ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊರೆದು ಪೋಗುವುದುಚಿತವೇ | ಶ್ರೀ ಗುರುವರ ಹರಣ ನೀಗುವುದುಚಿತವೇ ಪ. ಕಮಲ ನಂಬಿ ಇರುವಂಥ ತರಳೆಯ ಜರಿದು ಮೋಸದಿ ಇಂತು ಅ.ಪ. ಆರನಾ ಪೂಜಿಸಲಿ | ಪರಿಪರಿಯಿಂದ ಆರನಾ ಸ್ತುತಿಗೈಯ್ಯಲಿ | ಪೇಳೆನ್ನ ಗುರುವೆ ತೋರದು ಮನಸಿಗೆ ಬೇರೊಂದು ಮತಿ ಇನ್ನು ಕಾರುಣ್ಯಮೂರ್ತಿ ಮತ್ತಾರ ಸೇವಿಸಲಿನ್ನು ಧಾರುಣಿಯೊಳ್ ನಿಮ್ಮ ಹೊರತಿ ನ್ನಾರು ಕಾಯುವರಿಲ್ಲವೆಂದು ಸೇರಿದವಳನು ಬಿಟ್ಟು ಶ್ರೀ ಗುರು ಮಾರನಯ್ಯನ ಪುರಕೆ ಪೋಪರೆ 1 ತುಪ್ಪ ಸಕ್ಕರೆ ಸವಿದಾ | ಶುಭತನುವಿನ್ನು ಒಪ್ಪವಾಯಿತೆ ಶಿಖಿಗೆ | ಕ್ಷಣ ಮಾತ್ರದಲ್ಲಿ ಅಪ್ಪಾವು ಅತಿರಸ ಮೆಲ್ಲುವ ಇಚ್ಛೆಯು ತೃಪ್ತಿಯಾಯಿತೆ ಪೇಳಿ ಅಪ್ಪಯ್ಯ ನಿಮಗಿನ್ನು ಅಪ್ಪ ಅಮ್ಮ ಸರ್ವಬಳಗವು ತಪ್ಪದಲೆ ನೀವೆಂದು ನಂಬಿದೆ ಒಪ್ಪಿಕೊಂಡೊಂಬತ್ತು ವರುಷವು ಇಪ್ಪ ರೀತಿಯ ಬಯಲು ಮಾಡಿ2 ಕಡುಕೃಪೆಯಿಂದಲಿ | ಪೇಳಿದ ಗೋಪ್ಯ ಒಡಲೊಳು ನೆನೆಯುತಲಿ | ಕುಣಿದಾಡುತಿದೆ ಒಡಲೊಳು ದೃಢಭಕ್ತಿಯೊಳ್ ನಂಬಿ ಬಿಡದೆ ನಿಮ್ಮಡಿಗಳು ನಡುವೆ ಬಂದೆಡರುಗಳ್ ಕಡೆಹಾಯ್ದು ಮಿಡುಕದೆ ಅಡಿಗಡಿಗೆ ಬೆಂಬಿಡದೆ ಚರಣವ ಪಿಡಿದು ಕೇಳಲು ಅಭಯವಿತ್ತ ನುಡಿಗಳೆಲ್ಲವು ಎತ್ತ ಪೋಯಿತೊ ಕಡಲಶಯನನ ಮಾಯವಕಟಾ 3 ಹಿಂದೊಬ್ಬರನು ಕಾಣೆನೊ | ನಿಮ್ಮಂದದಿ ಮುಂದೊಬ್ಬರನು ಕಾಣೆನೊ | ಈ ಕರುಣದವರ ಒಂದೊಂದು ಗುಣ ಗಣ ಬಂದು ಸ್ಮರಣೆ ಮನಕೆ ಕಂದಿ ಕುಂದಿಸುತಿದೆ ನೊಂದು ಬೆಂದು ಪೋದೆ ಚಂದವೇ ಇದು ಪೋಪ ತೆರವು ತಂದೆ ಸೈರಿಸಲಾರೆ ಗುರುವರ ತಂದೆ ಮುದ್ದುಮೋಹನರೆನಿಸಿದ ಸುಂದರಾತ್ಮಕ ಸುಗುಣಪೂರ್ಣ 4 ಎನ್ನಂತೆ ಬಳಲುವರು | ನಿಮ್ಮಯ ಶಿಷ್ಯ ರುನ್ನಂತೆ ಇರುತಿಹರೊ | ಬಹು ಭಕ್ತಿ ಉಳ್ಳವರು ಮನ್ನಿಸುತವರ ಸಂಪನ್ನ ಸಲಹಬೇಕು ಬಿನ್ನಪವಿದು ಕೇಳು ಮನ್ನಿಸು ಕೃಪಾಳು ಇನ್ನು ಸೈರಿಸೆ ಸೈರಿಸೆನು ನಿಮ್ಮ ಘನ್ನ ಮೂರ್ತಿಯ ಮನದಿ ತೋರೈ ಇನ್ನು ಗೋಪಾಲಕೃಷ್ಣವಿಠ್ಠಲನು ಭವ 5
--------------
ಅಂಬಾಬಾಯಿ
ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ ಪ. ದಾಸರಾಯರ ಪದವ ನಂಬಿ ವಾಸುದೇವಗೆ ಬೇಗನೆ ಅ.ಪ ದುಷ್ಟಮನ ಕಲ್ಮಷವ ಕಳದು ಸೃಷ್ಟಿಕರ್ತನ ಭಜನೆ ಮಾಡುತ ಕಷ್ಟಗಳನೀಡಾಡಿರಿ 1 ತಂದೆ ಮುದ್ದುಮೋಹನರೆಂ- ತೆಂದು ಮೆರೆಯುವ ಗುರುಗಳ ದ್ವಂದ್ವ ಪಾದವ ಭಜಿಸಿ ಈ ಭವ ಬಂಧನವನೀಗಾಡುತ 2 ಜನನ ಮರಣ ನೀಗುವುದಕೆ ಕೊನೆಯ ಮಾರ್ಗವು ದಾಸತ್ವ ಘನಮನದಿ ಸ್ವೀಕಾರ ಮಾಡಿ ವನಜ ನಯನನ ಪಾಡಿರಿ 3 ಅಂಕಿತವ ಸ್ವೀಕಾರ ಮಾಡಿರಿ ಶಂಕಿಸದೆ ಶ್ರೀಗುರುಗಳಿಂ ಶಂಖ ಚಕ್ರಾಂಕಿತನ ಗುಣಮನ ಪಂಕಜದೊಳು ಸ್ಮರಿಸಿರಿ 4 ಆದಿಯಿಂದಲಿ ಇಹುದು ಜೀವಗೆ ಶ್ರೀಧರನ ದಾಸತ್ವವು ಈ ಧರ್ಮ ತಿಳಿಯದಲೆ ಗರ್ವದಿ ಹಾದಿ ತಪ್ಪಲಿ ಬೇಡಿರಿ 5 ಜಗದೊಡೆಯ ಶ್ರೀ ಹರಿಯು ಸರ್ವದ ನಿಗಮಗಳಿಗಾಧಾರನು ಬಗೆಬಗೆಯ ಜೀವರೊಳಗಿರುತಲಿ ಸುಗುಣವಂತರ ಪೊರೆವನು 6 ಈ ಪರಿಯ ದಾಸತ್ವ ಹೊಂದಿ ನಿ ರ್ಲೇಪರಾಗಿರಿ ಕರ್ಮದಿಂ ಗೋಪಾಲಕೃಷ್ಣವಿಠ್ಠಲನು ರೂಪ ತೋರ್ವನು ಹೃದಯದಿ 7
--------------
ಅಂಬಾಬಾಯಿ
ನೋಡಿದೆನು ವಿಠ್ಠಲನ ದಣಿಯ ಪ. ನೋಡಿದೆನು ವಿಠ್ಠಲನ ರೂಪವ ಪಾಡಿದೆನು ಮನದಣಿಯ ಹರುಷವು ಮೂಡಿತಂಗದಿ ಮುಗಿದು ಕೈ ನಾ ಮಾಡಿ ಸಾಷ್ಟಾಂಗ ಬೇಡಿ ಮನಸಿನಭೀಷ್ಟ ಸಂತತ ನೀಡು ನಿನ್ನಯ ಚರಣ ಸ್ಮರಣಿಯ ಪಾಡಿಪೊಗಳುವ ಭಾಗ್ಯಬೇಕೆಂದು ಕಾಡಿದೆನು ಹರಿಯಾ 1 ಪಂಚ ಪಂಚ ಉಷಃ ಕಾಲದೀ ಪಂಚ ಬಾಣನ ಪಿತಗೆ ಆರುತಿ ಮುಂಚಿನೊಸನಗಳೆಲ್ಲ ತೆಗೆಯುತ ತೈಲವೆರೆಯುವರೂ ಪಂಚರೂಪಗೆ ಚಂದ್ರಭಾಗೆಯ ಪಂಚ ಗಂಗೋದಕಗಳೆರೆಯುತ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು 2 ಬೆಣÉ್ಣ ಬಿಸಿನೀರೆರೆದು ಕೃಷ್ಣಗೆ ಸಣ್ಣ ವಸ್ತ್ರದಿ ವರಸಿ ಮೈಯ್ಯನು ಘನ್ನ ಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ ಬಣ್ಣದೊಸ್ತ್ರದ ಪಾಗು ಸುತ್ತುತ ಬೆಣ್ಣೆ ಕಳ್ಳಗೆ ಅಂಗಿ ತೊಡಿಸುತ ಸಣ್ಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ 3. ಗಂಧ ಅಕ್ಷತೆ ಪುನುಗು ಜವ್ಜಾಜಿ ಛಂದದಾ ಕಸ್ತೂರಿ ತಿಲಕವು ಸುಂದರಾಂಗದ ಮುಖಕೆ ಕನ್ನಡಿ ತೋರಿಸುವರಿಂತೂ ಅಂದದಾ ಪಕ್ವಾನ್ನ ತರುತಲಿ ಇಂದಿರೇಶಗೆ ಅರ್ಪಿಸುತ್ತಲಿ ಒಂದು ಧೂಪಾರತಿಯ ಬೆಳಗಿ ಒಂದು ಏಕಾರ್ತಿ 4 ಮಾಡಿ ಪಂಚಾರ್ತಿಗಳ ವಿಠಲಗೆ ಪಾಡುವರು ಮನದಣಿಯ ಭಕ್ತರು ನೀಡುವರು ಪಂಚಾಮೃತಂಗಳ ಬೇಡುವರು ಹರಿಯ ರೂಢಿಯೊಳು ಪಂಡರಿಯ ಕ್ಷೇತ್ರವ ಬೇಡಿದವರನು ಪೊರೆವ ಗೋಪಾಲಕೃಷ್ಣವಿಠ್ಠಲನು 5
--------------
ಅಂಬಾಬಾಯಿ