ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಮನೋಹರ ಭಕ್ತಲಲಾಮ ಸಿಂಧುಸದನ ತ್ರಿಜಗದೋದ್ದಾಮ ಪ ಮಂದರಮಂದಿರ ಮೇಘ ಶ್ಯಾಮ ಕುಸುಮ ಅ.ಪ ಅಮಿತ ಲೀಲ ಸಗುಣನಿರ್ಗುಣ ಮಹಿಮಜಾಲ ಸುಜನ ಪಾಲ ಕಾಲ 1 ಪರತರಪಾವನ ಕರುಣಾಂತರಂಗ ಮಾಧವ ಪರಿಭವ ಭಂಗ ಸಿರಿ ನರಸಿಂಗ ಮರಣರಹಿತ ಪ್ರಭುವರ ನೀಲಾಂಗ2 ಗೋಕುಲಪತಿ ಗೋಪಾಲಶೀಲ ವ್ಯಾಕುಲಪರಿಹರ ವೇಣುಲೋಲ ಕಾಕುದನುಜ ಸಂಹಾರ ವಿಶಾಲ ಲೋಕಪಾವನೆ ವರ ದೇವಕಿ ಬಾಲ 3 ಯೋಗಿ ವಂದಿತ ವನಜ ಸಂಭವಾದಿ ಸುರಮುನಿವಿನುತ ಚಿನುಮಯ ಚಿದ್ರೂಪ ಚಿತ್ಕಳಾಭರಿತ ಜನಕತನುಜೆಪತಿ ವಿಮಲಚರಿತ 4 ಗೋಕುಲನಾಯಕ ಶ್ರೀಕೃಷ್ಣನಮೋ ವೈಕುಂಠನಾಯಕ ಶ್ರೀ ವಿಷ್ಣು ನಮೋ ಲೋಕನಾಯಕ ಶ್ರೀನಿವಾಸ ನಮೋ ಭಕುತಿದಾಯಕ ಶ್ರೀರಾಮ ನಮೋ5
--------------
ರಾಮದಾಸರು
ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ಪ ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1 ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು 2 ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹÀರಿಗಯಾಗದಾಧರನಲ್ಲದಿಲ್ಲವೆಂದು3 ಏಕೋ ನಾರಾಯಣ ದೇವನೆಂದು ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4 ಯಾಮ ಆರರೊಳು ವ್ಯಾಸಮೂರ್ತಿ ಎಂದು ರೋಮಕೋಟಿ ಬ್ರಹ್ಮರುದ್ರರೆಂದು ಸಾಮಗಾಯನ ಕಾವೇರಿ ರಂಗೇಶ ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5 ಏಳು ಝಾವದಿ ವೇಣಿಮಾಧವನೆಂದು ಮೇಲಗೋಟೆ ಚಳ್ಳಾಬಳ್ಳನೆಂದು ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ ಪರ ಇಲ್ಲೆಂದು6 ಶ್ವೇತ ವರಾಹನೆಂದು ಮಾವ ಮರ್ದನ ಜನಾದರ್Àನನೆಂದು ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
--------------
ವಿಜಯದಾಸ
ಮದನ ಮೋಹನ ಕೃಷ್ಣ ಉದಧಿ ಶಯನ ಹರಿ ಮಾಧವನ ಪ ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ ಇಂದಿರೆ ರಮಣ ಗೋವಿಂದನ ಮಹಿಮೆಯ ಒಂದೆ ಮನದಿ ಸ್ತುತಿಸುವ ಜನರ ಕುಂದೆಣಿಸದೆ ಮುಚುಕುಂದ ವರದ ಹೃನ್ಮಂದಿರದಲಿ ನಲಿದಾಡುವನು 1 ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ- ನೇಕ ವಿಧದಿ ಸ್ತುತಿಸುವ ಜನರ ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು ತೋಕನಂದದಿ ಪರಿಪಾಲಿಸುವ 2 ಪದ್ಮನಾಭನ ಪಾದಪದ್ಮವ ಸ್ಮರಿಸುತ ಶುದ್ಧಮನದಿ ಪಾಡಿ ಪೊಗಳುವರಾ ಸಿದ್ಧಾರ್ಥನಾಮ ವತ್ಸರದಲಿ ಸುಜನರ ಹೃದ್ರೋಗವಳಿಯುತ ಸಲಹುವನೂ 3 ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ- ಕಾಂತನನೇಕ ವಿಧದಿ ಸ್ಮರಿಸೆ ದಂತಿವರದ ಅನಂತ ಮಹಿಮ ತನ್ನ ಕಾಂತೆ ಸಹಿತ ಒಲಯುವನವರ್ಗೆ4 ಕಮಲಸಂಭವಪಿತ ನಮಿಸಿ ಸ್ತುತಿಸುವೆನು ಕಮಲ ಪತ್ರಾಕ್ಷಹರಿ ಕರುಣಾನಿಧೆ ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ- ತ್ಕಮಲದಿ ಪೊಳೆಯುವ ಸುಜನರಿಗೆ5
--------------
ನಿಡಗುರುಕಿ ಜೀವೂಬಾಯಿ
ಮಾಧವ ಮಧುಸೂದನ ಕೇಶವÀ ಹರೆ ಯಾದವ ಕೃಷ್ಣ ಶ್ರೀಹರಿ ಶೌರೆಪ ವೇದವೇದ್ಯ ಸನÀ್ಮುನಿಗುಣ ಸೇವಿತ ಸಾಧುವಂದಿತ ಚರಣಕೆ ನಮಿಪÉ ಅ.ಪ ಮಂದರಧರ ಗೋವಿಂದ ಮುಕುಂದನೆ ಇಂದಿರೆಯರಸ ಹೃನ್ಮಂದಿರದಿ ಮಂದಗಮನೆ ಮಹಾಲಕ್ಷ್ಮಿಯೊಡನೆ ಆ- ನಂದದಿ ನಲಿನಲಿದಾಡು ಹರಿ 1 ಸರಸಿಜನಾಭನೆ ಮುರಳಿಧರನೆ ಹರಿ ಪರಮಪುರುಷ ಪಾವನರೂಪ ಸುರಗಂಧರ್ವರು ಸ್ತುತಿಸುತ ಪಾಡ್ವರು ವಾಹನ ಹರಿಯೇ2 ಆದಿಪುರುಷ ಪುರುಷೋತ್ತಮ ಹರಿ ಈ ವತ್ಸರ ಶುಭದಿನಗಳಲಿ ಆದರದಲಿ ಗುರುಹಿರಿಯರ ಸೇವಿಸಿ ಶ್ರೀಧರನನ್ನು ಭಕ್ತಿಲಿ ಭಜಿಸಿ 3 ಗೋಕುಲಪತಿ ಗೋವಿಂದ ಮುಕುಂದನೆ ಮಾತುಳಾಂತಕ ಮಧುಸೂದನನೆ ಗೋಪತಿ ಕೃಷ್ಣನೆ ಸಲಹುವ ಸುಜನರ ಮೂಕಾಂಬಿಕೆ ನಾಮವ ಧರಿಸಿ 4 ಕಡುಹರುಷದಿ ನಿನ್ನಡಿಗಳಿಗೆರಗುವೆ ಬಿಡದೆ ರಕ್ಷಿಸೆಂದೆನ್ನುತಲಿ ಕರುಣದಿ ಕಾಪಾಡುತ ಸಲಹುವದು ಕಮಲನಾಭ ವಿಠ್ಠಲ ದೇವ 5
--------------
ನಿಡಗುರುಕಿ ಜೀವೂಬಾಯಿ
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|ಗೋಕುಲಪತಿಗೋವಿಂದಯ್ಯಪನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
--------------
ಪುರಂದರದಾಸರು