ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ ಬಂದು ಜಮದಗ್ನಿಗಳಿಗೊಲಿದು ಬಂದು ನಿಮ್ಮಯ ಸೇವೆ ಮಾಡಿದ ಭಕ್ತರಿಗೆ ಆ ನಂದ ಪದವಿಯನೀವ ಇಂದಿರೇಶನಿಗೆ 1 ಅಂದು ಗೌತಮಸತಿಯ ಇಂದ್ರನು ಮೋಹಿಸಿ ಬಂಧನಕ್ಕೊಳಗಾಗೆ ಬಂದು ನಿಮ್ಮ ಪಾದಸೇವೆಯ ಮಾಡೆ ಪಾಪವೆಲ್ಲವ ಕಳೆದು ಅಮರಪದವೀವ ನಿತ್ಯಪರಮಪುರಷನಿಗೆ2 ಇಂದ್ರಗಿರಿ ಮಹೇಂದ್ರತೀರ್ಥವೆಂದೆನುತ ಆ ನಂದದಿಂದಲೆ ಪ್ರವಾಸ ಮಾಡೀ ಬಂದು ಸ್ನಾನ ಪಾನ ಸೇವೆ ಮಾಡಿದವರ ಜಾರದೋಷದ ಕಳೆವ ಶ್ರೀನಿವಾಸನಿಗೆ 3
--------------
ಯದುಗಿರಿಯಮ್ಮ
ಕುಣಿದಾಡೊ ರಂಗ ನಲಿದಾಡೊ ಪ. ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ ಅ.ಪ. ಪತಿಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂಧಿಮಿಕೆನ್ನುತ 1 ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ 2 ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿಚೆಲುವ ಶ್ರೀಹಯವದನ ನಿಮ್ಮಘಲುಘಲು ಗೆಜ್ಜೆ ಘಿಲುಘಿಲುಕೆನ್ನುತ 3
--------------
ವಾದಿರಾಜ
ನೀನೇ ದಯಾಸಂಪನ್ನ ಭಕ್ತ ಪ್ರಸನ್ನಾ ಪ ಕಂದನಿನ್ನಯ ದಿವ್ಯಾನಂದ ಮೂರುತಿಯ ನಾ ಕುಂದದೇ ಭಜಿಸಲು ಮರುಗಿ ಬೇಗಾ ಇಂದಿರೇ ಅಜಭವರೆಂದೂ ಕಾಣದ ನಿಜ ವೆಂದೆಂಬೋ ರಾಜ್ಯದೊಳಿದ್ದ ಕಾರಣದಿಂದ 1 ಹರಿಸರ್ವೋತ್ತಮನೆಂದು ಪಿತನಾಜ್ಞೆಯ ಮೀರಲು ಹರಿರೂಪತಾಳ್ದು ದೈತ್ಯನ ಶಿರವಾ ಹರಿದು ಬಾಲನನೆತ್ತಿ ಸಲಹಿದ ಬಗೆಯಿಂದ ಕರುಣಾಕರನೆಂದು ಶ್ರುತಿಯು ಪೇಳುತ್ತಿರಲೂ 2 ಪಾತಕದಿಂದ ಗೌತಮಸತಿ ಶಿಲೆಯಾಗೆ ಭೂತಳದೊಳು ಪರಬೊಮ್ಮನೆಂಬೋ ಸೀತಾರಾಮಾವತಾರರಿಂದ ಸೌಂದರ್ಯ ನೂತನಪದ ಸೋಕಲು ನಿಜಸತಿಯಾದಳೋ 3 ಗುರುತನೂಜನ ಮಂತ್ರಶಕ್ತಿ ವೇದನೆ ತಡೆದೆ ಹರಿಯೆಂದು ಕರೆದ ಉತ್ತರೆಗೆ ಬೇಗಾ ವರಚಕ್ರವನು ಮರೆಮಾಡಿ ಪರೀಕ್ಷಿತನ ಪೊರೆಯೆ ತ್ರಿಜಗದೊಳು ಕೀರ್ತಿಯಾಹುದರಿಂದ 4 ಹರನಿಂದ ಉರಿಯ ಹಸ್ತವ ಪಡೆದು ಭಸ್ಮಾ ಸುರನು ಫಾಲಕ್ಷನ ಖತಿಗೊಳಿಸೆ ಸಿರಿವೇಲಾಪುರ ಚನ್ನಕೇಶವನಾವೇಶದಿಂ ಪರಿದಸುರನ ಕೊಂದು ಸ್ಥಿರವಾದಕಾರಣ 5
--------------
ಬೇಲೂರು ವೈಕುಂಠದಾಸರು
ಬಾರೈ ಬೇಗ ಶ್ರೀರಾಮ ನಮೊ ಭಾನುಕುಲಾಂಬುಧಿ ಸೋಮ ನಮೊತೊರಿಸು ತವಪದಕಮಲ ನಮೊ ನೀರದಶ್ಯಾಮಲವದನ ನಮೊ ಪ ಅಜಹರಪ್ರಾರ್ಥಿತಮೋದ ನಮೊ ಅಯೋಧ್ಯನಗರವತಾರ ನಮೊಸುಜನಪಾಲ ಕುಜನಾರಿ ನಮೊ ಸನ್ಮುನಿಯಾಶ್ರಮ'ಹರ ನಮೊ1 ಸರಯೂತೀರ ಸಂಚಾರ ನಮೊ ಸತ್ಯಪರಾಕ್ರಮ ಸ್ವಾ'ು ನಮೊಪರಮಪುರುಷ ಪದ್ಮಾಕ್ಷ ನಮೊ ಪತಿತೋದ್ಧರ ಪರಮಾತ್ಮ ನಮೊ 2ಕ್ರೂರತಾಟಕಧ್ವಂಸ ನಮೊ ಮಾರೀಚಾದಿ 'ಚ್ಛೇದ ನಮೊಕಾರ್ಮುಕ'ದ್ಯಧುರೀಣ ನಮೊ ಕೌಶಿಕಮಖಸಂರಕ್ಷ ನಮೊ 3ಗೌತಮಸತಿಯಘಭಂಗ ನಮೊ ಕಾಂತಯಹಲ್ಯಾಸ್ತೌತ್ಯ ನಮೊ ಮಾತಾಪಿತಗುರುವೇ ನಮೊ ಮಮುದ್ಧರಿಸು ಮಹಾತ್ಮ ನಮೊ 4ಕ್ರೂರನು ಕುಟಿಲನು ಕುಮತಿ ನಮೊ ಕಲುಷಾರ್ಚಿತ ದುಷ್ಕರ್ಮಿ ನಮಸಾರರ'ತ ಸಂಸಾರಿ ನಮೊ ಸರ್ವ ದೋಷಪರಿಹಾರ ನಮೊ 5ಕೌಸಲೇಯಕನಕಾಂಬ್ರ ನಮೊ ದಾಶರಥೆ ದನುಜಾರಿ ನಮೊಶ್ರೀಶಚನ್ನಪುರಿಧಾಮ ನಮೊ ದಾಸವೈಷ್ಣವಕುಲಪ್ರೇಮ ನಮೊ 6ರಾಮರಾಮಜಯರಾಮ ನಮೊ ರಾಮತುಲಸಿದಳಧಾಮ ನಮೊರಾಮತುಲಸಿಗುರಸ್ವಾ'ು ನಮೊ ರಂಗಸ್ವಾ'ುದಾಸೇಶ ನಮೊ 7
--------------
ಮಳಿಗೆ ರಂಗಸ್ವಾಮಿದಾಸರು
ರಾಮಾ ನಿನ್ನ್ಹ್ಹೊರತನ್ಯರ ಕಾಣೆ ಪೊರೆ ನೀನೆನ್ನಾಣೇ ಶ್ರೀರಾಮಾ ಪ ಕಾಮಾಂತಕ ತನ್ನ ಭಾಮೆಗೊರೆದ ಶ್ರೀ ರಾಮತಾರಕಮಂತ್ರವೆ ಗತಿ ಲೋಕಕೆ ರಾಮಾಅ.ಪ ಮತಿವಂತ ದಶರಥ ಕೌಸಲ್ಯೆಯರ ಸುತನಾಗ್ಯವತರಿಸಿ ಅತಿ ಬಾಲ್ಯದಿ ಮುನಿಯೊಡನಡವಿಗೆ ನಡೆದು ಕಡು ದುರುಳೆಯಸದೆದು ಮತಿಹೀನ ರಕ್ಕಸರುಪಟಳವಳಿದು ಮುನಿಪತಿ ಮಖ ಬೆಳೆದು ಪತಿಸುತಸಖಹಿತ ಜನಪತಿ ಜೀವಿತ ಪಥದಾದರ್ಶವ ಜಗತಿಗೆ ತೋರಿದೆ1 ಮುನಿಗೌತಮಸತಿ ತಾ ಶಿಲೆಯಂತಿರಲು ಪದರಜದಿಂದುದ್ಧರಿಸಿ ಜಾಹ್ನವಿ ಚರಿತೆಯ ಕೇಳುತ ನಲಿದು ಅನುಜಾತನ ಬೆರೆದು ಜನನಾಥನ ಜನಕನ ಮಿಥಿಲೆಗೆ ನಡೆದು ಹರಧನುವನುಪಡೆದು ಅನುಪಮವೆನಿಪದ ನಡುವೊಳೆ ಖಂಡಿಸಿ ಜನಕಸುತೆಯ ಕರಕಮಲವ ಪಿಡಿದೆ 2 ಪರಶುಹಸ್ತರು ಮಾರ್ಗದಿ ಎದುರಾಗಿ ಅಂಜಿಸೆ ಬೆರಗಾಗಿ ಕರದಲ್ಲಾಟಿಕೆಯೊಲು ಧನುವದಗ್ರಹಿಸಿ ಕ್ಷಣದಲ್ಲುಪಹರಿಸಿ ಜನಕೆ ಹಿರಿಯರಿಗೆ ದಶರಥನಿಗೆ ಸುರನರರೆಲ್ಲರು ಪರಮಾನಂದದೊ ಳಿರುತಿರೆ ವಸಿದೆ ಸುದತಿಯೊಡನೆ ರಘುರಾಮ3 ಹಿಂದೆ ನಾ ಬಹುಜನ್ಮಗಳಲಿ ಬಂದು ನೊಂದೆನು ಈ ಭವದಿ ನಿನ್ನಲಿ ಬಂದು ನಿಂದೆ ಗತಿಯೆಂದು ಸಂದೇಹವಿಲ್ಲ ನೀನೇ ಗುಣಸಿಂಧು ಜಗಕಾಪದ್ಬಂಧು ತಂದೆ ನೀನಿಂದೆನ್ನ ಬಂಧನ ಬಿಡಿಸದೆ ಕೊಂದೆಯಾದರೆ ಕುಂದದು ನಿನಗಪಯಶ 4 ಆನಂದಮಯ ನೀನಾನಂದದಲ್ಲಿದ್ದೆ ಆಶ್ಚರ್ಯವದೇಳು ಆನಂದವನಂದು ಕುಂದದಲಿತ್ತೆ ಜಗಕತಿಶಯವೇಳು ಸಾನಂದದೊಳಿದ್ದರು ತವಸನ್ನಿಧಿಬಲದಿ ಅತಿಶಯಮತ್ತೇಳು ನ್ಹೊಂದಿಸಿ ಪೊರೆ ರಘುರಾಮವಿಠಲ 5
--------------
ರಘುರಾಮವಿಠಲದಾಸರು
ನಿನ್ನ ನಂಬಿದೆ ನೀರಜನಯನಎನ್ನ ಪಾಲಿಸೊಇಂದಿರೆರಮಣಪಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದಪನ್ನಗಶಯನ ನೀಪರಮಪುರುಷನೆಂದುಅ.ಪಹರಿಸರ್ವೋತ್ತಮನಹುದೆಂಬ ಬಾಲಕನಹಿರಣ್ಯಕಶಿವು ಪಿಡಿದು ಬಾಧಿಸಲು ||ನರಹರಿ ರೂಪಿಂದಲವನ ವಕ್ಷವ ಸೀಳ್ದೆಪರಮವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ1ಪಾದವ ಪಿಡಿದು ನೀರೊಳಗೆಳೆದ ನಕ್ರನಬಾಧೆಗಾರದೆ ಕರಿಮೊರೆಯಿಡಲು ||ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದವೇದಾಂತವೇದ್ಯ ಅನಾಥ ರಕ್ಷಕನೆಂದು 2ಇಳೆಗೊಡೆಯನ ತೊಡೆ ನಿನಗೇತಕೆಂದು ಆಲಲನೆಕೈ ಪಿಡಿದೆಳೆಯಲರ್ಭಕನ ||ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು 3ಸುದತಿಗೌತಮಸತಿ ಮುನಿಶಾಪದಿಂದಲಿಪಢದಿ ಪಾಷಾಣವಾಗಿ ಬಿದ್ದಿರಲು ||ಮುದದಿಂದಲಾಕೆಯಮುಕ್ತಮಾಡಿದಯೋಗಿಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4ಪರಮಪಾವನೆ ಜಗದೇಕಮಾತೆಯನುದುರುಳರಾವಣ ಪಿಡಿದು ಕೊಂಡೊಯ್ಯಲು ||ಶರಣೆಂದು ವಿಭೀಷಣ ಚರಣಕೆರಗಲಾಗಿಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5ಅಂಬರೀಷನೆಂಬನೃಪತಿದ್ವಾದಶಿಯನುಸಂಭ್ರಮದಿಂದ ಸಾಧಿಸುತಿರಲು ||ಡೊಂಬೆಯಿಂದದೂರ್ವಾಸಶಪಿಸಲಾಗಿಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆಸರಸಿಜೋದ್ಭವ-ಶೇಷಗಸದಳವು ||ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತಪುರಂದರವಿಠಲ ಜಗದೀಶ ನೀನೆಂದು7
--------------
ಪುರಂದರದಾಸರು