ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋದೆ ಸಮಸ್ತಫಲದೆ ಸ್ನಾನ ಒದಗಿಮಾ-ದರೊಮ್ಮೆ ವೈಕುಂಠಪದವೀವೆ ಪ. ಬ್ರಹ್ಮಾದಿ ಶಿಖರದಿಂ ಪುಟ್ಟಿ ನೀನು ಬಲುಬ್ರಹ್ಮ ಋಷಿಯಾದ ಗೌತಮ ಮುನಿಯಬ್ರಾಹ್ಮರಿಂದಲಿ ಬಂದ ಗೋಹತ್ಯ ಪರಿಹರಿಸಿಅಮ್ಮಮ್ಮ ಸಪ್ತಮುಖದಿಂದ ಸಾಗರವ ಬೆರೆದೆ 1 ಆದಿಯಲಿ ತ್ರಿಯಂಬಕನ ಜ[ಡೆ]ಯಲುದಿಸಿದೆ ನೀನುಮುದದಿಂದ ಪಶ್ಚಿಮಕಾಗಿ ನಡೆಯೆ ಕಂಡುಒದಗಿ ಗೌತಮನು ಕುಶದಿಂದ ತಿರುಗಿಸÀಲು ನೀಸದಮಲ ಕುಶಾವರ್ತಳೆಂದೆನಿಸಿಕೊಂಡೆ 2 ಔದುಂಬರ ವೃಕ್ಷಮೂಲದಿಂದುದ್ಭವಿಸಿಉದಧಿಯನು ಕೂಡಬೇಕೆಂದು ಬೇಗಮೇದಿನಿಯಿಳಿದು ತಿರುಗುತಲಿ ನೀ ಮುದದಿಂದಆದರದಿ ಪೂರ್ವಾಬ್ಧಿಯನು ಕೂಡಿದೆ 3 ಸಿಂಹರಾಸಿಯಲಿ ಸುರಗುರು ಬಂದುದು ಕೇಳಿಅಂವ್ಹ ರಾಸಿಗಳು ಸಂಹಾರಕಾಗಿಬಂಹ್ವಾಯಾಸದಿ ಬಂದು ನಿಮ್ಮನು ಕಂಡೆಅಂವ್ಹಂಗಳು ಪರಿಹರಿಸಿ ಮುಕುತಿಯ[ಕೊಡು]ದೇವಿ 4 ವಿನಯದಲಿ ಸ್ನಾನಪಾನವನು ಮಾಡುವರಿಗೆವನಜಾಕ್ಷ ಹಯವದನ ಹರಿಯವನಜನಾಭನ ಲೋಕಸಾಧನವಾದಘನ ಭಕುತಿಯನಿತ್ತು ರಕ್ಷಿಸುದೇವಿ 5
--------------
ವಾದಿರಾಜ
ನಿನಗೆ ಅಂಜುವನಲ್ಲ ನೀರಜಾಕ್ಷ ಪ ಮನವಚನ ಕಾಯದಿಂ ನಿನ್ನವರಿಗಂಜುವೆನುಅ ರಾಗದಿಂದಲಿ ಇಂದ್ರದ್ಯುಮ್ನ ಭೂಪಾಲಕನು ಯೋಗ ಮಾರ್ಗದಿ ನಿನ್ನ ಭಜಿಸುತಿರಲು ಯೋಗ ಕುಂಭೋದ್ಭವನು ಬಂದು ಶಾಪವೆ ಕೊಡಲು ಆಗ ಮೌನದಲವನನೊಪ್ಪಿಸಿದ ಬಗೆ ಬಲ್ಲೆ 1 ಗುಣವಂತರೀರ್ವರು ಜಯವಿಜಯರು ನಿನ್ನ ಅನುಗಾಲ ಬಾಗಿಲನು ಕಾಯುತಿರಲು ಸನಕಾದಿಗಳು ಬಂದು ಶಪಿಸಲಾಕ್ಷಣದಲ್ಲಿ ಸನುಮತದಲವರ ನೀನೊಪ್ಪಿಸಿದ ಬಗೆಬಲ್ಲೆ 2 ನೃಗರಾಯ ಪುಣ್ಯ ಬರಬೇಕೆನುತ ವಿಪ್ರರಿಗೆ ನಿಗಮೋಕ್ತಿಯಿಂದ ಗೋದಾನ ಕೊಡಲು ಜಗಳ ಪುಟ್ಟಿತು ನೋಡು ಅನ್ಯೋನ್ಯರೊಡಗೂಡಿ ಮಿಗೆ ಶಾಪ ಕೊಡಲವನನೊಪ್ಪಿಸಿದ ಬಗೆ ಬಲ್ಲೆ 3 ಉಣಲಿತ್ತರೆ ಉಂಡು ಪೋಗಲೊಲ್ಲದೆ ಒಂದು ತೃಣದಲ್ಲಿ ಗೋವನ್ನೆ ರಚಿಸಿ ನಿಲಿಸಿ ಮುನಿಪ ಗೌತಮನಿಗೆ ಗೋಹತ್ಯವನು ಹೊರಿಸಿ ಕ್ಷಣದೊಳಗೆ ಅವನ ನೀನೊಪ್ಪಿಸಿದ ಬಗೆ ಬಲ್ಲೆ 4 ಅನಪರಾಧಿಗಳಿಗೆ ಇನಿತಾಯಿತೋ ದೇವ ಎನಗೆ ತನಗೆಂಬುವರಿಗಾವ ಗತಿಯೊ ಮಣಿದು ಬೇಡಿಕೊಂಬೆ ವಿಜಯವಿಠ್ಠಲರೇಯ ನಿನಗಿಂತ ಭಕುತಿ ನಿನ್ನವರಲ್ಲಿ ಕೊಡು ಎನಗೆ 5
--------------
ವಿಜಯದಾಸ
ನೋಡಿ ಮರುಳಾಗದಿರು ಪರಸತಿಯರ ಪ ನಾಡೊಳಗೆ ಕೆಟ್ಟವರ ಪರಿಯ ನೀನರಿತು ಅ ಶತಮಖವ ಮಾಡಿ ಸುರಸಭೆಗೈದ ನಹುಷ ತಾನಾತುರದಿ ಶಚಿಗೆ ಮನಸೋತು ಭ್ರಮಿಸಿಅತಿ ಬೇಗ ಚಲಿಸೆಂದು ಬೆಸಸಲಾ ಮುನಿಯಿಂದಗತಿಗೆಟ್ಟು ಉರಗನಾಗಿದ್ದ ಪರಿಯರಿತು 1 ಸುರಪತಿಯು ಗೌತಮನ ಸತಿಗಾಗಿ ಕಪಟದಿಂಧರೆಗೆ ಮಾಯಾವೇಷ ಧರಿಸಿ ಬಂದುಪರಮ ಮುನಿಯ ಶಾಪದಿಂದಂಗದೊಳು ಸಾ-ಸಿರ ಕಣ್ಗಳಾಗಿರ್ದ ಪರಿಯ ನೀನರಿತು 2 ಸ್ಮರನ ಶರತಾಪವನು ಪರಿಹರಿಸಲರಿಯದೆದುರುಳ ಕೀಚಕನು ದ್ರೌಪದಿಯ ತುಡುಕಿಮರುತ ಸುತ ಭೀಮನಿಂದಿರುಳೊಳಗೆ ಹತನಾಗೆನರಗುರಿಯೆ ನಿನ್ನ ಪಾಡೇನು ಧರೆಯೊಳಗೆ3 ಶರಧಿ ಮಧ್ಯದೊಳಿದ್ದುದುರುಳ ದಶಶಿರನು ಜಾನಕಿಯನೊಯ್ಯೆಧುರದೊಳಗೆ ರಘುವರನ ಶರದಿಂದ ಈರೈದುಶಿರಗಳನೆ ಹೋಗಾಡಿಸಿದ ಪರಿಯನರಿತು 4 ಇಂತಿಂಥವರು ಕೆಟ್ಟು ಹೋದರೆಂಬುದನರಿತುಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದಕಂತುಪಿತ ಕಾಗಿನೆಲೆಯಾದಿಕೇಶವನ ನಿ-ರಂತರದಿ ಭಜಿಸಿ ನೀ ನಿತ್ಯಸುಖಿಯಾಗು 5
--------------
ಕನಕದಾಸ
ಬ್ರಹ್ಮ ತಾವೆಂದು ಭಾವಿಸಿರೋ ಭಾಗ್ಯರಿರಾಬ್ರಹ್ಮತಾವೆಂದು ಭಾವಿಸಿದವರುಂಟು ಪ ಕಪಿಲ ನಾರದನು ಗೌತಮನು ಕಣ್ವನುನಿಪುಣ ಕೌಶಿಕನು ನಿರ್ಮಲನು ಅಗಸ್ತ್ಯಾಉಪಮಾನ್ಯ ಶಿಖಿ ಪಂಚ ದೂರ್ವಾಸರಂತಿವರು ಬ್ರಹ್ಮ ತಾವೆಂದು ಭಾವಿಸುವರು 1 ವ್ಯಾಸ ಶ್ರೀವತ್ಸ ಶುಕನು ಶೌನಕನುವಾಶಿಷ್ಟ ಅತ್ರಿ ಗಾರ್ಗೇಯನು ಕಶ್ಯಪನುದಾಸ ಪ್ರಹ್ಲಾದ ಬಕದಾಲ್ಬ್ಯ ಜಮದಗ್ನಿಭಾಸುರರಿಂತಿವರು ಬ್ರಹ್ಮತಾವೆಂದು ಭಾವಿಸುವರು 2 ಸನಕ ಸನಂದನ ಸನತ್ಸುಜಾತನುಮುನಿಯು ತೃಣಬಿಂದು ಮಾರ್ಕಾಂಡೇಯ ರೋಮಶನುಘನ ವಾಮದೇವ ದತ್ತಾತ್ರೇಯ ವಡಬನುಚಿನುಮಯರಿವರು ಬ್ರಹ್ಮತಾನೆಂದು ಭಾವಿಪರು3 ನಿತ್ಯ ತಾವೆಂದು ಭಾವಿಸುವರು 4 ಭವ ಮೂಲ ಹರಿವುದುಬ್ರಹ್ಮ ಬೇರೆನಲು ಬಹುಜನ್ಮವೇ ಬಹುದುಬ್ರಹ್ಮತಾವೆಂದು ಭಾವಿಸಿ ನೀವು ನಿತ್ಯಬ್ರಹ್ಮ ಚಿದಾನಂದ ತಾವಾಗುವಿರಿ ಸತ್ಯ 5
--------------
ಚಿದಾನಂದ ಅವಧೂತರು
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ಮಾನವ ಪ ಗರುವವೇತಕೆ ನಿನಗೆ ಎಲೆ ಮಂಕು ಜೀವಅ ರೂಪದಲಿ ಮನ್ಮಥನೆ ಶಾಪದಲಿ ಗೌತಮನೆಕೋಪದಲಿ ದೂರ್ವಾಸ ಮುನಿಯೆ ನೀನುತಪದಲ್ಲಿ ವ್ಯಾಸನೆ ಕೃಪೆಯಲ್ಲಿ ಬಲೀಂದ್ರನೆನಿಪುಣತ್ವದಲಿ ನಾರದ ಮುನಿಯೆ ನೀನು 1 ಯತಿಯಲ್ಲಿ ಅಗಸ್ತ್ಯನೆ ಕ್ಷಿತಿಪರಲಿ ಜನಮೇಜಯನೆಗೀತದಲಿ ಗಂಧರ್ವನೇ ನೀನುವ್ರತದಲ್ಲಿ ಲಕ್ಷ್ಮಣನೆ ಮತಿಯಲ್ಲಿ ಕಶ್ಯಪನೆವಿತರಣ ಗುಣದಲಿ ಯಮಧರ್ಮನೆ ನೀನು 2 ಮಾನವ 3 ಕೊಡುವುದಕೆ ಕರ್ಣನೆ ನಡತೆಯಲಿ ಧರ್ಮಜನೆದೃಢ ಮನಸಿನಲಿ ರುಕ್ಮಾಂಗದನೆ ನೀನುಪಡೆಯಲ್ಲಿ ಕೌರವನೆ ನುಡಿಯಲ್ಲಿ ಗಾಂಗೇಯನೆಮಡದಿಯರ ಭೋಗಕ್ಕೆ ಸುರಪತಿಯೆ ನೀನು4 ಬಾಣದಲಿ ರಾಮನೇ ತ್ರಾಣದಲಿ ಭೀಮನೇಕೇಣದಲಿ ಶಿಶಪಾಲನೇನೊಗುಣದಲಿ ಸುಧರ್ಮನೇ ರಣದಲಿ ಶಲ್ಯನೆ ಆನುಗುಣ್ಯವಾದದಲಿ ನರಪತಿಯೆ ನೀನು5 ಛಲದಲ್ಲಿ ರಾವಣನೆ ಬಲದಲ್ಲಿ ವಾಲಿಯೇನಿಲುಗಡೆಯ ಮನದಲ್ಲಿ ದ್ರೋಣನೆ ನೀನುಕುಲದಲಿ ವಸಿಷ್ಠನೇ ಗೆಲುವಿನಲಿ ಪಾರ್ಥನೇಬಿಲುವಿದ್ಯೆಯಲಿ ಪರಶುರಾಮನೆ ನೀನು 6 ಶಕ್ತಿಯಲಿ ಹನುಮನೇ ಭಕ್ತಿಯಲಿ ವಿಭೀಷಣನೆಕೀರ್ತಿಯಲಿ ಹರಿಶ್ಚಂದ್ರರಾಯನೆ ನೀನುಅರ್ತಿಯಲಿ ಶುಕಮುನಿಯೆ ಸ್ಫೂರ್ತಿಯಲಿ ಸೂರ್ಯನೇಮುಕ್ತಿ ಸಾಧನಕೆ ಪ್ರಹ್ಲಾದನೆ ನೀನು7 ಗೋತ್ರದಲಿ ಬ್ರಹ್ಮನೇ ಸೂತ್ರದಲಿ ಕೌಶಿಕನೆಪಾತ್ರದಲಿ ವಾಲ್ಮೀಕಿ ಋಷಿಯೆ ನೀನುಮಾತಿನಲಿ ಗುರುಸುತನೆ ಜ್ಯೋತಿಯಲಿ ಬೃಹಸ್ಪತಿಯೆನೀತಿಮಾರ್ಗದಲಿ ಸಹದೇವನೇ ನೀನು 8 ಅಂಗದಲಿ ಅಜಮಿಳನೆ ಶೃಂಗದಲಿ ಮಾರುತನೆಕಂಗೊಳಿಪ ತನದಲ್ಲಿ ಕಾಮಸುತನೆಗಂಗೆಯನು ಪಡೆದಂಥ ನೆಲೆಯಾದಿಕೇಶವನಹಿಂಗದೆ ಭಜಿಸಿ ಪಾವನನಾಗು ಮನುಜ 9
--------------
ಕನಕದಾಸ
ರಾಮ ನಿನ್ನಯ ದಿವ್ಯ ನಾಮವೇ ಗತಿಯೆಂಬೆ ಪಾಮರನೆಂದೆನ್ನ ಪಾಲಿಸು ತಂದೆ ಪ. ಸುರರಾಜನಂಗಸಂಗವಗೈದು ಶಿಲೆಯಾದ ವರಮುನಿ ಗೌತಮನರಸಿಯು ನಿನ್ನ ಚರಣಾರವಿಂದ ಸಂಸ್ಪರ್ಶಮಾತ್ರದಿ ದಿವ್ಯ ತರುಣಿಯಾಗಿಹಳೆಂಬ ಪರಿಯ ನಂಬಿದೆನು 1 ಪ್ರಥಮ ವರ್ಣವು ಪಾಪ ತತಿಗಳ ತರಿವುದು ಜತನ ಮಾಡುವುದನ್ಯ ವರ್ಣವೆಂದೆನುತ ನಿತ್ಯ ಸಂಸ್ತುತಿಮಾಳ್ಪವದರಿಂದಾ- ಶ್ರಿತ ಕಲ್ಪತರು ನೀನೆ ಗತಿಯೆಂಬೆ ನಿರತಾ 2 ನಿತ್ಯ ನಿರ್ನಾಮಗೊಳಿಸು ಪನ್ನಗಾಚಲನಾಥ ಪರಿಪೂರ್ಣ ಕೃಪೆಯಿಂದ ಮನ್ನಿಸಿ ಮನಸನ್ನು ನಿನ್ನಲ್ಲಿ ಇರಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯಎನ್ನ ದಯದಿ ಪಾಲಿಸಯ್ಯ ಪನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆಬನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅ.ಪಅಮರೇಂದ್ರವಂದಿತನೆ ಅನಂತಮಹಿಮನೆಕಮಲಸಖಾನಂತಕರನೆ ||ಕಮಲಾಯತಾಂಬಕನೆ ಕಾಮಿತದಾಯಕನೆವಿಮಲಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ1ಅಜಮಿಳ ಅಂಬರೀಷ ಅಕ್ರೂರ ವಿದುರಗೆಗಜರಾಜ ಗಿರಿಜೇಶಗೆ ||ನಿಜಭಕ್ತ ಪ್ರಹ್ಲಾದಅಜ ಧ್ರುವ ಅರ್ಜುನಗೆದ್ವಿಜ ಸುತ ರುಕ್ಮಾಂಗದರಿಗೊಲಿದ ದಯದಿಂದಲೆನ್ನ2ಅವರಂತೆ ನಾನಲ್ಲಅವರ ದಾಸರ ದಾಸಸವರಿ ಬಿಸುಟೆನ್ನ ದೋಷ ||ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ 3ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತುಎಂದೆಂದು ನಿನ್ನ ನಾಮಭಜನೆ ||ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ 4ಅಂತರಂಗದುಬ್ಬಸವ ಅಯ್ಯೋ ನಿನಗುಸಿರುವೆನುಚಿಂತೆಗಳ ಪರಿಹರಿಸೊ ||ಸಂತತ ಪಾಲಿಸೊಪುರಂದರ ವಿಠಲನೆಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ 5
--------------
ಪುರಂದರದಾಸರು
ನದೀದೇವತೆಗಳ ಸ್ತುತಿ116ಸ್ಮರಿಸುವೆನನುದಿನ ಮುದದಿಂದ | ಈಧರಿಯ ಮ್ಯಾಲುಳ್ಳ ಮಹಾ ನದಿಗಳ ಪಗೌತಮನಘ ಪರಿಹಾರ ಮಾಡಿದ ಗೋದಾ |ಮಾತೆ ಶ್ರೀ ಕೃಷ್ಣವೇಣೀ ಸರಸ್ವತೀ ||ಆ ತರೂವಾಯ ಶ್ರೀ ಕಾವೇರಿ, ಸರಿಯು ಶ್ರೀ ಯಮುನಾ |ಧೌತ ಪಾತಕೆ ಶ್ರೀ ನರ್ಮದ ತುಂಗಾ 1ಸಿಂಧೂ ಭವನಾಶಿನಿ ಕುಮದ್ವತಿ ಶ್ರೀ ವಂಝಾರ |ಸುಂದರ ಭೀಮಾ ತಾಮ್ರಪರಣೀ ಮಲಹಾ ||ಮಿಂದರೆ ಪಾವನ ಮಾಡುವ ಬಹು ನದಿಗಳ |ಒಂದೇ ಮನಸಿಲಿಂದಾ ಪೊಗಳುವೆ 2ವಾರಣೀ ಫಲ್ಗುಣೀ ಶ್ರೋಣ ಭದ್ರಾ ಗಂಡಕಿಹೇಮ|ಮೂರುವೇಣಿಗಾಯತ್ರಿ ವೇಗವತೀ ||ಸೂರಿಗಮ್ಯ ಕೌಸಿಕ ಮಣಿಕರಣಿಕ ಗೌತಮಿ ಭಾ |ಗೀರಥಿ ಕಾಗಿನಿ ಶ್ರೀ ವೇತ್ರವತೀ3ಹೇಮವತಿ ನೇತ್ರವತಿ ಪಾಪನಾಶಿ ಶ್ರೀ ಸೀತಾ |ಆ ಮಹಾಳಕನಂದಾ ಹಯಗ್ರೀವ ||ಹೇಮಮುಖರ ತಾಪಿನಿ ಕಾಳಿ ಸೌಪರಣಿ ಪಿನಾಕೀ |ಶ್ರೀ ಮತ್ಕಪಿಲ ಜಮದಗ್ನಿಪ್ರಣವಸಿದ್ಧ4ಮರುದ್ವತಿ ಮದಿರ ಮೇನುಕಾ ಸೂನಾಸಿ ಚಕ್ರವತಿ |ಗರುಡ ಶಂಖವತೀ ಕುಹು ಮಹೇಶ್ವರೀ ||ಸರಯು ಜಯ ಮಂಗಳ ಯೋಗಕೃತು ಮಾಲಾ ಗದಾ |ಧರಿ ಮಾಲಿನೀ ಗಾರ್ಗಿಣೀ ದೇವವತಿ5ಸಾವಿತ್ರಿ ಧನ್ಯಮಾಲಾ ಧರ್ಮ ಚಕ್ರತೀರ್ಥಹರಿ|ದ್ರಾವತಿ ಇಂದ್ರಾಣಿ ಪಾತಾಳಗಂಗಾ ||ಶೈವಕುಂಡ ಕುಂಡಿನಿ ನೀರ ಕುಮಾರ ಧಾರೀ ಶು |ಶಾವರ್ತಿ ಮೌಳೀ ಲೋಕಪಾವನೀ 6ಸ್ವಾಮಿ ಪುಷ್ಕರ್ಣಿ ಚಂದ್ರ ಪುಷ್ಕರ್ಣಿ ಮಾನಸ ಪುಷ್ಕರ್ಣಿ |ಶ್ರೀ ಮಧ್ವ ಸರೋವರ ಪದ್ಮ ಸರಾ ||ಸೋಮಭಾಗಾ ವ್ಯಾಸಸಿಂಧುಶ್ರೀ ಪಂಪಾ ಸರೋವರ |ವಾಮನ ಶ್ರೀ ಮಯೂರ ಸರೋವರ 7ರೋಮ ಹರ್ಷಣ ತೀರ್ಥ ಸೀತಾ ಸರೋವರ ಪುಣ್ಯ |ಧಾಮಾ ಶ್ರೀ ಕಪಿಲತೀರ್ಥ ಧವಳಗಂಗಾ ||ಭೀಮಸೇನ ತಟಾಕಬ್ರಹ್ಮಜ್ಞಾನಕನ್ಯಹೃದಯ |ಶ್ರೀ ಮದ್ವಿಶಿಷ್ಟ ತೀರ್ಥ ತಾರಾ ತೀರ್ಥ 8ಈ ತೀರ್ಥಗಳ ದಿವ್ಯನಾಮನಿತ್ಯಪಠಿಸಲು |ಯಾತಕ್ಕಾದರೂ ವಿಘ್ನ ಬಾರದು ||ಮಾತರಿಶ್ವಪ್ರೀಯ ಪ್ರಾಣೇಶ ವಿಠಲನು ಬಹು |ಪ್ರೀತನಾಗಿ ಬಿಡದೆ ಪೊರೆವನು 9
--------------
ಪ್ರಾಣೇಶದಾಸರು