ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಮಾತುರ ನೀಯದಿದ್ದರೆ ನಿನ್ನ | ಧಾಮದಲ್ಲಿಗೆ ಪೋಗಿ ಸೇರಿ ಸುಖಿಪದೆಂತೋ ಪ ಹುಟ್ಟಿದಾರಭ್ಯದಿ ಹೊಟ್ಟಿ ಬಟ್ಟಿಯಲಿಂದ | ಕಷ್ಟ ಬಟ್ಟೆನೆಂದು ಹೇಳಲಿಲ್ಲಾ | ಸೃಷ್ಟೇಶ ಕಾಡುವ ಅಷ್ಟ್ಟ ಮಹಾಮದಗಳ ನಷ್ಟಗೊಳಿಸಿ ನಿನ್ನ | ನಿಷ್ಟಿಲಿಡೆಂದೆಲ್ಲದೆ 1 ಸತಿ ಸುತರಿಗೆ ಯೇನೋ | ಗತಿ ಗೋತ್ರವಿಲ್ಲೆಂದು | ಸತತ ನಿನ್ನ ಕೇಳಿ ದಣಿಸಿಲಿಲ್ಲಾ | ಪತಿತ ಪಾವನ ಎನಗೆ ಗತಿಯಾಗುವುದಕೆ | ಸುಪಥವನೆ ತೋರುವ | ಮತಿಕೊಡೆಂದೆನಲ್ಲದೆ2 ಕರುಣಿ ಬೇಡಿಕೊಂಬೆ | ಉರು ಕಾಲದಲಿ ನಿನ್ನ | ಶರಣರ ಸಂಗತಿಲೆನ್ನ ಇಟ್ಟು | ಪರಮ ಶುದ್ಧನ ಮಾಡಿ ವಿಜಯವಿಠ್ಠಲ ನಿನ್ನ | ಚರಣಸೇವೆ ನಿರಂತರ ಕೊಡೆಂದೆನಲ್ಲದೆ3
--------------
ವಿಜಯದಾಸ
ಒಳ್ಳೆವಾಜಿಯ ಕಲಿತಿದ್ದಿತಾಳೊ ಬುದ್ಧಿಲ್ಲ ಕೇಳೊಒಳ್ಳೆ ವಾಜಿಯ ಕಲಿತಿ ತಾಳೊಸುಳ್ಳು ಕೆಲಸವ ಹೇಳಿ ಸುಳಿಯುವಿ ನೆರೆಮನೆಯಚಲುವನರಿಯುತ ಚಲುವೆರಿಬ್ಬರ ಕುಚೋದ್ಯದಲಿ ಪ. ಹೆಣ್ಣು ಕೊಟ್ಟವನಿಗೆ ಕಣ್ಣು ಕಾಣದು ಏನೊಇನ್ನೆಲ್ಲಿ ವರನ ಕಾಣದೆ ಇನ್ನೆಲ್ಲಿ ವರನ ಕಾಣದೆ ಇಂಥವಗೆಹೆಣ್ಣು ಕೊಟ್ಟವನು ಬಲು ಹೇಡಿ 1 ಕೊಟ್ಟರೇನಾಯಿತು ಅಟ್ಟುಣಲು ಬಲ್ಲಹುಟ್ಟು ಗತಿಯಂತು ಮೊದಲಿಲ್ಲಹುಟ್ಟು ಗತಿಯಂತು ಮೊದಲಿಲ್ಲ ದಾನವಕೊಟ್ಟ ಬಲೀಂದ್ರ ಇದು ಬಲ್ಲ 2 ಕುಲವಿಲ್ಲಗೋತ್ರವಿಲ್ಲ ನೆಲೆಯಿಲ್ಲ ಆಚಾರವಿಲ್ಲಬಲುದೈತ್ಯರೊಳು ಹಗೆಯಾದ ಬಲುದೈತ್ಯರೊಳು ಹಗೆಯಾದ ಇಂಥವಗೆ ಜಲನಿಧಿ ಮಗಳ ಕೊಡಬಹುದೆ 3 ಮೂರು ಗುಣಗಳ ಮೀರಿದವ ನೀಚನೆನಿಸುವ ಇವನು ನೀಚನೆನಿಸುವಇವನ ಗುಣಯಾರು ಅರಿಯರು ಧರೆ ಮ್ಯಾಲೆ4 ಹಾಲು ಕೆನೆಯ ಕದ್ದು ಬಾಲೆರೆಲ್ಲರಪೀಡಿಸಿಬಾಲನಾಗಿ ಒರಳ ಎಳೆಯುತಬಾಲನಾಗಿ ಒರಳ ಎಳೆಯುತಜನನಿಗೆ ಚಾಲವರೆದದ್ದು ಮರೆತೇನೊ5 ಬೆಣ್ಣಿ ಮೊಸರು ಕದ್ದು ಹೆಣ್ಣುಮಕ್ಕಳ ಕಾಡಿಸಿ ಮುನ್ನ ತೊತ್ತಿನ ಮನೆಯಲ್ಲಿಮುನ್ನ ತೊತ್ತಿನ ಮನೆಯಲ್ಲಿ ಉಂಡುನೀ ಹೆಣ್ಣಾಗಿದ್ಯಲ್ಲೊ ರಮಿಯರಸು6
--------------
ಗಲಗಲಿಅವ್ವನವರು
ದಾತೆಇಂದಿರೆಪಾರಿ| ಜಾತ ಮಂದಿರೆ ಲೋಕ |ನಾಥೆ ಸುಖ ಪೂರ್ಣೆ ವಿಖ್ಯಾತೆ ||ಬಿನ್ನವಿಸುವೆನೆ ಯನ್ನಮಾತು ಮನ್ನಿಪುದೇ ವಿಧಿಮಾತೆ ಪಪಾನೀಯಧಿ ಹರಿಗೆ | ಏನು ಕೊಟ್ಟನೊ ನಿನ್ನ |ಕಾಣಿಸವೆ ಕಣ್ಣು ಕುಲವಿಲ್ಲ ||ಗೋತ್ರವಿಲ್ಲ ಹೆತ್ತವರ-ಕ್ಷೋಣಿಯೊಳಗೊಬ್ಬರರಿತಿಲ್ಲ1ಏನು ಮರುಳಾದೆವ್ವ | ಶ್ರೀನಾರಿಯಿಂಥವಗೆ |ಹೀನಳುಚ್ಛಿಷ್ಟ ಫಲಮೆದ್ದ ||ಬಡ ಬ್ರಾಹ್ಮಣೊದ್ದರೆಮಾನವೇ ಇಲ್ಲಿ ನಗುತಿದ್ದ2ಥವ ಚೋರ ಬಹುಜಾರ| ಸವತಿಯರು ಬಲು ಮಂದಿ |ಅವರಿಗಾತ್ಮಜರು ಹತ್ತತ್ತು ||ನಿನ್ನೊಗತನದೊಳಿದ್ದಅವಿವೇಕ ಮೂಲೋಕಕೆ ಗುರುತು3ಅತ್ತೆ ಮಾವಗಳಿಲ್ಲ |ವೃತ್ತಿಕ್ಷೇತ್ರಗಳಿಲ್ಲ |ಹಸಿದರನ್ನಿಲ್ಲ ಮನೆಯಲ್ಲಿ ||ಈ ಗಂಡನೊಡನೆಯೇ-ನರ್ಥಿ ಪಡುತಿಹೆಯೆ ನೀ ಬಲ್ಲೆ 4ಸೇರಿದನುಪತಿನಿನ್ನ | ತೌರು ಮನೆ ನೋಡಲ್ಕೆ |ಧಾರಿಣಿಯೊಳಗೆ ಬಹು ನಿಂದಾ ||ಭಕ್ತಿಯಿಂದವನ ಹ್ಯಾ-ಗಾರಾಧಿಸುವದೋ ಸುರವೃಂದಾ 5ಶಿಶು ಹಿಂಸಕತಿ ಕಠಿಣ | ಹಸನ್ಮುಖನಲ್ಲರ್ಭಕ ಹೆಂ- |ಗಸರಳಿದ ಪುಕ್ಕಾ ಬಹು ಠಕ್ಕಾ ||ಕಲಹಗಂಟೇನು ಸೇ-ವಿಸಿದ್ಯೊ ವ್ರತಗಳನು ಇವ ಸಿಕ್ಕಾ6ಎಲ್ಲೆಲ್ಲಿ ನೋಡಿದರು | ಇಲ್ಲಿ ಪ್ರಾಣೇಶ ವಿ- |ಠಲನಂಥವರೂ ಏನೆಂಬೆ ||ಮುದದಿಂದ ಬಿಡದೆ ಅವ-ನಲ್ಲಿ ಪೊಂದಿರ್ಪೆ ಜಗದಂಬೆ 7
--------------
ಪ್ರಾಣೇಶದಾಸರು