ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ಜನಪಾಲ ಪಾವನ ತರಲೀಲ ಲಕ್ಷ್ಮೀಲೋಲ ಕಾಲನಮಿತ ಸುರಜಾಲ ಸೇವಿತ ಶೌರಿ ಪ ವಂದಿತ ಸುರಮುನಿ ವೃಂದ ಭಕುತಜನ ಬಂಧುವಾಗಿರುವ ಗೋವಿಂದ ಗೋಪಾಲದೇವ ಮಂದಹಾಸ ಬಲಿ ಬಂಧನ ಮುರಹರ ಸಿಂಧು ಶಯನ ಗೋಪಿಕಂದ ಮುಕುಂದ 1 ಕಂಸಾರಿ ಕರುಣಾಭ್ದಿ ಶೃಂಗಾರಿ ಸುಜನ ಮನೋರಥ ಸುರತರು ಹಾರ ಹೀರ ಗಂಭೀರ ವೈಯಾರ 2 ಅಂಬುಜ ಭವನುತ ಶಂಬರಾರಿಯಪಿತ ಜಂಭಾರಿ ನಮಿತ ಹೇರಂಬ ಜನಕಪ್ರೀತ ಕಂದರ ಕಮಳಾಂಬಕ ರಮಣ 3 ರಾಗಿ ಜನರ ಭವರೋಗ ಹರಣಹರಿ ನಗಧರ ಸಗರ ವಂಶೋದ್ಧಾರ ಖಗವರ ಗಮನ ಸುಗುಣ ಗಂಭೀರ 4 ದುರಿತ ಸಂಹಾರಿ ಕರದಿ ಚಕ್ರಧಾರಿ ಸುರರ ಸಿರಿ ಧುರ ಧೀರ ಚಿಪ್ಪಳಿವಾಸ ವೇಣುಗೋಪಾಲ 5
--------------
ಕವಿ ಪರಮದೇವದಾಸರು
ಪರಮ ಕೃಪಾನಿಧೆ ಗೋಪಾಲದೇವ ಪ ಪರಿಪಾಲಿಸೋ ಎನ್ನ ಶ್ರೀಲೋಲ ಹರಿ ಅ.ಪ. ಪತಿತಪಾವನಾಶ್ರಿತ ಜನ ಪಾಲನ ಗತಿ ನೀನಲ್ಲದೆ ಕಾಣೆ ನಾ1 ಮಾನಾಭಿಮಾನ ನಿನ್ನಾಧೀನ ದೀನ ಜನಾವನ ನಿನ್ನವ ನಾ 2 ಅಜಭವಾರ್ಚಿತ ಆನಂದಾಚ್ಯುತ ನಿಜಪಥ ತೋರಿಸೊ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ ಪ ನೆಲೆಯಿಲ್ಲದಾ ಮಹಿಮ ಶ್ರೀರಾಮ ಗೋಚರಿಸೊ ಅ.ಪ ಶ್ರುತಿಗಗೋಚರ ನೀನು ಸರ್ವೇಶ ಸ್ವಾತಂತ್ರ ನೀನು ಕೃತಿಮಗ್ನ ಪಶು ನಾನು ಗೋಪಾಲದೇವ ಮೃತಿ ಭೀತಿ ವಶನಾಗಿ ನೆಲೆತಪ್ಪಿ ಪೋಗುತಿಹೆ ಅತಿಭಯದಿ ನಡುಗುವೆ ಹೇ ಶ್ರುತಿನಾಥ ಪೊರೆ ಎನ್ನ 1 ಪರಮ ಮಂಗಳ ಅನಿಲದೇವ ಮಂದಿರ ಶ್ರೀಶ ಪರತತ್ವ ಪರಮಾತ್ಮ ಪಿಡಿಯೊ ಕರವ ಮರುವೆಂಬ ಮಾರಿಯನು ನಿರ್ಮೂಲ ಮಾಡಯ್ಯ ದೊರಿ ನಿನ್ನ ಸ್ಮøತಿ ಸತತ ಅಚ್ಛಿನ್ನವಾಗಿರಲಿ 2 ಭಾನು ಕೋಟಿ ತೇಜ ಶ್ರೀ ಕ್ರೀಡೆಮಾಳ್ಪ ಜ್ಞಾನ ಪಾಲಿಸು ಎನಗೆ ಜಯೇಶವಿಠಲ ಆನಿ ಅಜಮಿಳ ಅನಿಮಿತ್ತ ಬಾಂಧವನೆ 3
--------------
ಜಯೇಶವಿಠಲ