ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ಎಲ್ಲ ಆಳ್ವಾರರು ಆಳ್ವಾರ್ ತಿರುವಡಿಗಳೆ ಶರಣೆನ್ನುತ ಬಾಳ್ವರು ಭಜಿಪುದು ಬಕುತಿಯಲಿ ಪ ಕೇಳ್ವರು ಕಥೆಗಳ ಮಮತೆಯಿಂದಲಿ ಮಾಳ್ವರು ಮನೆ ವೈಕುಂಠದಲಿ ಅ.ಪ ಮೊದಲಿನ ಮೂವರು ಮಾಧವನೆನುತ್ತ ಪದುಮನಾಭನೊಡನಾಡಿದರು ಅದುಭುತ ಮಹಿಮಾ ತಿರುಮೊಳಿಶಯ್ಯರ ಮುದದಿಂ ಶಿವ ಕೊಂಡಾಡಿದನು 1 ಮಧುರಕವಿಗಳು ನಮ್ಮಾಳ್ವಾರರ ಪದಗಳ ಪೂಜಿಸಿ ಹಾಡಿದರು ತದುಪರಿ ತಿರುವಾಯ್ಮೊಳಿಯನು ಅವರಿಂ ದಧಿಕರಿಸುತ ಹಿತವೆಸಗಿದರು 2 ಪೆರಿಯಾಳ್ವಾರರು ಹರಿಯನು ಪಾಡುತ ವರವೇದಕೆ ತಾವ್ ಮೊದಲಿಗರು ಪರಮಪಾವನೆ ಗೋದಾದೇವಿಯು ದೊರೆ ಶ್ರೀರಂಗನ ಕೈವಿಡಿದಳ್ 3 ಪೆರಿಯ ತಿರುಮೊಳಿಯ ತಿರುಮಂಗೈಯ್ಯರು ತಿರುಪ್ಪಾಣ ವಿಪ್ರನಾರಾಯಣ ತಿರುವನಂತಪುರದ ಕುಲಶೇಖರರು ಸಿರಿಯರಸನ ತೇರ ಮಾಡಿದರು 4 ಪರಮಾತ್ಮನ ಸನ್ನಿಧಿಯಿಂದಲ್ಲಿಗೆ ತೆರಳುತ ಮಹಿಮೆಯ ತೋರಿದರು ನಿರುತ ದೇವರೆಡೆ ಪೂಜೆಗೊಂಬರು ವರಜಾಜೀಶನ ಸೇವಕರು 5
--------------
ಶಾಮಶರ್ಮರು
ಪಾಂಡವಪಕ್ಷ ಪಾರ್ಥಸಾರಥಿಗೆ ಆಂಡಾಳ್ ಮಾಲೆಯ ಧರಿಸಿದಳು ಪ ಸೃಷ್ಟಿಜಾತೆಯು ಶೃಂಗಾರವಾಗಿ ಬಂದು ಕೃಷ್ಣಮೂರುತಿಯೆದುರಲ್ಲಿ ನಿಂದು ಅಷ್ಟವಿಧದ ಪುಷ್ಟಮಾಲೆಗಳನ್ನು ತೆಗೆದು ತಟ್ಟೆಯೊಳಗೆ ಇಟ್ಟು ಕಳುಹಿದಳು 1 ಆದಿಮೂರುತಿ ಮಂಟಪದಲ್ಲಿ ಕುಳಿತಿರೆ ಶ್ರೀದೇವಿ ಭೂದೇವಿ ಸಹಿತವಾಗಿ ವೇದಮೂರುತಿಯನು ನೋಡಿ ಸಂತೋಷದಿ ಗೋದಾದೇವಿಯು ಮಾಲೆ ಧರಿಸಿದಳು 2 ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ ಇರುವಂತಿಗೆ ಪಚ್ಚೆ ಮುಡಿದಾಳ ಪರಿಪರಿ ಪುಪ್ಪದ ಸರಗಳ ಪಿಡಿದು ಧರಣಿದೇವಿಗೆ ಸ್ವಾಮಿ ಧರಿಸಿದಳು 3 ತಾಳೆ ಚಂಪಕ ವಕುಳಮಾಲೆ ಮಂದಾರಪುಷ್ಪ ಕಮಲ ಸುಗಂಧರಾಜ ನೀಲವರ್ಣನ ಮುಖ ನೋಡಿ ಸಂತೋಷದಿ ನೀಳಾದೇವಿಯು ಮಾಲೆ ಧರಿಸಿದಳು 4 ಕಮಲವ ಕರದಲ್ಲಿ ಪಿಡಿದಿಹ ಕಾಂತೆಗೆ ಕಮಲವದನೆಯೆಂದೆನಿಸಿದವಳಿಗೆ ಕಮಲಾಕ್ಷಿಗೆ ಶ್ರೀವೆಂಕಟಕೃಷ್ಣನು ಕಮಲನಾಭನು ಮಾಲೆ ಧರಿಸಿದನು 5
--------------
ಯದುಗಿರಿಯಮ್ಮ