ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿ ಕಾಯಬೇಕೆನ್ನ ಲಕುಮಿ ಪ. ಕಾಯಬೇಕೆನ್ನ ನೋಯುವೆ ಭವದಲಿ ಕಾಯಜಪಿತನನು ಕಾಯದಿ ತೋರಿ ಅ.ಪ. ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ ಪಾರುಗಾಣಿಸೆ ಜನನಿಯೆ ತೋರೆ ನಿನ್ನ ಪತಿಯ ಪಾದವ ಮನದೊಳು ಸೇರಿಸೆ ಸುಜನರ ಸಂಗದೊಳೀಗ1 ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ ಮುಕ್ತಿಮಾರ್ಗವ ನೀನೀಯೆ ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ ಮುಕ್ತರೊಡೆಯನೊಳು ಭಕ್ತಿಯ ನೀಡೆ 2 ಅಷ್ಟಭುಜದ ಶಕ್ತಿಯೆ | ಶ್ರೀ ಭೂಮಿ ದುರ್ಗೆ ಅಷ್ಟ ಐಶ್ವರ್ಯದಾಯಿನಿಯೆ ಶ್ರೇಷ್ಠ ಶ್ರೀಗೋಪಾಲಕೃಷ್ಣವಿಠ್ಠಲನೊಳು ಪಟ್ಟವಾಳ್ವೆ ಜಗಸೃಷ್ಟಿ ಪ್ರಳಯದಿ 3
--------------
ಅಂಬಾಬಾಯಿ
ಬೇಗನೆ ಪಾಲಿಸೆ ಸಾಗರಸುತೆ ನಿನ್ನ ಈಗ ಪೂಜಿಸುವೆನೆ ನಾಗಶಯನನ ರಾಣಿ ಪ. ಅಂದುಗೆ ಕಿರುಗೆಜ್ಜೆ ಅಂದದ ಪಿಲ್ಲೆನಿಟ್ಟು ಇಂದು ತೋರಿ ಕಾಯೆ 1 ಜರಿಯು ಪೀತಾಂಬರ ನೆರಿಗೆ ವೈಭವಗಳು ಕಿರುಗೆಜ್ಜೆ ವಡ್ಯಾಣ ಹರಿಯಂತೆ ನಡುವು 2 ಒಪ್ಪದಿಂದಲಿ ಜರಿ ಕುಪ್ಪಸವನೆ ತೊಟ್ಟು ಸರ್ಪಶಯನನಿಗೆ ಒಪ್ಪಿಹ ಸತಿಯೆ 3 ಭಾರ ಕುಚದಲಿ ಮೆರೆಯೆ ನಾರಸಿಂಹನ ರಾಣೀ ತೋರೆ ಕರುಣವ 4 ಮೆರೆವ ಮಂಗಳಸೂತ್ರ ಕರದಿ ಕಂಕಣಗಳು ವರ ವಜ್ರದುಂಗುರ ಧರಿಸಿ ಮೆರೆಯುವಳೆ 5 ನಾಗಮುರಿಗೆಯನಿಟ್ಟು ಭೋಗಿಶಯನನ ರಾಣಿ ಮೂಗುತಿ ಮುರವು ಮುಗುಳು ನಗೆಯವಳೆ 6 ಹೊಳೆವ ದಾಳಿಂಬ್ರದಂತೆ ಒಲಿವ ಬುಲಾಕು ಥಳಥಳಿಪೊ ಗಲ್ಲ ಕರ್ಣಭೂಷಣ 7 ಸುರರ ಪಾಲಿಪ ದೃಷ್ಟಿ ವರ ನಯನಗಳು ಫಣಿ ತಿಲುಕವು 8 ಹೆರಳು ಬಂಗಾರದ ಧರಿಸಿ ಶಿರೋರತ್ನ ವರ ಕುಸುಮಂಗಳ ಧರಿಸಿಹ ಚಲುವೆ 9 ಶಿರದಿ ಕಿರೀಟವು ಸರ್ವಾಂಗ ಸುಂದರಿ ಪರಮಾತ್ಮ ಸಹಿತದಿ ಉರದಲಿ ತೋರೆ 10 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೊಳು ಶ್ರೇಷ್ಠ ಭಕ್ತಿಯ ನೀಡೆ ಕೃಷ್ಣನ ಸತಿಯೆ 11
--------------
ಅಂಬಾಬಾಯಿ