ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವ ಜಯದೇವ ಜಯಗೋಪಾಲಕೃಷ್ಣಾ | ಜಯ ಜಯಯೋಗೀ ಮಾನಸ ಮೋಹನ ಘನಕರುಣಾ ಪ ದೇವಕಿವಸುದೇವರ ಭಾವನೆ ಪೂರಿಸಲಿ | ಶ್ರಾವಣ ಕೃಷ್ಣಪಕ್ಷದ ಅಷ್ಟಮಿರೋಹಿಣಿಲಿ || ತೀವಿದ ಚಂದ್ರೋದಯ ರಾತ್ರಿಯ ಕಾಲದಲಿ | ಭುವನದಿ ಅವತಾರವ ಮಾಡಿದೆನೀ ವೇಗದಲಿ 1 ಸೊಕ್ಕಿದ ಕಂಸನ ಕೊಂದು ದುಷ್ಕ್ರತನಾಶನವಾ | ಮುಖ್ಯಮಾಡು ಕಾರಣ ಧರ್ಮ ಸ್ಥಾಪನವಾ || ಸಖ್ಯದಿ ಕಟ್ಟಲು ಉಗ್ರಶೇನಗೆ ಪಟ್ಟವಾ | ಅಕ್ಕರದಿಂದಲಿ ಬೆಳೆದೆ ಗೋಕುಲದಲಿ ದೇವಾ 2 ಕುರುಕುಲಾನ್ವಯ ಜೀವನರೆಲ್ಲರ ಸೆಬಡಿದೆ | ಚರಣವನಂಬಿದ ಪಾಂಡವರನು ಸ್ಥಾಪನಗೈದೆ | ಪರಪರಿಯಿಂದಲಿ ಭಜಿಸುವ ಭಕ್ತಾವಳಿ ಪೊರೆದೇ | ಗುರುವರಮಹೀಪತಿ ಸುತ ಪ್ರಭುಸಲಹೆನ್ನನು ಬಿಡದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ ಕುಂಡ ಗೋಳಕರರ ಸನ ಮನಿಯಲಿ ಜನ ಉಂಡ ವೆಂಜಲ ಬಳಿದು ಹಿಂಡ ರಾಯರ ಮುಂದ ಕುದುರೆಯ ತೊಳೆವುತ ಭಂಡಿಯ ಹೊಡೆವುತ ಪಾರ್ಥನವಶವಾಗಿ1 ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು ನಿಲ್ಲದೇ ಮಾರ್ಗದಿ ಬರುತಿರಲು ಮುಳ್ಳು ಮುರಿಯವಳ ಕಾಲವ ಹಿಡಿವುತ ಸಂತೈಸಿ ಕಳುಹಿದ 2 ಜಾರ ಚೋರನೆನಿಸಿ ನಿರುತ ಗೋವಳರುಂಡನ್ನ ಸವಿದು ಗುರುವರ ಮಹಿಪತಿ ಪ್ರಭು ಜನ್ಮರಹಿತನವ ತರಿಸಿ ಯಶೋಧೆಯ ಮೊಲೆ ಪಾಲವನುಂಡು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ ಕರುಣನಾದ ದೇವ ಅ.ಪ ಬಿಡದಾನಂದಾದಿ ಇನ್ನು ಇಂದಿರೆ ರಮಣ 1 ನಿನ್ನ ಧ್ಯಾನಾವೇಗತಿ ಎನ್ನುತ ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ ದಿವ್ಯದಾನಿಗಳರಸ 2 ತ್ರಿಜಗವಂದಿತಧೊರಿಯೆ ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ ----- ಸುರನುತ-----ತ ಪರಾಕ್ರಮ 3
--------------
ಹೆನ್ನೆರಂಗದಾಸರು