ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ 1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ಶ್ರೀಪತಿ
ತನ್ನ ತಿಳಿಯದವನೇಕೆ ಇನ್ನವನನು ಸುಡಬೇಕು ಪ ವೇದಾರ್ಥಿಯು ತಾನಾಗಿ ವಾದಿಸುತಿಹನೀ ಗೂಗೆಓದಿದ ಓದದು ವ್ಯರ್ಥ ಒಳ್ಳಿತಾಗಿ ಗಳಿಸಿದನರ್ಥ 1 ಆಚಾರದಿ ಒದ್ದಾಡಿ ಅಡವಿಯ ಹಿಡಿದನು ಖೋಡಿಕುಚಾಳಿಯೆ ವ್ಯವಹಾರ ಕುಮಂತ್ರಕೆ ಬಲು ಧೀರ 2 ಮಾನ್ಯರ ಕೋಪದಿ ಝಡಿವಾ ಅವಮಾನ್ಯರ ಕೊಂಡಾಡಿ ನುಡಿವಾಜ್ಞಾನದ ಹಾದಿಯ ಕಾಣ ಗೋಣಿಯ ಹೊರುವ ಕೋಣ3 ಮುಕ್ತಿಯ ತಿಳಿಯಲು ಬಾರ ಮುಂದಿನ ಭವಿತವ ನೋಡಭಕ್ತಿಯೆಂಬುದಿಲ್ಲ ಈ ಕತ್ತೆಗೇನು ಸಲ್ಲ 4 ಕಲ್ಲನೆ ದೇವರು ಎಂಬ ಕಡಮೆಯಲಿಲ್ಲವು ಎಂಬಒಳ್ಳಿತಲ್ಲವು ಅವನಿರವು ಒಲಿದವನೇ ಚಿದಾನಂದ ಗುರುವು 5
--------------
ಚಿದಾನಂದ ಅವಧೂತರು
ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ ಪ ತಿಂಗಳ ತೇಜದಲಿ ಪೊಳೆಯುತ ಕಂಗೊಳಿಸುವ ಮುಕುಟ ಮಂಡಿತ ಬಂಗಾರದಾಭರಣ ಭೂಷಿತ ಶೃಂಗಾರದಿ ರಥವನೇರುತ ಮಂಗಳ ವಾದ್ಯಂಗಳುಲಿಯೆ ರಂಗನಾಥ ಪ್ರತಿವರ್ಷದಿ ತುಂಗಛತ್ರ ಚಾಮರ ವ್ಯಜ- ನಂಗಳ ವಿಭವದಿ ಬರುತಿರೆ ಕಂಗಳಿಂದ ನೋಳ್ಪ ಭಕ್ತ ಜಂಗುಳಿ ಪಾಲಿಸಲೋಸುಗ ಮಂಗಳಸಿರಿ ಜಾಲಹಳ್ಳಿ ಪುರನಿಲಯ ಪೊರೆ ಎನ್ನ1 ಹಿಂದಕೆ ಮುದಗಲ್ಲು ಪುರದಿ ಬಂದಿಹ ಉಪ್ಪಾರ ಜನದಿ ಬಂದು ಗೋಣಿಯೊಳಗೆ ಮುದದಿ ನಿಂದಿಯೊ ಪದಮೆಟ್ಟೆ ಬೆಟ್ಟದಿ ಅಂದಿನ ರಾತಿಯ ಸ್ವಪ್ನದಿ ಸಂದರ್ಶನವಿತ್ತು ಪುರದಿ ಮಂದಿರಕಾರ್ಯವ ಸೂಚಿಸ- ಲಂದು ರಾಯಗೌಡನಿಂದ ಬಂಧುರದಲಿ ನಿರ್ಮಿತ ಆ- ನಂದನಿಲಯ ಮಂದಿರ ಮು ಕುಂದನಂದ ಕಂದನೆ ಮದ್ ಹೃದಯದಲಿ ಸದಾತೋರೋ2 ವಾರಿಚರ ಮಂದರಧರ ಭೂ ಚೋರಮಥನ ಘೋರರೂಪನೆ ಚಾರು ಬ್ರಹ್ಮಚಾರಿ ವಾಮನ ಶೂರ ಪರಶುರಾಮನೆ ನಮೊ ಧಾರುಣಿ ಜಾವಲ್ಲಭ ಕಂ- ಸಾರಿ ವಸನದೂರನೆ ಹಯ ವೇರಿ ದುಷ್ಟ ದಿತಿಜರ ಭಯ ದೂರ ಮಾಡಿ ಕಾವದೇವ ಧಾರುಣಿಸುರ ಪರಿಪಾಲಕ ವಾರಿಜಭವ ನುತ ಕಾರ್ಪರಾ- ಗಾರವೀರ ನಾರಸಿಂಹ ನಮಿಸುವೆನು ರಮಾರಮಣ3
--------------
ಕಾರ್ಪರ ನರಹರಿದಾಸರು
ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ವಿಶ್ವಪತಿ
ಕಲ್ಲುಸಕ್ಕರೆ ಕೊಳ್ಳಿರೊ - ನೀವೆಲ್ಲರು |ಕಲ್ಲುಸಕ್ಕರೆ ಕೊಳ್ಳಿರೊ ಪ.ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು |ಫುಲ್ಲನಾಭಕೃಷ್ಣನ ದಿವ್ಯನಾಮವೆಂಬಅ.ಪಎತ್ತ ಹೇರುವುದಲ್ಲ ಹೊತ್ತು ಮಾರುವುದಲ್ಲ |ಒತ್ತೊತ್ತಿ ಗೋಣಿಯ ತುಂಬುವುದಲ್ಲ ||ಎತ್ತ ಹೋದರು ಮತ್ತೆ ಸುಂಕವು ಇದಕಿಲ್ಲ |ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ 1ನಷ್ಟಬೀಳುವುದಲ್ಲ ನಾಶವಾಗುವುದಲ್ಲ |ಕಟ್ಟಿ ಇಟ್ಟರೆ ಮತ್ತೆ ಕೆಡುವುದಲ್ಲ ||ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವುದಲ್ಲ |ಪಟ್ಟಣದೊಳಗೊಂದು ಲಾಭವೆನಿಸುವಂಥ 2ಸಂತೆಪೇಟೆಗೆ ಹೋಗಿ ಶ್ರಮಪಡಿಸುವುದಲ್ಲ |ಎಂತು ಮಾರಿದರದಕಂತವಿಲ್ಲ ||ಸಂತತ ಪುರಂದರವಿಠಲನ ನಾಮವ |ಎಂತು ನೆನೆಯಲು ಪಾಪ ಪರಿಹಾರವಲ್ಲದೆ 3
--------------
ಪುರಂದರದಾಸರು