ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆ ಬಂದಿದೆ ಇದಿಗೊ ಮದ್ದಾನೆ ಪ ಜ್ಞಾನಿಗಳೊಳಾಡುವ ಮದ್ದಾನೆ ಅ ದೇವಕಿಯೊಳು ಪುಟ್ಟಿದಾನೆ - ವಸುದೇವನ ಪೆಸರೊಳೈತಂದ ಮದ್ದಾನೆಶ್ರೀ ವಾಸುದೇವನೆಂಬಾನೆ - ಗೋಪಿದೇವಿಯ ಗೃಹದೊಳಾಡುವ ಪುಟ್ಟಾನೆ 1 ನೀಲವರ್ಣದ ನಿಜದಾನೆ - ಸ್ವರ್ಣಮಾಲೆಗಳಿಟ್ಟು ಮೆರೆವ ಚಲುವಾನೆಶ್ರೀಲೋಲನೆನಿಪ ಪಟ್ಟದಾನೆ - ದುಷ್ಟಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ 2 ಬಾಲೇಂದು ಮುಖದ ಮರಿಯಾನೆ - ಕದ್ದುಪಾಲನ್ನು ಕುಡಿದ ಮರಿಯಾನೆಕೈಲಿ ಗಿರಿಯನೆತ್ತಿದಾನೆಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ 3 ಧೇನುಕಾಸುರನ ಕೊಂದಾನೆತನಗೆ ಜೋಡಿಲ್ಲದಿಹ ನಿಜದಾನೆಮಾನವರಿಗೆಲ್ಲ ಸಿಲ್ಕದಾನೆಶೌನಕಾದಿಗಳೊಂದಿಗಿಪ್ಪಾನೆ 4 ಮಲ್ಲರೊಡನೆ ಗೆಲಿದಾನೆ - ಕಡುಖುಲ್ಲ ಕಂಸನ ಕೆಡಹಿದಾನೆ - ವಿದ್ಯೆ ಸಾಂದೀಪರಲಿ ಕಲಿತ ಮರಿಯಾನೆಸಲೆ ಭಕ್ತರ ಕಾವ ಪುಟ್ಟಾನೆ 5 ತರಳೆ ರುಕ್ಮಿಣಿಯ ತಂದಾನೆ - ಬಹುಕರುಣದಿಂ ಪಾಂಡವರ ಪೊರೆದಾನೆವರ ವೇಲಾಪುರದೊಳಿಪ್ಪಾನೆಸಿರಿಯಾದಿಕೇಶವನೆಂಬ ಮದ್ದಾನೆ 6
--------------
ಕನಕದಾಸ
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪಿದೇವಿಯ ತನಯ ಗೋಪಾಲ ಬಾಲಗಲ್ಲದೆ ಪ ದೊರೆಯ ತನದಲಿ ನೋಡೆ ಧರಣಿ ಜಾತೆಯ ರಮಣಸಿರಿಯ ತನದಲಿ ನೋಡೆ ಶ್ರೀಕಾಂತನುಹಿರಿಯ ತನದಲಿ ನೋಡೆ ಸರಸಿಜೋದ್ಭವನ ಪಿತನುಗುರುವು ತನದಲಿ ನೋಡೆ ಆದಿಗುರುವು 1 ಪಾವನತ್ವದಿ ನೋಡೆ ದೇವಿ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯಲಾವಣ್ಯದಲಿ ನೋಡೆ ಲೋಕ ಮೋಹನ ಪಿತನುಜವ ಧೈರ್ಯದಲಿ ನೋಡೆ ಅಸುರಾಂತಕ2 ಗಗನದಲಿ ಸಂಚರಿಪ ವೈನತೇಯ ವಾಹನಜಗವನು ಪೊತ್ತಿರ್ಪ ಶೇಷ ಶಯನಕಾಗಿನೆಲೆಯಾದಿಕೇಶವರಾಯಗಲ್ಲದೆಮಿಗಿಲು ದೈವಗಳಿಗೀ ಭಾಗ್ಯಮುಂಟೆ 3
--------------
ಕನಕದಾಸ
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ