ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತೋ ಪೂಜಿಪುದಂತರ್ಯಾಮಿಯನನಂತಾದಿರಹಿತನ ಚಿಂತಾದೂರನ ಚಿನುಮಯರೂಪನನೆಂತೋ ಧ್ಯಾನಿಪುದು ಪ ಈಶ ವೀಸ ವಾಹನಗೀಸನ ಚರಾಚರ ಮೀಸಲಿಗಳವಲ್ಲಾ ವಾಸುಕಿ ಭೋಗ ನಿವಾಸಿಗೆ ತರವಲ್ಲಾ 1 ಚರಣದಿ ಗಂಗೆಯ ಧರಿಸಿತುವಾತನ ಚರಣವ ತೊಳೆಯುವರೇ ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ 2 ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ 3 ಕಲಶಾಂಬುಧಿಯೊಳು ನೆಲೆಸಿಹ ಮೂರ್ತಿಗೆ ಸಲಿಲ ಸ್ವರ್ಶನವೆ ಜಲರುಹ ನೇತ್ರಗೆ ಜಲರುಹಗಾತ್ರಗೆ ಜಲದಲಿ ಮಜ್ಜನವೆ 4 ಸ್ವರ್ಣಾಂಬರಗಳ ಬಣ್ಣಿಸುತುಡುವಗೆ ಬಣ್ಣದ ವಸ್ತ್ರಗಳೆ ಕೌಸ್ತುಭ ರನ್ನದ ತೊಡವಿಗೆ ಬಿನ್ನಣದೊಡವೆಗಳೆ 5 ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂ ಪಡೆದವಗೆ ಮಿಸುಪ ತುಲಸಿಯಿಂದೆಸೆವಗೆ ಪೂಗಳ ವಿಸರ ಮನೋಹರವೇ 6 ಗಂಧವಾಹನ ಸುವಿಂದ ಅಸೃಜಿಸಿದ ಗಂಧವತೀತನಿಗೆ ಗಂಧಧೂಪಗಳು ಬಂಧುರಂಗಳೆ ಗಂಧರ್ವಾತನಿಗೆ 7 ವೇದಗೋಚರಿಸುವೇದಾತ್ಮಕನು ವೇದೋದ್ಧಾರಕನು ವೇದವೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೇ 8 ಕುತ್ತಿಗೆನೆನೆಯದ ವಸ್ತು ಪರಾತ್ಪರ ಪೊಕ್ಕರೆ ಜಲವನ್ನ ನಿತ್ಯ ತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತು ಜನಾ 9 ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ ಮಂತ್ರಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ 10 ಅಂತರ್ಬಹಿಯೊಳಗಂತರ ವಿಲ್ಲದನಂತರ ಗುಣಾತ್ಮಕನ ಎಂತು ಪ್ರದಕ್ಷಿಣಿಯಾಂತು ನಮಿಪೆ ಜಗದಂತರೀಕನ 11 ಸರ್ವಾಧಾರನ ಸರ್ವಶರೀರನ ಸರ್ವವ್ಯಾಪಕ ನಾ ಸರ್ವನ ನಮಿಸುವ ಗರ್ವವೆಂತುಟೊ ಶಕ್ರ ಸಮಸ್ಕøತನಾ12 ಧರೆಯೊಳು ಪುಲಿಗಿರಿವರದ ವಿಠಲನ ಚರಣವ ಭಜಿಸುವರ ನಿರುತದಿ ಪೂಜಿಪ ಹರುಷವು ಸಾಲದೆ ಹರಿ ಸರ್ವೋತ್ತಮ13
--------------
ವೆಂಕಟವರದಾರ್ಯರು
ಮಂದಮತಿಯೇ ಮಾನವಾ ಪ ಹಿಂದೊ ಮುಂದೊ ಎಂದು ಯೋಚಿಸದಿರು ಅ.ಪ ಸತತವು ಲಕ್ಷ್ಮೀಪತಿಯ ಭಜಿಸು 1 ಭಾವದಿ ತಿಳಿದತಿಭಕ್ತಿಯೊಳಿರು 2 ಈ ಚರಾಚರಕು ಗೋಚರಿಸುವ ಕಂಜ- ಲೋಚನನೆಂದು ನಿನ್ನ ನಾಚಿಕೆ ಬಿಡು 3 ಕೊರಳು ನೋಯುವಂತೆ ಕೂಗುತಲಿರು 4 ಪರದಲಿ ಮುಕ್ತಿಯು ಇಹದಲಿ ಸೌಖ್ಯವು ಗುರುರಾಮವಿಠಲನೆ ಕರುಣಿಸುವನು 5
--------------
ಗುರುರಾಮವಿಠಲ
ಭಳಿ ಭಳಿರೆ ಬಲಭೀಮ ಭಳಿರೆ ಸದ್ಗುಣಧಾಮಭಳಿರೆ ದ್ರೌಪದಿನಾಥ ಭಳಿರೆ ಶ್ರೀಹರಿದೂತಭಳಿರೆ ಅಪ್ರತಿಚರಿತ ಭಳಿರೆ ಬಲದೇವಸುತಭಳಿರೆ ಭೂಮಿಪಲಲಾಮ ಭೀಮ ಪ.ಯೋಚಿಸಿ ಖಳರು ನೆರೆದು ಭೂಚಕ್ರವಾಕ್ರಮಿಸೆಶ್ರೀ ಚಕ್ರಿ ದಯದಿ ಅಮೃತ ರೋಚಕುಲಜಾತ ಪಾಂಡು ಚಕ್ರವರ್ತಿ ಕಮಲಲೋಚನೆಯ ಪೃಥೋದರಾಬ್ಧಿ ಚಂದ್ರನಂತೆ ಜನಿಸಿಆ ಚಕ್ಷುವಿಹೀನ ಭವಾಬ್ಧಿಚೋರರೆದೆಶೂಲಗೋಚರಿಸುವಂತಿಳೆಗೆ ಸೂಚಿಸಿ ಮುಖೋದಯವಕೀಚಕ ಹಿಡಿಂಬ ಬಕ ನೀಚಮಾಗಧಮುಖರವಾಚಿಸಗುಡದೆ ಬಡಿದೆ ಭೀಮ 1ಕೊಬ್ಬಿದ ಖಳರು ಧಾತ್ರಿಗುಬ್ಬಸವ ತೋರುತಿರೆಅಬ್ಬರದಿ ಕರದ ಗದೆಗ್ಹಬ್ಬದೌತಣವಿಡುತಒಬ್ಬೊಬ್ಬರೊಮ್ಮೆ ಹನ್ನಿಬ್ಬರನ ಕರೆದುಉಬ್ಬುಬ್ಬಿ ರಣದಿ ಕುಣಿದೆಹಬ್ಬಿ ಬಹ ನಾಗರಥನಿಬ್ಬರದ ಬಿಂಕದವರೆಬ್ಬಿಸಿ ನಭಕೆ ಚಿಮ್ಮಿ ಬೊಬ್ಬಿರಿದು ಕೌರವರನಿಬ್ಬಗೆದು ಡಾಕಿನಿಯ ಉಬ್ಬಿಸಿದೆ ನಿನಗೆಪಡಿಹೆಬ್ಬುಲಿಗಳುಂಟೆ ಜಗದಿ ಭೀಮ 2ನಿರ್ಧರ ಪರಾಕ್ರಮ ಧನುರ್ಧರರ ಬೀಳ್ಗೆಡಹಿಸ್ವರ್ಧಾಮಗರು ತುತಿಸೆ ದುರ್ಧಾರ್ತರಾಷ್ಟ್ಟ್ರರಂದುರ್ಧಾಮಕೆಬ್ಬಟ್ಟಿದುರ್ಧರ್ಷಗುರುರಥವನೂಧ್ರ್ವಕ್ಕೊಗೆದುಲಿದು ಚೀರ್ದೆದುರ್ಧರ ಖಳಾನುಜನ ಮೂರ್ಧ ಕಾಲೊಳು ಮೆಟ್ಟಿಶಾರ್ದೂಲನಂದದಿ ಕೆಡದೊಡಲಿನಅರುಣಜಲಪೀರ್ದಂತೆ ತೋರ್ದೆ ಗೋವರ್ಧನಧರನನುಜÕವಾರ್ಧೀಸ್ಯರ್ಪಿಸಿದೆ ಮಝರೆ ಭೀಮ 3ಕಡಲೊಡೆಯನೆಡೆಗೆ ಬಲುಕೆಡುನುಡಿಯ ನುಡಿದವರಪಿಡಿ ಪಿಡಿದು ಖಡುಗದಿಂ ಕಡಿಕಡಿದು ಕಡೆಗಾಲದಮೃಡಕೋಟಿಯಂದದಲಿ ಕಡುರೋಷದಡಿಗಡಿಗೆಘುಡುಘುಡಿಸಿ ಹುಡುಕಿ ತುಡುಕಿಷಡಕ್ಷೋಹಿಣಿ ಪಡೆಯ ಹುಡಿ ಹುಡಿಗುಟ್ಟಿ ಪೊಡವಿ ದಿಗ್ಗಡಣ ಜಯದಂತಿ ಧಿಮ್ಮಿಡಿಸಿ ಕರ್ಮಡು ಪೊಕ್ಕುಕಡುಗಲಿಯ ತೊಡೆಮುರಿಯೆ ನಡುಮುರಿಯೆ ಗದೆಯಿಂದಹೊಡೆದೆಶಸುಪಡೆದೆ ಜಗದಿ ಭೀಮ 4ಅಪ್ಪಳಿಸಿ ಕುರುಪತಿಯ ಚಿಪ್ಪೊಡೆಯೆ ತಲೆದುಳಿದುಬಪ್ಪುವಾರುಷವೆಂಬ ಸುಪ್ತಸೂತ್ರದಿ ಅಜನಬೊಪ್ಪ ಕೃಷ್ಣನ ಕಟ್ಟುವ ಪರಾಕ್ರಮಿಗೆನುತಸುಪ್ರಾಯಶ್ಚಿತ್ತವೆನುತತಪ್ಪುಗಳನೊಂದೊಂದ ನೆಪ್ಪೆತ್ತಿ ತನ್ಮತಿಗೆಹೆಪ್ಪೆನುವ ವಾಗ್ಬಾಣ ಕುಪ್ಪಳಿಸಿ ಕೊಂದು ಶ್ರೇಯಃಪತಿ ಪ್ರಸನ್ವೆಂಕಟಾರ್ಪಣವ ಮಾಡಿ ವೈಷ್ಣವ ಪ್ರತತಿಯನು ಪೊರೆದೆ ಭೀಮ 5
--------------
ಪ್ರಸನ್ನವೆಂಕಟದಾಸರು