ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಜ | ನಮಿಪರ ಸುರಭೋಜ ಗುರುರಾಜ ಪ. ವರತಂದೆ ಮುದ್ದುಮೋಹನರೆಂದೆನಿಸುತ ಮೆರೆಯುತ ಜಗದೊಳು ಪೊರೆಯುವ ಕರುಣಿ 1 ಅಜ್ಞತೆ ತೊಲಗಿಸಿ ಸುಜ್ಞತೆ ಕೊಡುತಲಿ ವಿಘ್ನವ ತರಿಯುವ ಪ್ರಾಜ್ಞ ಮೂರುತಿಯೆ 2 ಸರಸಿಜಾಕ್ಷನ ಪದ ಹರುಷದಿ ಭಜಿಸುವ ಪರಮಪ್ರಿಯರು ಎಂದು ಬಿರುದು ಪೊತ್ತಿಹರೆ 3 ನಾಗಶಯನನಿಗೆ ಭೋಗವಪಡಿಸುವ ಆಗಮಜ್ಞರೆ ನಿಮಗೆ ಬಾಗುವೆ ಸತತ 4 ಸಾಸಿರ ಫಣೆಯಿಂದ ಸೂಸುವ ಕಾಂತಿಯೊಳ್ ವಾಸವ ವಿನುತ 5 ದೇವತಾಂಶದ ಗುರು ಪವಮಾನಿಗೆ ಪ್ರಿಯ ಭಾವಿಸಿ ಭಜಿಪರ ಕಾವ ಕರುಣಾಳು 6 ಶಾಂತಚಿತ್ತದಿ ಬಹು ಸಂತೋಷಪಡುತಲಿ ಅಂತರಂಗದಿ ಹರಿಯ ಚಿಂತಿಸುತಿರುವ 7 ಉದ್ಭವಿಸಿ ಜಗದಿ ಅಧ್ಭುತ ಮಹಿಮೆಯ ಒಬ್ಬೊಬ್ಬರಿಗೆ ತೋರಿ ಹಬ್ಬಿಪೆ ಹರುಷ 8 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನನು ದೃಷ್ಟಿಗೆ ತೋರಿಸಿ ಕಷ್ಟ ಬಿಡಿಸಿರಿ 9
--------------
ಅಂಬಾಬಾಯಿ
ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿ ದುರ್ಗೆ ಪಾಲಿಸೆ ಕರುಣದಿ ಪ. ಅಪವರ್ಗ ಪದವಿ ಇತ್ತು ದುರ್ಗಮವಾಗಿಹ ದುಃಖವ ಬಿಡಿಸಿ ಭಾರ್ಗವಿರಮಣನ ಮಾರ್ಗವ ತೋರೆ ಭೋರ್ಗರೆಯುತ ಖಳರ ನಿಗ್ರಹಿಸುವಳೆ ಅ.ಪ. ಕ್ಷೀರವಾರಿಧಿ ತನಯೆ | ಶ್ರೀ ರಮಣನ ಜಾಯೆ ನಾರಸಿಂಹನ ಅರಸಿಯೆ ಸಾರಿದೆ ನಿನ ಪದ ತೋರಿಸೆ ಹರಿಪದ ಕಾರುಣ್ಯಾತ್ಮಳೆ ಕರುಣವ ಬೀರೆ ವಾರವಾರಕೆ ನಿನ್ನ ಆರಾಧಿಸುವಂಥ ಚಾರುಮತಿಯ ನೀಡೆ ನಾರಿರನ್ನಳೆ 1 ಪದ್ಮಾವತಿಯೆ ಪದ್ಮಿನಿ | ಪದ್ಮಾಕ್ಷಿದೇವಿ ಪದ್ಮಸಂಭವೆ ಕಾಮಿನಿ ಪದ್ಮನಾಭ ಶ್ರೀ ಶ್ರೀನಿವಾಸನ ಪದ್ಮಪಾದವ ಹೃತ್ಪದ್ಮದಿ ತೋರೆ ಪದ್ಮಸರೋವರ ತೀರವಾಸಿ ಕರ ಪದ್ಮಯುತಳೆ ಮುಖಪದ್ಮವ ತೋರೆ2 ರೂಪತ್ರಯಳೆ ಕಾಮಿನಿ | ಕಾಮಪೂರಿಣೀ ತಾಪಹರಿಸೆ ಭಾಮಿನಿ ಪಾಪಗಳÉಲ್ಲವ ನೀ ಪರಿಹರಿಸುತ ಗೋಪಾಲಕೃಷ್ಣವಿಠ್ಠಲನನು ತೋರುತ ನೀ ಪರಿ ನುಡಿವೆನೆ ನೀ ಪಾಲಿಸುವುದು ಆಪವರ್ಗದಲಿ 3
--------------
ಅಂಬಾಬಾಯಿ
ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ | ಕರುಣಿಸು ಇಷ್ಟಾರ್ಥ ಪ. ಯೋಗಿವರ ಶ್ರೀ ಅಬ್ಬೂರು ನಿಲಯ | ಸದ್ಭಕ್ತರಿಗತಿ ಪ್ರಿಯ ಅ.ಪ. ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ | ಪಾವನ ಶುಭಕಾಯ ಚಿತ್ತದಲಿ ಹರಿ ಚಿಂತನೆ ಮಾಡುತಲಿ | ವರಗಳ ನೀಡುತಲಿ ಆತ್ಯಧಿಕದ ಕಣ್ವ ನದಿಯ ತೀರ ವಾಸ | ನಿನ್ನಲಿ ಹರಿ ವಾಸ ಸುಜನರುಗಳ ಪೊರೆವೆ 1 ಪ್ರೇಮದಿ ನೀ ಕೊಳಲು ಗೋಕ್ಷೀರವನೆರೆದೆ ಆಗಮಗಳ ಕಲಿಸಲು ಮೌಂಜಿಯ ಕಟ್ಟಿ | ಶ್ರೀಪಾದರಲಿ ಬಿಟ್ಟೆ ಯೋಗಿ ವ್ಯಾಸರಾಯರು ಎಂದ್ಹೆಸರಿಟ್ಟು | ಸನ್ಯಾಸವನೆ ಕೊಟ್ಟು 2 ಪಾಪಿ ಜನರ ಪಾವನಗೈಯುತಲಿ | ಶ್ರೀನಿಧಿ ಧ್ಯಾನದಲಿ ಕಾಪಾಡು ಸಧ್ಭøತ್ಯರ ದಯದಿಂದ | ತಪಸಿನ ಶಕ್ತಿಂದ ಶಿಷ್ಟರ ಪೊರೆಯುತಲಿ ಗೋಪಾಲಕೃಷ್ಣವಿಠ್ಠಲನನು ಹೃದಯದಲಿ | ನಿತ್ಯದಿ ಕಾಣುತಲಿ 3
--------------
ಅಂಬಾಬಾಯಿ
ಭಜನೆ ಭಾಗ್ಯ ಒಂದೇ ಸಾಲದೇ | ಹರೀ ಪ. ಭಜಕರಾದವರಿಗೆ ಹಗಲು ಇರುಳು ಮಾಳ್ಪಾ ಭಜನೆ ಭಾಗ್ಯ ಒಂದೇ ಸಾಲದೆ ಅ.ಪ. ಭಕ್ತರೆಲ್ಲರು ಕೂಡೀ ಮುಕ್ತಿಗೊಡೆಯನ ಪಾಡಿ ಭಕ್ತಿ ಭಾಗ್ಯವ ಬೇಡಿ ನೃತ್ಯವ ಗೈಯುವಾ 1 ತಾಳ ತಂಬೂರಿ ಗೆಜ್ಜೆ ಮೇಳನದಿಂದಲೀ ತೋಳುಗಳೆತ್ತಿ ಪಾಡೀ ವೇಳೆಯ ಕಳೆವಂಥಾ 2 ಹಿಂದೆ ಮುಂದಾಡುವ ನಿಂದಕರಾ ನುಡಿ ಒಂದು ತಾರದೆ ಮನಕಾನಂದವ ಬೀರುವಾ 3 ಕಟ್ಟಳೆ ಮೀರದೆ ಬಿಟ್ಟು ಬಿಡದೆ ನಿತ್ಯ ನಿಷ್ಠೆಯಿಂದಲಿ ಗುರು ಕೊಟ್ಟ ಅಜ್ಞೆ ಎಂಬಾ 4 ಮೂರ್ತಿ ನಿಂತು ಒಳಗೆ ಹೊರಗೆ ಸಂತಸಪಡಿಸೆ ಏಕಾಂತ ಭಕ್ತರು ಮಾಳ್ಪ 5 ಸಾಸಿರ ಸತ್ಕರ್ಮ ಮೀಸಲು ಫಲಗಳೂ ಶ್ರೀಶನ ಧ್ಯಾನಕೆ ತ್ರಾಸಿಗೇರದೆಂಬ 6 ಪದ್ಧತಿಯಂತೆ ತಂದೆ ಮುದ್ದುಮೋಹನ್ನ ಗುರು ಪದ್ಮ ಪಾದಕೆ ಸೇರಿ ಪೊದ್ದಿದ ದಾಸ್ಯದ 7 ತ್ರಿಗುಣದ ಕಲ್ಮಶ ವಗೆದು ದೂರಕೆ ಮನ ಮಿಗಿಲಾಗಿ ಹರಿಪದ ತಗಲಿಕೊಂಬುವುದಕ್ಕೆ 8 ನರ್ತಗೈಯ್ಯುತ ಸುತ್ತಿ ಪ್ರದಕ್ಷಿಣೆ ಎತ್ತಿ ಸ್ವರವ ಹರಿ ಮೂರ್ತಿಯ ಪಾಡುವಾ 9 ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನನು ಇಟ್ಟು ಹೃತ್ಕಮಲದಿ ಮುಟ್ಟುವೋ ಹರಿ ಪುರ 10
--------------
ಅಂಬಾಬಾಯಿ