ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ)
ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ
ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ.
ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ 1
ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ2
ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ 3
ಮಣಿ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ 4
ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ 5
ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ 6
ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ 7
ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ 8|