ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಂದ ಬಂದಿದ್ದೆಲೆ ಖೋಡಿ ನೀ ನೆಲ್ಲಿಗೆ ಹೋಗ್ತಿದ್ದಿ ತ್ವರೆಮಾಡಿ ಪ ಕಲ್ಲುಮುಳ್ಳೆನ್ನದೆ ಮುಂದೆ ನೋಡಿ ಜರ ನಿಲ್ಲದೆ ಹೋಗ್ತಿದ್ದಿ ಓಡೋಡಿ ಅ.ಪ ಏಳುಗೇಣಿನ ಕುದುರೇರಿದ್ದಿ ಭವ ಮಾಲೆ ಕೊರಳಿಗೆ ಹಾಕಿದ್ದಿ ಮೂಲ ಲಗಾಮವೆ ತೆಗೆದಿದ್ದೀ ನೀ ಬೀಳುವ ಎಚ್ಚರ ಮರೆತಿದ್ದಿ 1 ಶೀಲ ಸನ್ಮಾರ್ಗವ ಬಿಟ್ಟಿದ್ದಿ ಮಹ ಕಾಳು ಕತ್ತಲೆಹಾದ್ಹಿಡಿದಿದ್ದಿ ಕಾಲನಾಳಿನ ಕೈಗೆ ಸಿಗುತಿದ್ದಿ ಬಹು ಗೋಳಿನೊಳಗೆ ಹೋಗಿ ಬೀಳುತಿದ್ದಿ2 ಅಸ್ಥಿರ ಕುದುರೆ ಹತ್ತಿದ್ದಿ ಬಲು ಮಸ್ತಿಲಿಂದ ಕಣ್ಣು ಮುಚ್ಚಿದ್ದಿ ಪುಸ್ತಿಯಿಲ್ಲದ ದಾರ್ಹಿಡಿದಿದ್ದಿ ಮುಂದೆ ಸ್ವಸ್ಥತೆ ನೀ ಹ್ಯಾಂಗೆ ಪಡೀತಿದ್ದಿ 3 ಯಾರನ್ನ ಬೇಡಿ ಬಂದಿದ್ದಿ ನೀ ನಾರಸೇವೆ ಕೈಕೊಂಡಿದ್ದಿ ದಾರಿ ತಪ್ಪಿದಾರ್ಹಿಡಿದಿದ್ದಿ ಸುವಿ ಚಾರ ಪಥವ ಧಾರೆರೆದಿದ್ದಿ 4 ಬಂದಕಾರ್ಯವನು ತೊರೆದಿದ್ದಿ ಮನ ಬಂದಂತೆ ಕುಣಿಕುಣಿದಾಡುತಿದ್ದಿ ತಂದೆ ಶ್ರೀರಾಮನ ಮರೆತಿದ್ದಿ ಈ ಬಂಧುರಸಮಯ ವ್ಯರ್ಥ ಕಳೀತಿದ್ದಿ 5
--------------
ರಾಮದಾಸರು
ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು
ಯಾತರ ಸುಖವಯ್ಯಾ ಇದು ಇನ್ಯಾತರ ಸುಖವಯ್ಯಾ ಪ ಶ್ರೀ ತರುಣೀಶನ ಮರೆತು ಸಂಸಾರದಿ ಬಾಳುವುದೆಂತೆನೆ ಅ.ಪ. ಹಣ ಉಳ್ಳ ಮನುಜಂಗೆ ಗುಣವುಳ್ಳ ಸತಿಯಿಲ್ಲ ಗುಣವುಳ್ಳ ಸತಿಯಿರೆ ಗುಣಡೊಂಕುಪತಿಯು ಅನುಕೂಲವಿರೆಎರಡು ತನಯರೊಬ್ಬರು ಇರರು ಗುಣಿಸಿ ನೋಡಲು ಎಲ್ಲು ನ್ಯೂನತೆ ಸರಿಯೈ 1 ವಿತ್ತವಿದ್ದರೆ ಹಿತರು ಬಂಧು ಬಳಗವೆಲ್ಲ ವಿತ್ತವಿಲ್ಲಾದಿರಲು ನಿಂದಿಸಿ ನಗುತಿಹರು ಬತ್ತಲೆ ಬಂದುದು ಬತ್ತಲೆ ಪೋಪುದು ಮತ್ತೆ ಮಮತೆ ಯಾಕೊ ಮಧ್ಯೆ ಮತ್ತಿದ್ದುದಕೆ 2 ಸಂತೆಯತೆರಸರಿ ಸತಿಸುತ ಪರಿಜನ ನಿಂತು ಪೋಪರು ತಮ್ಮಯ ಋಣತೀರೆ ಅಂತ್ಯವಿಲ್ಲ ಸಂಸಾರದ ಶರಧಿಗೆ ಸಂತಸಪ್ರದವೆಂಬ ಭ್ರಾಂತಿಯ ನೀಗಯ್ಯ 3 ಜನನ ಮರಣವೆಂಬ ದುಃಖವೆ ತಾಕಿರೆ ದಿನದಿನ ಪ್ರತಿದಿನ ರೋಗದ ಕಾಟಗಳು ಗುಣಿಸಿ ನೋಡಲು ಮತ್ತೆ ಮನಕೆ ನೆಮ್ಮದಿ ಇಲ್ಲ ಅನಿಲ ಮಂದಿರ ನೊಲಿಸಿ ಗುಣದೂರನಾಗಯ್ಯ 4 ಕಾಲನೆಡೆಗೆ ಜನ ಬೀಳ್ಪುದು ನೋಡಿಯು ಬಾಳು ಸ್ಥಿರವೆಂದು ಕೇಳಿಲಿ ಮುಳುಗುವುದೇ ಬಾಲ ಯೌವ್ವನ ಮತ್ತೆ ಮುಪ್ಪಿಲಿ ಬೀಳುವ ಸ್ಥೂಲ ಶರೀರವೆ ಗೋಳಿನ ಸೆರೆಮನೆಯೈ5 ಊಟ ತಿಂಡಿಗೆ ಮೇಲ್ನೋಟದ ಕೀಟಗೆ ಕರ್ಮ ಮೂಟೆಯ ಘಳಿಸುವರೇ ಭವ ಕಾಟಕ ದಾಟಲು ಘೋಟಕಾಸ್ಯನ ಪದವಾರಿಜ ಪಿಡಿಯೈಯ್ಯ 6 ಮಂದನಾಗದೆ ಬಹು ಮುಂದಿನ ಗತಿ ನೋಡು ವಂದಿಸಿ ಜಯತೀರ್ಥ ವಾಯ್ವಾಂತರ್ಗತ ಪತಿ ಕೃಷ್ಣವಿಠಲನ ಭಜಿಸಲು ಕುಂದುಗಳಿಲ್ಲದೆ ಶಾಶ್ವತಾನಂದವು ಕೇಳಯ್ಯ 7
--------------
ಕೃಷ್ಣವಿಠಲದಾಸರು