ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾದಿರಾಜರು ವಾದಿರಾಜ ಗುರುರಾಜರ ಕೊಂಡಾಡಿ ಜನಿಪ ಸುಖವನು ಬೇಡ ಪ ಸೋದೆ ಸ್ಥಳದಲಿ ನಿಂತು ಮೆರೆವನಯ್ಯಹಯವದನನ ಪ್ರಿಯ ಅ.ಪ. ಮೋದತೀರ್ಥ ಮತವಾರಿಧಿ ಪೂರ್ಣಚಂದ್ರ ಸದ್ಗುಣ ಸಾಂದ್ರಾಮೇದಿನಿಯೊಳಗಿಹ ತೀರ್ಥ ಕ್ಷೇತ್ರವ ಚರಿಸಿ ಸಂತರನುದ್ಧರಿಸಿಸಾದರದಲಿ ಹರಿಮಹಿಮೆಯ ಕೊಂಡಾಡಿ ಪ್ರಬಂಧವನು ಮಾಡಿವಾದಿಗಳೆಂಬುವ ಗಜಕುಲ ಹರ್ಯಕ್ಷನಾಗಿಹ ಹರಿದೀಕ್ಷಾ 1 ಎರಡೀರರುವತ್ತು ವಿದ್ಯಾಪೂರ್ಣನೆನಿಸೀ ದೂಷಕರನು ಜಯಿಸಿಬಿರುದುಗಳನಪಹರಿಸಿದ ಯತಿವರ್ಯ ಹರಕಾರ್ಯ ಧುರ್ಯವರಭೈಷ್ಮಿಶನ ವಿಜಯದ ಕಾವ್ಯವನು ಬಹುಪರಿ ಮಹಿಮೆಯನುವಿರಚಿಸಿ ಕವಿಕುಲ ಮಾನ್ಯನೆನಿಸಿಕೊಂಡ ಹರಿದಾಸ ಪ್ರಚಂಡಾ 2 ಅನುದಿನ ಸೇವಕರುಭೂತಳದ ಜನರು ಬೇಡಿದ ಇಷ್ಟಾರ್ಥ ಕೊಡುವಂಥ ಸಮರ್ಥಧಾರುಣಿಪತಿ ಗೋಪತಿವಿಠಲ ನಿನ್ನೊಶನಾಗಿಹನಲ್ಲ 3
--------------
ಗೋಪತಿವಿಠಲರು
ವಾಯುದೇವರು ಎರಡೂ ಕೈ ಮುಗಿದೂ ಬೇಡುವನ್ಯಾರೇ ಪೇಳಮ್ಮಯ್ಯ ಪ ಸುರನರರ ಖಳರ ಪರಿಪರಿ ಕರ್ಮವ ಹರಿಗೊಪ್ಪಿಸುವಮರುತ ಕಾಣಮ್ಮ ಅ.ಪ. ಕರವ ಬಲಕೆತ್ತೆ ನಿಂತಹನ್ಯಾರೇ ಪೇಳಮ್ಮಯ್ಯಾಭರದಿಂದ ಚರಣಗಳೂರಿದನ್ಯಾರೇ ಪೇಳಮ್ಮಯ್ಯಾದುರುಳ ಜನರ ಮೆಟ್ಟಿ ಶರಣರಿಗಭಯವಕರೆದು ಕೊಡುವ ಬಹು ಕರುಣಿ ಕಾಣಮ್ಮ 1 ಬಿಂಕಾದಿ ಮುಖವಾ ತಿರುಹಿದನ್ಯಾರೇ ಪೇಳಕ್ಕಯ್ಯಟೊಂಕಾದಿ ಎಡಗೈಯಿಟ್ಟಿಹನ್ಯಾರೇ ಪೇಳಕ್ಕಯ್ಯಕಿಂಕರರಡಿ ಬರೆ ಅಂಕದೊಳೆತ್ತುವಡೊಂಕನಾದ ನಿಷ್ಕಳಂಕ ಕಾಣಮ್ಮ 2 ಚೆಲುವ ಸರ್ವಾಂಗಲಕ್ಷಣನ್ಯಾರೇ ಪೇಳಮ್ಮಯ್ಯಹಲವೂ ಫಲಗಳನೂ ನೀಡುವನ್ಯಾರೇ ಪೇಳಮ್ಮಯ್ಯಸುಲಭಗೋಪತಿವಿಠಲನ ಪ್ರಿಯಕದರುಂಡಲಗಿ ಪುರಿ ಧೊರೆ ಇವನಮ್ಮ 3
--------------
ಗೋಪತಿವಿಠಲರು
ಶ್ರೀ ರಾಘವೇಂದ್ರರು ಯೋಗಿ ಕುಲವರ ಮಕುಟ ಗುರು ಶ್ರೀರಾಘವೇಂದ್ರನ ಭಜಿಸಿರೋ ಪ ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನು ದು ರ್ವಾದಿ ಗಜಸಮುದಾಯರೇ 1 ದೂಷಿಸುವ ಜನರುಗಳ ಗರ್ವ ಅಶೇಷ ಪರಿಹಾರಗೈಸುವಾ 2 ದಿನಪನಂದದಿ ಕಾಂತಿಬೃಂದಾ ಬನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ 3 ವ್ಯಾಕ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾ 4 ಆಪ್ತರಿಲ್ಲದೆ ಈತನೇಯೆನಗಾಪ್ತನನುದಿನವಾಗುವಾ 5 ಕೋಲ ತನಯೆಯ ತೀರದಲಿ ಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠಲನ ಕೃಪೆಗಾಲಯನು ಯೆಂದೆನಿಸುವಾ6
--------------
ಗೋಪತಿವಿಠಲರು