾಸರು