ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೋಧ ನುಡಿಗಳು | ಹೀನ ಮನುಜರಿಗ್ಯಾತಕೆ | ಪಾದ ಕಮಲಧ್ಯಾನವುಳ್ಳ ಸುಜನರಿಗಲ್ಲದೇ ಪ ಕಾಣದವಗ ಕನ್ನಡಿ ಅದ್ಯಾತಕೆ | ರಾಣಿ ಯಾತಕೆ ಷಂಡಗೆ | ಗೋಣಿಗ್ಯಾತಕೆ ಗವಸಣಿಕೆ ಗೀ | ರ್ವಾಣಗಳೇಕೆ ಗೊರವಗ 1 ಶ್ವಾನಗ್ಯಾತಕ ಇಕ್ಷುದಂಡವು | ಈ ನರಿಗೆ ಊರ್ಯಾತಕೆ | ದೀನಗ್ಯಾತಕೆ ಧರ್ಮವಾರ್ತೆಯು | ವಾನರಕ ಸರ ಮುತ್ತು ಯಾತಕೆ 2 ಬುತ್ತಿಗಳ್ಳರಿಗ್ಯಾಕೆ ವೃತಗಳು | ಕತ್ತಿಗ್ಯಾತಕೆ ಕಸ್ತೂರಿ | ಕರ್ತ ಮಹಿಪತಿ ನಂದನುಸುರಿದ | ಚಿತ್ತ ಶುದ್ಧಿಯ ಪಡಿಯದವರಿಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪ ನೀ ಕಮಲಮುಖಿ ಆಋವೈರಿಯ ನೇಕ ಮೈಯ್ಯಾಳು ಸುತ್ತಿಕೊಂಡು ವಿ ವೇಕವಿಲ್ಲದೆ ವಿಷವನುಂಡ ಪಿನಾಕಧರÀನಿಗೆ ಸೋಲುವರೆ ನೀ ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ. ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ ಮೆರೆವ ಸ್ಮಶಾನ ಮಂದಿರಕನುವಾಗಿ ಮರುಲು ಭೂತ ಪಿಶಾಚ ಯಕ್ಷರ ನೆರವಿಯಲಿ ಕುಣಿಕುಣಿದು ಬ್ರಹ್ಮನ ಶಿರವಿಡಿದು ತಿರಿದುಂಬ ಗೊರವಗೆ ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ 1 ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ ಕುಂಡಲಿಗಳಾ ಧರಿಸಿರುವನ ನೋಡಿ ಖಂಡ ಪರಶುವೆಂದು ಅವನ ಕೊಂಡಾಡಿ ಧಿಂಡೆಯಾಗಿಹ ಪ್ರಾಯದವಳು ನೀ ನೀನವನನೊಲಿದೆ ಪ್ರ ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ 2 ಕರದಿ ತ್ರಿಶೂಲ ಧಮರುಗಳ ಧರಿಸಿರುವಾ ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ ಹಿರಿಯತನಕೆ ವೃಷಭವನೇರಿ ಬರುವಾ ಶಿರಿಯ ಹೊಗಾಡಿ ಫಕೀರನಂತಿರುವಾ ವಿರಚಿಸಿದ ಲೀಲಾವಿನೋದದ ಪರತರ ಶ್ರೀ ಪ್ರಣವರೂಪನ ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ 3
--------------
ಭಟಕಳ ಅಪ್ಪಯ್ಯ