ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ ಪ. ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ1 ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ 2 ಗೊಲ್ಲರಾಕೃತಿ ಬತ್ತಲೆಯ ಸ್ಥಿತಿಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ 3 ವರನಿಪ್ಪುದು ಕರೆದರೆ ಬಪ್ಪುದುಧರೆಯಜಮ ಪರಿಪರಿಯ ಕರ್ಮ4 ಹೆಂಗಳಕೂಟ ಅಪಾಂಗದ ನೋಟ ಹಾಸ್ಯದಂಗದಿಂದೂಟ ರಣರಂಗದಿಂದೋಟ 5 ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ6 ಕರ್ತುಮಾಕರ್ತು ಮತ್ತನ್ಯಥಾಕರ್ತು ಎಂಬಶಕ್ತಿದೇವಗೆ ಬಲುಯುಕ್ತಿ ಇವಗೆ7 ನಾವೆಕರ್ತವ್ಯಂ ಸುಪ್ರವೆ ವಕ್ತವ್ಯಂಏಸು ಮಹಿಮೆಗೆ ಕೃತಕೃತ್ಯ ನಮಗೆ 8 ಪ್ರಿಯಮೋದನ ದೈತ್ಯೇಯಭೇದನಹಯವದನ ನಿನ್ನರ್ಥಿ ಕಾಯಿದನ9
--------------
ವಾದಿರಾಜ
ಗೊಲ್ಲರಾ ಮನೆಯ ಪೊಕ್ಕುಗುಲ್ಲು ಮಾಡುವುದೇನಲ - ಬಲುಲಲ್ಲೆ ಮಾಡುವುದೇನಲ ಪ ಹಾಲು ಮೊಸರು ಘೃತವು ನೆಲುವಿನಮೇಲೆ ಇಟ್ಟ ಬೆಣ್ಣೆಯಬಾಲಕರಿಗಿಲ್ಲದಲೆ ಸುರಿದುಹಾಲುಗಡಿಗೆಯನೊಡೆದಲ 1 ಸಣ್ಣ ಮಕ್ಕಳ ಕಣ್ಣ ಮುಚ್ಚಿಹುಣ್ಣಿಮೆ ಬೆಳುದಿಂಗಳಲಿಬಣ್ಣ ಬಣ್ಣದ ಮಾತನಾಡಿಸಣ್ಣ ಕೆಲಸಕ್ಕೆಳೆದಲ 2 ಸುದತಿಯೊಬ್ಬಳು ದಧಿಯ ಮಥಿಸುತಒದಗಿದ ಬೆಣ್ಣೆಯ ತೆಗೆಯಲುಮದನ ಕದನಕೆ ಕೆಡಹಿ ಮಾನಿನಿಒದರಿದರು ನೀ ಬಿಡೆಯಲ 3 ಕಿಟ್ಟ ನಾ ನಿನಗೆಷ್ಟು ಹೇಳಲಿದುಷ್ಟ ಬುದ್ಧಿಯ ಬಿಡೆಯಲಇಷ್ಟು ಹರಳಿಸಿ ರಟ್ಟು ಯಾತಕೆಬಿಟ್ಟು ಮಧುರೆಗೆ ಪೋಗೆಲ4 ಕೇಶವ ವಿಠ್ಠಲ ನಿನ್ನನುಕೂಸು ಅಂದವರ್ಯಾರಲೊ - ಹಸುಗೂಸು ಅಂದವರ್ಯಾರಲೊದೇಶದೊಳಗೆ ವಾಸವಾಗಿಹ ಬೇಲೂರು ಚೆನ್ನಕೇಶವ 5
--------------
ಕನಕದಾಸ