ಒಟ್ಟು 13 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಬಂತು ಪ್ರಜೆಗೆ ಎಷ್ಟು ಪೇಳ್ವರೇನು ಕೆಲಸ ದಿಟ್ಟ ಅರಿಗಳನು ಕುಟ್ಟಿ ತೆಗೆಯದಿದ್ದಮೇಲೆ ಪ ದಂಡು ಬಂತು ಎಂದು ಜನರು ಗಂಡು ಹೆಣ್ಣು ಮಕ್ಕಳೆಲ್ಲ ಕಂದುಗಳನು ಕಟ್ಟಿ ಗೋವಿನ ಹಿಂಡ ನೆಲ್ಲ ದಾರಿಗೊಳಿಸಿ ಕಂಡ ಕಡೆಗೆ ಹೋಗಿ ಸೇರಿಕೊಂಡುಯಿರಲು ಸೋವಿನಿಂದ ದಂಡಿನವರು ದಾರಿಗಟ್ಟಿಕೊಂಡು ಸುಲಿದು ಕಡಿದ ಮೇಲೆ 1 ಅಲ್ಲಿ ಬಂತು ಇಲ್ಲಿ ಬಂತು ಎಂದು ಬೆದರಿಕೊಂಡು ಕುಣಿಗಳಲ್ಲಿ ಭತ್ತಭಾಂಡವಿಕ್ಕಿ ನಿಲ್ಲದೆಲ್ಲ ಊರಬಿಟ್ಟು ಕಲ್ಲು ಮುಳ್ಳು ಗುಡ್ಡಕಾನಿನಲ್ಲಿ ಸೇರಿಕೊಂಡು ಬಚ್ಚಿಯಿಟ್ಟ ವಸ್ತು ವಡವೆ ಅಲ್ಲಿ ನಷ್ಟವಾದ ಮೇಲೆ 2 ಮತ್ತೆ ಕುದುರೆಯಿಲ್ಲ ಮಂದಿಹೊತ್ತು ಪ್ರಜೆಗಳನ್ನು ಮಾರ್ಗ ದೊತ್ತಿನಲ್ಲಿ ತರುಬಿ ನಿಂದು ಕತ್ತಿಯನ್ನು ಕಿತ್ತು ಗೋಣ ಬರಿಸಿ ಯಾವತ್ತು ವಡವೆ ವಸ್ತುಗಳನು ಮತ್ತು ಮತ್ತು ಸುಲಿದಮೇಲೆ 3 ಮುಟ್ಟು ಪಟ್ಲೆ ಸಹಿತವರಡಿಯೆತ್ತ ಕೊಟ್ಟು ಬೀಳ ಭೂಮಿ ನಷ್ಟ ತೆತ್ತು ಹಳೆಯ ಅರಿವೆ ಬಟ್ಟೆಗಟ್ಟಿ ಬೀದಿ ಬದಿಗೆ ಹಿಂಡು ಗುರಿಯ ಕೆಟ್ಟ ಗೌಡಿ ದ್ವಿಗುಣಿಸಂಕ ತೆತ್ತು ಕೊಟ್ಟು ಪ್ರಜೆಗೆ ಘಟ್ಟ ಬೆಟ್ಟ ವಾಸ ವಾದಮೇಲೆ 4 ಇಕ್ಕಿ ಕದವ ರಾಜ್ಯವನ್ನು ಹೊಕ್ಕು ಅರಿಗಳೆಲ್ಲ ಸುಲಿದು ಸೊಕ್ಕಿನಿಂದ ಪಾಳ್ಯವನ್ನು ಹೊಕ್ಕರಯ್ಯ ನಮ್ಮ ಕಡೆಗೆ ದಿಕ್ಕಕಾಣೆ ಪ್ರಜೆಗಳನ್ನು ರಕ್ಷಿಸುವರು ಬೇರೆಉಂಟು ನಂಬಿ ಜನರು 5
--------------
ಕವಿ ಪರಮದೇವದಾಸರು
ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ಪ ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ಅ ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ1 ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ2 ಪಟ್ಟಾವಳಿ ದುಕೂಲವನು ನಾನೊಲ್ಲೆಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ 3 ಮುತ್ತಿನಾಭರಣ ತಾಳಿ ಪದಕವ ನಾನೊಲ್ಲೆಸತ್ತಿಗೆಯ ನೆರಳಿನಲಿ ಸಾಗುವುದ ನಾನೊಲ್ಲೆನಿತ್ಯ ನಿನ್ನ ನೆನೆವರ ಮನೆಯ ಬಾಗಿಲ ಕಾಯ್ವತೊತ್ತುಗೌಡಿಯ ಮಗನ ಮಗನ ಮಗನೆನಿಸೆನ್ನ 4 ಆಶೆ ಪಾಶಗಳೆಂಬ ಜಂಜಾಟ ನಾನೊಲ್ಲೆದೇಶಾನುದೇಶಗಳ ತಿರುಗಾಟ ನಾನೊಲ್ಲೆಶ್ರೀಶಾದಿಕೇಶವನ ಭಜಿಪರ ಮನೆಯ ಕಾಯ್ವಕಸಗೌಡಿಯ ಮಗನ ಮಗನ ಮಗನೆನಿಸೆನ್ನ 5
--------------
ಕನಕದಾಸ
ತಿಳೀವಲ್ಲದಿದು ಎನಗೆ ತಿಳಿಸಯ್ಯ ಹರಿಯೆ ಬಲುಪಾಪಿಜೀವಿಯ ತಪ್ಪಾರಿಗಿಹ್ಯದೋ ಪ ಹುಟ್ಟಿಸಿದವನಿಗೋ ಹುಟ್ಟಿ ಬಂದವನಿಗೋ ಸೃಷ್ಟಿಗೊಳಿಸಿದಂಥ ಸೃಷ್ಟಿ ಕರ್ತನಿಗೋ ಗಟ್ಟ್ಯಾಗಿ ನನಗಿದರ ಗುಟ್ಟು ತಿಳಿಸೈ ತಂದೆ ಮುಟ್ಟಿಭಜಿಸುವೆ ನಿನ್ನ ಶ್ರೀಕೃಷ್ಣರಾಯ 1 ಗೋಡೆಯ ಡೊಂಕಿರಲು ಗೋಡೆಯ ತಪ್ಪಥವ ಗೋಡೆಯನು ಕಟ್ಟಿದ ಗೌಂಡಿಯ ತಪ್ಪೋ ಕೂಡಿಟ್ಟು ಹಣ ವೆಚ್ಚಮಾಡಿ ಕಟ್ಟಿಸಿದಂಥ ಗೋಡೆಯೊಡೆಯನ ತಪ್ಪೋ ತಿಳಿಹೇಳೆನಗೆ 2 ಬಂಡಿ ತಗ್ಗಿಗೆ ಬೀಳೆ ಬಂಡಿದೇ ತಪ್ಪಥವ ಬಂದಡರಿ ಕೂತುಕೊಂಡವರದೆ ತಪ್ಪೋ ಬಂಡಿಹೊಡೆಯುವಂಥ ದಿಂಡೆಗಾರನ ತಪ್ಪೋ ಕಂಡು ಇದ್ದಂತ್ಹೇಳೋ ಪಂಢರಿರಾಯ 3 ಜೀವಾಳ ಅಪಸ್ವರ ನುಡಿಯಲದರದೇ ತಪ್ಪೋ ಜೀವಾಳ ಬಾರಿಸುವಗೋ ಜೀವಾಳ ಕರ್ತನಿಗೋ ಆವಂಗೆ ತಪ್ಪು ಜಗಜೀವ ಜೀವೇಶನೆ ನ್ಯಾ ಯಾವಾಗ್ಹೇಳಯ್ಯ ಭಾವಜಪಿತನೆ 4 ಪ್ರಾಣೇಶ ಶ್ರೀರಾಮ ನೀನೆ ಬರೆದಿಹ್ಯ ಬರೆಹ ನೀನೆ ವ್ಯಾಪಕ ಸರ್ವ ನೀನೆ ರಕ್ಷಕನೋ ನೀನೆ ಸ್ವಾತಂತ್ರ್ಯಾಖಿಲ ಏನಿಲ್ಲ ಮನುಜನಾ ಧೀನ ತಪ್ಪ್ಯಾಕಿವಗೆ ನೀನೆ ಪೇಳಯ್ಯ 5
--------------
ರಾಮದಾಸರು
ನಿರಂಜನ ಪಂಕ್ತಿಗೆ ಕೂರಲು ಅನಬೇಕೇನಜೀವನೆ ಬ್ರಹ್ಮವು ಸತ್ಯವೆಂದರಿ ಇದಕೇನಿಲ್ಲನುಮಾನ ಪ ಗುಲಾಮ ಹೋಗಿ ಸದರಿಗೆ ಕೂರಲುಗುಲಾಮನನ ಬೇಕೇನಗುಲಾಮನಹುದೇ ಸದರಿಗೆ ಕುಳಿತವಗುರು ಅವ ಸಂಶಯವೇನ 1 ಗೌಡಿಯು ಅರಸಗೆ ಪಟ್ಟದರಸಿಯಾಗೆಗೌಡಿಗೆ ಅನಬೇಕೇನಗೌಡಿಯೆ ಪಟ್ಟದರಸಿಯಾಗಲಿಕೆಗೌಡಿಯೆ ಅರಸು ಅನಮಾನೇನು 2 ನರ ಚಿದಾನಂದ ಸದ್ಗುರುವನು ಹೊಂದಲುನರನನು ಅನುಬೇಕೇನನರಚಿದಾನಂದ ಸದ್ಗುರುತಾನಲ್ಲದೆ ಯೋಚನೆ ಮಾಡಲಿಕೇನು 3
--------------
ಚಿದಾನಂದ ಅವಧೂತರು
ನ್ನಿಂತಾವಳೀ ಜಗದೊಳುಂಟೇನೆ ರಮಣೀ ಪ ನಿಂತಾಗೆ ನುಂಗಿದಳು ಕಂತೆ ಕಬ್ಬಾ ಅ.ಪ ಗರತಿಯು ತಾನಲ್ಲ ಗೌಡಿಯ ತಾನಲ್ಲ ಗುರುತೇಳುತದೆ ನೀವೆದ್ದರೆ ಕೇಳಿರೈ ಸರಿತಾಯಿ ಪರಿಯುತ್ತೆ ವರಗಂಡನಿಗೆ ಮೋಸ ಕರಿಯುತ್ತಳಿಹ ಪ್ರಖ್ಯಾತ ನಳ್ಳಿಯೊಳು 1 ಆದಿಲಿ ಹೊಗ ಪರಬೀದಿಯೊಳು ತಾನೆಂತೂ ವಾದಿಸಿ ಅವರೊಳು ಭೇದವಿಡಿದೆ ಕಾದಿರುವೆ ನಿನಗಾಗಿ ಕಾಮನಯ್ಯನೆ ಬಾರೊ ವೇದಗೋಚರ ಗುರು ಶ್ರೀತುಲಸೀರಾಮಾ2
--------------
ಚನ್ನಪಟ್ಟಣದ ಅಹೋಬಲದಾಸರು
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ 2 ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ ಕ್ಷಣದೊಳಗೆ ಪೋದಂತೆ ಕಾಣಿಸುವದು || ಘನ ಪಾಷಾಣಗಳು ತೃಣ ಸಮವು ಯೆನಿಸುವವು ವನಜಾಕ್ಷನ ಕೃಪೆಯ ಪಡದ ದಾಸರಿಗೆ 3 ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು | ಪದೇ ಪದೆಗೆ ರೋಗಗಳು ಬೆನ್ನಟ್ಟವು || ಉದಯಾಸ್ತಮಾನವೆಂಬೋ ಭಯವು ಸುಳಿಯದು | ಪದುಮನಾಭನ ಕೃಪೆಯ ಪಡೆದ ದಾಸರಿಗೆ4 ಬಾರವು ಭಯಗಳು ಬಂದರು ನಿಲ್ಲವು | ಹಾರಿ ಹೋಗುವವು ದಶದಿಶಗಳಿಗೆ || ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ | ಸೇರಿದಾ ಜನರಿಗೆ ಇನಿತಾಹುದುಂಟೇ 5
--------------
ವಿಜಯದಾಸ