ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ
ಯಾರಿಗೆ ದಾರೋ ಗೋಡೆಗೆ ಮಣ್ಣು ಮಾರಿಯರೆಲ್ಲರು ಶ್ರೀ ಹರಿಯೇ ಪ ಸ್ಥಿತಿಯಲ್ಲ ದೇವಾ ನಿನ್ನುಳಿದು 1 ಅಂಬುಜಲೋಚನ ಪರಮ ಪುರುಷನ ಭವ ಅಂಬುಜೆರಮಣಾ ನಿನ್ನುಳಿದು 2 ನಂಬಿದ ಭಕ್ತರ ಸಲಹುವ ಹರಿಯೇ ಸಂಭ್ರಮದಾತ್ಮಗೆ ನಿನ್ನುಳಿದು3 ನರಹರಿ ಭಕ್ತಿ ಮಾಡಿದ ಧರ್ಮ ಸರಸದಿ ಪರಹಿತವನ್ನುಳಿದು 4 ಹಿಡಿಯುವೆ ಮುಕ್ತಿಯ ಮಾರ್ಗವನೀಗ ಪಡೆವೆನು ಸುಖವ ಕೇಶವನೇ5
--------------
ಕರ್ಕಿ ಕೇಶವದಾಸ
ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ ಸಹಸಾ ಜರಿವವಳಲ್ಲಭಕುತೀಲೆ ಕಟ್ಟುವೆ ಈರಡಿಯ ನಡೆಅಕ್ಕ ಗೋಪಮ್ಮನಿದ್ದೆಡೆಯ ಪ.ಮುನ್ನಿನಪರಾಧಗಳ ತಾಳ್ದೆ ನಾನಿನ್ನ ದಿಟ್ಟತನ ಬಲವರಿದೆಚಿನ್ನನೆನಬಹುದೇನೊ ನಿನಗೆ ದಿಟ್ಟಗಣ್ಣವ್ಹರಿದೆಮ್ಮಯ ಮೊಲೆಗೆಉನ್ನತ ಗೋಡೆಗೆ ನಿಚ್ಚಣಿಕೆಯಿಕ್ಕದೆ ಪಾರಿದೆಘನ್ನ ಪಾಲು ಮೊಸರ ಗೋಪರೊಡನೆ ಸವಿದೆಉನ್ನತ ಮಹಿಮೆಯೆತ್ತ ಘನ್ನಜಾರತನಯೆತ್ತಬೆನ್ನ ಬಡಿಯುತ ನಗೆ ಬಿಡದಿಹ ಕಳ್ಳಾ 1ಹರಿಮಧ್ಯದಬಲೆಯರೆಳೆದೆ ಪಂಚಶರನ ಭರಕೆ ಮತಿಗಳೆದೆಹರವಿ ತುಪ್ಪಾದರೆ ನೆಗೆದೆ ಈಗಕರೆದರೆ ಬರಲೊಲ್ಲೆ ನಗದೆಚೋರತನವೇಕೆ ಗಂಭೀರತನವೇಕೆಪರಿಪರಿಹಲವಂಗವೇಕೆ ವರಕರುಣೇಕೆಸಿರಿಕಾಂತನಹದೆತ್ತ ದುರುಳತನಗಳೆತ್ತಕ್ರೂರಮುಖಕಂಜಿದಡೆ ಬಿರುದು ಪೋಯಿತಲಾ 2ತೊಂಡಮಕ್ಕಳ ಬಲವ ನೋಡಿದೆ ಬಲುಪುಂಡನಂತೆ ಕದನವನಾಡಿದೆಭಂಡತನದಲೊಬ್ಬನ ಬಡಿದೆ ದೊಡ್ಡಗಂಡಸಿನಂದದಿ ಮೇಲೋಡಿದೆಗಂಡನುಳ್ಳ ಬಾಲೆಯರ ಸದನಕೆ ಗಮಿಸಿ ಪ್ರಚಂಡತನದಿ ಮಿಂಡವೆಣ್ಣುಗಳ ಪಿಡಿದೆತಂಡ ತಂಡದೊಳು ಮುದ್ದುಕೊಡಲೀಸದಿರರು ಬೊಮ್ಮಾಂಡ ಪತಿಯಾದರಿದು ಸಲುವುದೆ ಕಳ್ಳಾ 3ಉತ್ತಮ ಮರ ನೆರಳ ನೋಡಿದೆ ಮರಹತ್ತುತಲೆ ಚಂಡನೀಡಾಡಿದೆಸುತ್ತಲಿಹ ಗೋವರ ಬೇಡಿದೆ ಅವರೆತ್ತಿ ಕೊಡದಿರೆ ಹಗೆವಿಡಿದೆಮತ್ತಮಾವನ್ನೊತ್ತಿ ಮುದುಮುತ್ತನ ಕೈವಿಡಿದೆಕತ್ತಲೆ ಹಕ್ಕಿಯ ಮಾಡಿ ದಿತಿಜರನರಿದೆಎತ್ತಣ ವೈಕುಂಠ ನಿನಗೆತ್ತಣನಂತಾಸನವೊಭಕ್ತರ ಕಾಯ್ದೆ ಆವಪಟ್ಟಲಿಹೆ ಕಳ್ಳಾ 4ಪೊಂದೊಡಿಗೆ ತೊಡದೆ ನಡುವಿರುಳೆ ಬರೆಕುಂದದೆ ವ್ರತಗೆಟ್ಟ ತರಳೆಛಂದವೇನೊ ನಿನಗೀವಾಜರೆಲೆ ಗೋವಿಂದೆರಡು ಕೈಕಟ್ಟಿ ತೋರಲೆಒಂದೊಂದುಸುರಲಿ ನಿನ್ನ ಗುಣಮಾಣಿಕದಖಣಿಅಂಧರಿಗರಿವುದೆ ಪ್ರಸನ್ವೆಂಕಟೇಶಮಂದರಘ ರಂಧ್ರಾವಳಿ ಪೊಂದಿಸಿ ನೋಡಲಾಗದುಇಂದಿರೆಯರಸನೆ ದಾಸವೃಂದವನು ಪೊರೆಯೊ 5
--------------
ಪ್ರಸನ್ನವೆಂಕಟದಾಸರು
ಸುಣ್ಣವಿಲ್ಲ ಭಾಗವತರೆ |ನುಣ್ಣನೆಯ ಗೋಡೆಗೆ ನಿನ್ನ ತೊಡೆದು ಬಿಟ್ಟೆ......... ಪ.ವೀಳೆಯ ಹಾಕುವನಲ್ಲ ವ್ಯಾದಿಷ್ಠ ನನಗಂಡ ||ಬಾಳುಗೇಡಿ ಎನ್ನ ಬಾಯನೋಡಿ ||ಹಾಳಾದ ಮನೆ ಹೊಕ್ಕು ಗೋಳುಗರಿಯತ್ತೇನೆ |ಕೇಳಿದ ಬಳಿಕಿನ್ನು ಹೇಳದೆ ಫಲವೇನು......... 1ಮದ್ದು ಮದ್ದು ತಿಂದು ಮನೆಯೆಲ್ಲ ಬರಿದಾಯ್ತು |ಹೊದ್ದಿತು ಮೂದೇವಿ ಮೈದುನಗೆ ||ಬದ್ಧತನದಿ ಸಂಜೆಭಂಗಿ ಮುಕ್ಕುವಭಾವ |ಒದ್ದು ಕೊಳ್ಳುತಾನೆ ಒಳಗೆ ಕದವನಿಕ್ಕಿ 2ಅನ್ನೆಕಾರಿ ಅತ್ತೆ ತೊನ್ನು ಬಡಕ ಮಾವ |ಗನ್ನ ಘಾತಕಿರಂಡೆಅತ್ತಿಗೆ ಮುಂಡೆ ||ಎನ್ನ ಗೋಳು ತಾಗಿ ಎಂದಿಗೆ ಹೋದಾರು |ಪನ್ನಗಶಯನ ಶ್ರೀ ಪುರಂದರವಿಠಲ 3
--------------
ಪುರಂದರದಾಸರು
ಹರಿಯೆಂಬ ನಾಮಮೃತ ರುಚಿಕರವೆಲ್ಲಪರಮಭಕ್ತರಿಗಲ್ಲದೆ - ಮಿಕ್ಕ -|ಅರಿಯದ ಕಡುಮೂರ್ಖ ಮನುಜರಿಗೆಲ್ಲತಾಹರುಷವಾಗಬಲ್ಲದೆ? ಪಅಂದುಗೆಅರಳೆಲೆಯಿಟ್ಟರೆಕೋಡಗಕಂದನಾಗಬಲ್ಲದೆ? |ಹಂದಿಗೆ ತುಪ್ಪ-ಸಕ್ಕರೆ ತಿನ್ನಿಸಲು ಗ-ಜೇಂದ್ರನಾಗಬಲ್ಲದೆ? ||ಇಂದುಪೂರ್ಣಕಳೆಯೊಳು ತಾನು ತೋರಲುಪರಿಪರಿ ಬಂಗಾರವಿಟ್ಟರೆ ದಾಸಿ ತಾಅರಸಿಯಾಗಬಲ್ಲಳೆ? |ಭರದಿಂದ ಶ್ವಾನನ ಬಾಲವ ತಿದ್ದಲುಸರಳವಾಗಬಲ್ಲದೆ? ||ಉರಗಗೆ ಕ್ಷೀರವನೆರೆಯಲು ಅದು ತನ್ನಗರಳವ ಬಿಡಬಲ್ಲದೆ? ||ಭರದಿಂದ ನೀಲಿಯ ಕರದಿಂದ ತೊಳೆಯಲುಕರಿದು ಹೋಗಬಲ್ಲದೆ? | 2ಮೋಡಕೆ ಮಯೂರ ಕುಣಿವಂತೆ ಕುಕ್ಕುಟನೋಡಿ ಕುಣಿಯಬಲ್ಲದೆ? |ಗೋಡೆಗೆ ಎದುರಾಗಿ ನಾಟ್ಯವಾಡಲುನೋಡಿ ಸುಖಿಸಬಲ್ಲದೆ? ||ಹಾಡಿನ ಕುಶಲತೆ ಬಧಿರನು ತಾ ಸವಿ-ಮಾಡಿ ಕೇಳಬಲ್ಲನೆ? |ರೂಢಿಗೊಡೆಯ ನಮ್ಮಪುರಂದರವಿಠಲಮೂಢಜಾÕನಿ ಬಲ್ಲನೆ3
--------------
ಪುರಂದರದಾಸರು