ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ದೇವರ ಗಂಡ | ಕೃಷ್ಣ ಚಿಲ್ಲರೆ ದೈವರ ಮಿಂಡ ಪ ಪಾದದಿ ನದಿಯನು ಪೆತ್ತ | ಅದನು ರುದ್ರನು ಶಿರದಲಿ ಪೊತ್ತ ಮಾಧವನ್ಹೊಕ್ಕಳ ಜಾತ | ಶತ ಮೋದನು ಲೋಕ ಪ್ರಖ್ಯಾತ 1 ಸೃಷ್ಟಿ ಸಂಹಾರಗೈದ | ಪರ ಮೇಷ್ಟಿ ರುದ್ರರನಾಳ್ದ ಯೆಟ್ಟ ದೈತ್ಯರ ಶಿರ ಮುರಿದ | ದುರಿತ- ದೃಷ್ಟಿಸಿ ನಾಶಗೈದ 2 ಬಂಟರ ಪಾಲಕನೀತ | ವೈ- ಕುಂಠದ ಒಡೆಯನು ದಾತ ತುಂಟರ ಮಡಹುವ ಸತತ | ನಮಗೆ ನಂಟನು ಗೋಕುಲನಾಥ 3 ಮನಸಿಗೆ ಬಂದುದು ಸಿದ್ಧ | ಪ್ರತಿ ಯೆಣಿಸುವ ಜೀವನೆ ಬದ್ಧ ನೆನೆಸುವರಲಿ ತಾನಿದ್ದ | ದಯ ವನಧಿಯು ಬೆಣ್ಣೆಯ | ಕದ್ದ 4 ಭಂಗ | ತಾ ನಿರುತ ಮಾಡುವ ರಂಗ ಜಯೇಶವಿಠಲ ತುಂಗ | ಮಹಿ ಮಾ ರಕ್ಷಿಸು ದಯಾಪಾಂಗ
--------------
ಜಯೇಶವಿಠಲ
ನಿಲ್ಲು ನಿಲ್ಲೆಲೋ ನಿನ್ನ ಚಲ್ವಮೋರೆಯ ನೋಡಿ ಕಳ್ಳ ನಿನ್ನಯ ಬಿಡೆನೋ ಶ್ರೀ ಕೃಷ್ಣ ಪ ಬೆಣ್ಣೆ ಪಾತ್ರೆಯೊಳೇಕೆ ನಿನ್ನ ಕರವನಿಟ್ಟೆ ಸಣ್ಣತನವಿದಲ್ಲವೇ ನಂದಕುಮಾರ ಅ.ಪ ಕೋಮಲಾಂಗಿಯೇ ಇಂಥ ಸಾಮಾನ್ಯ ವಿಷಯದ ನೀ ಮರೆತುದು ತರವೇ ಯೋಚಿಸಿ ನೋಡು ಈ ಮೃದುವಸ್ತುವು ಕಲ್ಲು ಎದೆಯ ನಿನ್ನ ಧಾಮದಲ್ಲಿರಬಹುದೇ ಯೋಚಿಸಿ ನೋಡು 1 ನಾ ಕರುಣಾಮಯ ಲೋಕ ಸುಂದರನೆಂದು ಏಕೆ ಹೆಮ್ಮೆಯ ತೋರುವೆ ಗೋಕುಲನಾಥ ಆ ಶಕಟನ ಪುಡಿ ಮಾಡಿ ಪಾದಗಳಿಂದ ನೀ ಕೋಮಲನೆಂಬುದ ನಾ ಕಾಣೆನೇ 2 ಕೇಳಿ ಕೋಪಿಸಬೇಡ ಬಾಲನೆನ್ನನು ಎತ್ತಿ ಲಾಲನೆಯನು ಮಾಡಿದಿ ಪ್ರಸನ್ನಳು ಬಾಲೆ ನಿನ್ನಯ ಇಷ್ಟು ಸ್ಥೂಲ ಕುಚವು ತಗಲಿ ಕಾಲು ಕಠಿಣವಾಯಿತೇ ಪೇಳುವೆ ನಿಜ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀ ಹರಿಸ್ತುತಿ ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ ಬಿಂದು ಮಾಧವಾ ಪ ಸಾರ ಮಾರ ಜನಕನೆ 1 ಮಂದರಗಿರಿಯನ್ನೆ ಚಂದಾದಿಂದೆತ್ತಿದೋಕಂದನೆಂತೆಂದೆನ್ನ ಮುಂದಕೆ ಕರೆಯೋ 2 ವರಾಹ ರೂಪವ ತಾಳಿ ಧರೆಯ ಸಲಹಿದೆಯೋದುರುಳ ಮನವನಳಿದು ತ್ವರದಿ ನೀ ಕಾಯೋ 3 ಕಂಬದಿಂದಲಿ ಬಂದ್ಯೊ ಅಂಬುಜನಯನಬಿಂಬನ ಪಾಲಿಸೊ ಅಂಬುಧಿಶಯನ 4 ಇಳೆಯ ದಾನವ ಬೇಡಿ ಬಲಿಯ ಮೆಟ್ಟಿದೆಯಾಭಳಿರೆ ಪಾದವ ತೋರಿ ಉಳಹೊ ಮಹರಾಯ 5 ಛಲದಿಂದ ಕ್ಷತ್ರಿಯ ಕುಲವನಳಿದನೆಬಲವಾದ ದುರಿತವ ಕಳೆಯೊ ಸುರವರನೆ 6 ಶಿಲೆಯ ಸತಿಯ ಮಾಡಿ ಸಲಹಿದ ರಾಮಾನಲಿನಲಿವುತ ಬಾರೊ ಜಲಜ ಸಂಭವ ಪ್ರೇಮಾ 7 ಆಕಳ ಕಾಯ್ದೆಯೊ ಗೋಕುಲನಾಥಏಕಭಕ್ತಿಯನೀಯೋ ಲೋಕವಿಖ್ಯಾತ 8 ಉತ್ತಮ ಸ್ತ್ರೀಯರ ಚಿತ್ತವ ಹರಿಸಿದ್ಯೋಉತ್ತಮ ಜ್ಞಾನವನಿತ್ತು ಪೊರೆಯೊ 9ತುರಗ ರಾವುತನಾಗಿ ಮೆರೆದಂಥಾ ವೀರಭರದಿ ಕಾಡುವ ಖಳರ ತರಿಯೊ ಗಂಭೀರ 10 ಶರಧಿಶಯನ ತಂದೆವರದವಿಠಲನುಶರಣು ಬಂದವರನ್ನು ನಿರುತ ಕಾಯುವನು 11
--------------
ಸಿರಿಗುರುತಂದೆವರದವಿಠಲರು
ಶ್ರೀನಿವಾಸ ವಾಸವಿಸೂನು ಪ ಪತಿ ತ್ಯಜನೆ ತಥ ಚರಣಪಾಣಿ ಪರಮಾನಂದಾ ಚರಣಾಯುಧನಾದವಗೆ ಸೋಕಿದಳ ಚರಣದಿ ಪಾವನಗೈಸಿದೆ ದೇವಾ1 ಪತಿ ಗುರು ಪಿತೃ ಪಿತಾಮಹಾ ದೈ ವತ ಗುರೋರ್ಗುರು ಸ್ವಶುರ ಜಾರಾ ಅತಿಶಯ ಭೂತಿರಭೂತಿ ಎಂದು ಸಂ ತತ ಉಪಾಸ್ಯತನಾಗಿ ಮೆರೆವನೆ 2 ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ ಪಂಚ ರೂಪದಿ ಕೊಂಬನಾಡಿಸ್ಥ ಪಂಚಜನ ಪಂಚಮೊಗವೇಶ ತಾಳಿದ ಪಂಚ ಕುಸುಮಸಾರ ಮಧು ವಿದ್ಯಮೂರ್ತಿ 3 ಹೃದಯಾಖ್ಯಪುರ ಪಂಚದ್ವಾರದಲಿ ನೀ ವಿಧಿ ಭವರಿಂದಾರ್ಚನೆ ಗೊಂಬೆ ಪದುಮಾಷ್ಟ ದಳದಲಿ ಪ್ರಹರೇಯ ತಿರುಗುವ ಸುದರುಶನಾಬ್ಜಾದಿ ಅಷ್ಟಬಾಹು ಚನ್ನಾ 4 ಗುಣಪೂರ್ಣ ಐಶ್ವರ್ಯಾನಂತ ಮೋದಾ ಗಾನೆ ತ್ರಾಣ ಕರ್ತೃ ಪ್ರಣವ ತ್ರಿಚರಣಸ್ತಾ ಎಣಿಸುವೆ ಷÀಟುಚತು ತ್ರಿಭಿರೂಪಾತ್ಮಾ5 ಪದ್ದುಮ ಶಾಂತಸಿಂಹ ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾ ಸುದೇವ ನಾರಾಯಣ ರೂಪಗಳಿಂದ ಹೃದ್ಗತನಾಗಿ ಒಪ್ಪುವ ಮಹಾಮಹಿಮಾ 6 ಗೋಕುಲನಾಥ ಗೋವಿಂದ ತಿರುಮಲ ಕಾಕೋದರಾದ್ರಿನಿಲಯ ಸ್ವಾಮಿ ಸಿರಿ ವಿಜಯವಿಠ್ಠಲ ಪ ರಾಕು ಈ ರಥದೊಳು ಕುಳ್ಳಿ ವೇಗಸಾಗಿ7
--------------
ವಿಜಯದಾಸ